ಮನೋರಂಜನೆ

‘ಡಿ ಬಾಸ್’ ನಿರ್ಮಿಸಿದ್ದ ದಾಖಲೆಯನ್ನ ಐದೇ ದಿನದಲ್ಲಿ ಉಡೀಸ್ ಮಾಡಿದ ‘ಅತಿರಥ’ ಚೇತನ್.

ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ, ಬಂದ ದುಡ್ಡಿನ ಲೆಕ್ಕ ಬರೆಯುತ್ತಾ ಕೂರುವ ಹೀರೋಗಳ ನಡುವೆ ಅನೇಕ ಸಾಮಾಜಿಕ ಸಮಸ್ಯೆಗಳು ಮತ್ತು ಶೋಷಿತರ ನೋವಿಗೆ ಮಿಡಿಯುತ್ತಾ ಬಂದಿರುವ ನಟ ಚೇತನ್.. ಕಮರ್ಷಿಯಲ್ ಹೀರೊ ಆಗೋಕೆ ಬೇಕಿರೋ ಹೈಟು, ಪರ್ಸನಾಲಿಟಿ, ಅಂದ-ಚಂದವೆಲ್ಲಾ ಇದ್ದರೂ ನಟನೆಯಿಂದ ದೂರ ಉಳಿದು ಹೋರಾಟಗಳಲ್ಲಿಯೇ ಹೆಚ್ಚು ತಲ್ಲೀನರಾಗಿರುವ ನಟ ಚೇತನ್ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ.

 

 

ಹೌದು, ಇತ್ತೀಚಿಗೆ ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರ ಹಿಂದಿಗೆ ಡಬ್ಬಿಂಗ್ ಆಗಿ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು. ಹಿಂದಿ ಅವತರಣಿಕೆಯ ‘ಚಕ್ರವರ್ತಿ’ಗೆ ಪ್ರೇಕ್ಷಕರು ಕೂಡ ಅತ್ಯುತ್ತಮವಾಗಿ ರೆಸ್ಪಾನ್ಸ್ ನೀಡಿದ್ದರು.. ಸೆಪ್ಟೆಂಬರ್ 03ನೇ ತಾರೀಕಿನಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಈ ಚಿತ್ರ ಈವರೆಗೂ 1.14 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ.. ಚಕ್ರವರ್ತಿಗೆ ಹಿಂದಿಯಲ್ಲಿ ಸಿಕ್ಕಿದ್ದ ಈ ಪರಿ ಪ್ರತಿಕ್ರಿಯೆ ಕಂಡು ಎಲ್ಲರೂ ಹುಬ್ಬೇರಿಸಿಕೊಂಡಿದ್ದರು. ಆದರೆ ಈ ದಾಖಲೆಯನ್ನು ನಟ ಚೇತನ್ ಕೇವಲ ಐದೇ ದಿನಗಳಲ್ಲಿ ಅಳಿಸಿಹಾಕಿದ್ದಾರೆ..

ಕಳೆದ ವರ್ಷ ಚೇತನ್ ಮುಖ್ಯ ಭೂಮಿಕೆಯಲ್ಲಿ ‘ಅತಿರಥ’ ಎಂಬ ಸಿನಿಮಾ ಮೂಡಿಬಂದಿತ್ತಲ್ಲಾ, ಆ ಸಿನಿಮಾ ಕೂಡ ಹಿಂದಿಗೆ ಡಬ್ ಆಗಿ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೂ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದು ‘ಚಕ್ರವರ್ತಿ’ ಪಡೆದುಕೊಂಡಿರುವ ವೀಕ್ಷಣೆಗಳನ್ನ ಕೇವಲ ಐದೇ ದಿನಗಳಲ್ಲಿ ಹಿಮ್ಮೆಟ್ಟಿ ಮುನ್ನುಗ್ಗುತ್ತಿದೆ.. ಅತಿರಥ ಹಿಂದಿ ಡಬ್ ಚಿತ್ರ ಸೆಪ್ಟೆಂಬರ್ 09ನೇ ತಾರೀಕಿನಂದು ಬಿಡುಗಡೆಯಾಗಿದ್ದು ಈವರೆಗೂ 1.16ಕೋಟಿ ವೀಕ್ಷಣೆಗಳನ್ನ ಪಡೆದುಕೊಂಡಿದೆ.. ಈ ಮೂಲಕ ಚಕ್ರವರ್ತಿಯ ದಾಖಲೆಯನ್ನ ಅಳಿಸಿಹಾಕಿದೆ..

ಒಟ್ಟಿನಲ್ಲಿ ನಮ್ಮ ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆಗಿ ಈ ಪರಿ ದಾಖಲೆಯ ಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿರುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top