ಮನೋರಂಜನೆ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ Rapper ಚಂದನ್​ ಶೆಟ್ಟಿ,ಅವರ ಮನದಾಸೆ ಬಿಚ್ಚಿಟ್ಟಿದು ಹೀಗೆ

ಬಿಗ್ ಬಾಸ್ ಶೋ ವಿನ್ ಆದ ನಂತರ ರ್ಯಾಪರ್ ಚಂದನ್ ಶೆಟ್ಟಿಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಇವೆಂಟ್, ಟಿವಿ ಷೋ ಸೇರಿದಂತೆ ಅನೇಕ ಆಫರ್ ಗಳು ತನ್ನ ಮನೆ ಬಾಗಿಲ ಬಳಿಗೆ ಬರುತ್ತಿವೆ.ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ಪ್ರಚಾರಗಳು ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ. ಕನ್ನಡ ಬಿಗ್ ಬಾಸ್-೫ ಆವೃತ್ತಿಯಲ್ಲಿ ಕನ್ನಡದ ರ‍್ಯಾಪರ್ ಖ್ಯಾತಿಯ ಚಂದನ್ ಶೆಟ್ಟಿ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡು ಹೊರಬಂದ ಚಂದನ್ ಶೆಟ್ಟಿ ಮೇಲೆ ಅಭಿಮಾನದ ಹೊಳೆಯೇ ಹರಿಯುತ್ತಿದೆ .ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಚಂದನ್ ಹಾಡುಗಳಿಗೆ ತಲೆ ತೂಗುವವರೇ ಇಲ್ಲ.

ಮೈಸೂರಿನ ಬಸ್ ಸ್ಟಾಪ್ ಪಕ್ಕದಲ್ಲಿರುವ ಪಬ್ ಒಂದಕ್ಕೆ ಮೊದಲ ಬಾರಿಗೆ ಹೋಗಿದ್ದರಂತೆ ಚಂದನ್ ಶೆಟ್ಟಿ ,ತಮ್ಮ ಗಿಟಾರ್ ಅನ್ನು ಹೊತ್ತುಕೊಂಡು ಒಳನಡೆದಾಗ ಬರಿ ಇಂಗ್ಲಿಷ್ ಹಾಡುಗಳು ಪ್ಲೇ ಮಾಡಲಾಗಿತ್ತಂತೆ .ಆಗ ಡಿ.ಜೆ ಯವರನ್ನು ಕನ್ನಡ ಹಾಡು ಹಾಕಲು ಕೇಳಿದಾಗ ಆತ ಒಪ್ಪಲಿಲ್ಲವಂತೆ , ಮೈಸೂರು ನಮ್ಮದೇ ಊರು ಇಲ್ಲಿ ನಾವು ಕನ್ನಡ ಕೇಳಿದರೆ ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂದು ಚಂದನ್ ಶೆಟ್ಟಿ ಗೆ ಬೇಸರವಾಯಿತಂತೆ ಮತ್ತೆ ಮತ್ತೆ ಕನ್ನಡ ಹಾಡು ಕೇಳಲು ಮುಂದಾದಾಗ ಪಬ್ ನಲಿದ್ದ ಬೌನ್ಸರ್ ಗಳು ಚಂದನ್ ಶೆಟ್ಟಿಯವರನ್ನು ಹೊರಗೆ ಹಾಕಿದರಂತೆ ಈ ಘಟನೆಯಿಂದ ಮುಂದೆ ನಾನೇ ಕನ್ನಡ ಪಾರ್ಟಿ ಹಾಡುಗಳನ್ನು ಮಾಡಿ ಪಬ್ ಗಳಲ್ಲಿ ಎಲ್ಲ ಕಡೆ ಪ್ಲೇ ಮಾಡಬೇಕೆಂದು ನಿರ್ಧಾರಮಾಡಿದರಂತೆ ,ಅಲ್ಲಿಂದ ಅವರ ಕಿಚ್ಚು ಶುರುವಾಯಿತಂತೆ.

 

 

 

ಚಂದನ್ ಶೆಟ್ಟಿ ಯವರು ಬೆಂಗಳೂರಿನ ನಾಗರಬಾವಿಯಲ್ಲಿನ ತಮ್ಮ ನಿವಾಸದಲ್ಲಿ ತಮ್ಮ ಫ್ಯಾನ್ಸ್ ಜೊತೆ ಅವರ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.ಈ ಬರ್ತ್ಡೇ ಪಾರ್ಟಿ ಗೆ ಚಂದನ್ ಬೆಸ್ಟ್ ಫ್ರೆಂಡ್ ಮೈಸೂರಿನ ನಿವೇದಿತಾ ಗೌಡ ಹಾಗೂ ಅವರ ಪೋಷಕರು ಆಗಮಿಸಿದ್ದಾರೆ ,ಈ ಸಂದರ್ಭದಲ್ಲಿ ಮಾತನಾಡಿದ ಚಂದನ್ ಶೆಟ್ಟಿ ಬಿಗ್‍ಬಾಸ್ ನನಗೆ ಯೂ ಟರ್ನ್ ಕೊಟ್ಟಿದೆ. ಜನ ನನ್ನನ್ನು ಗುರುತಿಸಿ, ನನ್ನ ಸಾಂಗ್ ಗಳನ್ನು ಇಷ್ಟ ಪಟ್ಟಿದ್ದಾರೆ. ಇಷ್ಟು ದಿನ ನನ್ನ ಬರ್ತ್ ಡೇ ಲಿಮಿಟೆಡ್ ಆಗಿತ್ತು. ಇದೀಗ ಇಂದು ನಾನು ಅಭಿಮಾನಗಳ ಜೊತೆ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದೇನೆ. ಅತೀ ಶೀಘ್ರದಲ್ಲಿ ಹೊಸ ಆಲ್ಬಂ ಸಾಂಗ್ ಬಿಡುಗಡೆ ಮಾಡೋದಾಗಿ ಹೇಳಿದ್ರು.ಈ ಹೊಸ ಆಲ್ಬಂ ನಲ್ಲಿ 5 ಸಾಂಗ್ ರಿಲೀಸ್ ಆಗುತ್ತಿದೆ

ದೊಡ್ಡ ಆಡಿಯೋ ಕಂಪನಿಯವರು ನನ್ನ ಆಲ್ಬಂ ನ ಖರೀದಿಸಿದ್ದಾರೆ ಅಂದ ಅವರು ಅತೀ ಶೀಘ್ರದಲ್ಲೇ ಕಂಪೆನಿ ಹೆಸರು ಹೇಳುವುದಾಗಿ ಹೇಳಿದ್ದಾರೆ ,ಇದೇ ವೇಳೆ ಸಿನಿಮಾಗೆ ಎಂಟ್ರಿ ಕೊಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಚಂದನ್ ಇಂಟರ್ಸ್ಟ್ ಇಲ್ಲ ಎಂದು ಹೇಳಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top