ಸಮಾಚಾರ

ಮೈತ್ರಿ ಸರ್ಕಾರ ಬಿದ್ದರೂ ಬಿಎಸ್​ವೈ ಮುಖ್ಯಮಂತ್ರಿಯಾಗುವುದಿಲ್ಲ- ಹೊಸ ಬಾಂಬ್ ಸಿಡಿಸಿದ HM ರೇವಣ್ಣ.

“ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗೋಲ್ಲ. ಹಾಗೇನಾದರೂ ಮೈತ್ರಿ ಸರ್ಕಾರ ಬಿದ್ದರೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಬರಬಹುದು ಅಂತಾ ಬಿಜೆಪಿಯ ನಾಯಕರೇ ನನ್ನ ಬಳಿ ಹೇಳಿದ್ದಾರೆ. ಸಮಯ ಬಂದಾಗ ಹೀಗೆ ಹೇಳಿದ ನಾಯಕರ ಹೆಸರನ್ನು ಹೇಳುತ್ತೇನೆ” ಎಂದು ಲೋಕೋಪಯೋಗಿ ಸಚಿವ ಎಚ್​.ಡಿ.ರೇವಣ್ಣ ಹೇಳಿದ್ದಾರೆ.

 

 

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ” ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ನಮ್ಮ ಸರ್ಕಾರ ಪೂರ್ಣಾವಧಿ ಪೂರೈಸುತ್ತದೆ. ನಾವು ಸಿದ್ದರಾಮಯ್ಯನವರ ಜತೆ ಚೆನ್ನಾಗಿಯೇ ಇದ್ದೇವೆ.. ಲೋಕೋಪಯೋಗಿ ಇಲಾಖೆಯಲ್ಲಿ ಏನೂ ಕೆಲಸ ನಡೆಯುತ್ತಿಲ್ಲ, ಸರ್ಕಾರ ಇನ್ನೂ ಟೇಕಾಫ್​ ಆಗಿಲ್ಲ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಇದಕ್ಕೆ ಉತ್ತರ ನೀಡೋಕೆಯೇ ಈ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ” ಎಂದು ಗುಡುಗಿದರು.

ಪ್ರಜ್ವಲ್ ರೇವಣ್ಣರ ಅತ್ತೆ ಕಾಳಮ್ಮರಿಂದ ಹಾಸನದಲ್ಲಿ ಭೂಕಬಳಿಕೆ ಎಂಬ ಮಾಜಿ ಸಚಿವ ಎ.ಮಂಜು ಆರೋಪಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ. ನಾವು ಸರಕಾರಿ ಜಮೀನು ಕಬಳಿಸಿದರೆ ಮುಟ್ಟುಗೋಲು ಹಾಕಲಿ. ದೇವೇಗೌಡರ ಕುಟುಂಬದ ಮೇಲೆ ಹಲವು ಆರೋಪಗಳನ್ನು ಮಾಡುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಾಗುತ್ತಾ ? ನಾವು ಅಧಿಕಾರಕ್ಕೆ ಆಸೆ ಪಡಲ್ಲ. 10 ವರ್ಷ ವಿರೋಧ ಪಕ್ಷದಲ್ಲಿ ಇದ್ದೆವು. ಪ್ರಧಾನಿ ಸ್ಥಾನ ಬಿಟ್ಟು ಬಂದವರು ನಮ್ಮ ತಂದೆ. ಇದೆಲ್ಲದಕ್ಕೂ ನಾವು ಹೆದರಲ್ಲ ಎಂದು ರೇವಣ್ಣ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top