ಅರೋಗ್ಯ

ಬಾಳೆ ಹಣ್ಣು , ಎಲೆಯ ಉಪಯೋಗಗಳು ಗೊತ್ತು ಆದ್ರೆ ಬಾಳೆ ಹೂವಿನ 9 ಆರೋಗ್ಯಕಾರಿ ಗುಣಗಳು ಗೊತ್ತಾ.

ಬಾಳೆ ಹೂವಿನಿಂದ ಆರೋಗ್ಯಕ್ಕೆ ಲಾಭಗಳು.

 

 

ಬಾಳೆ ಹಣ್ಣಿನ ಗಿಡದ ಹೂವನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭಗಳು.ಇದನ್ನು ಉಪಯೋಗಿಸಿ ಕೊಳ್ಳುವವರಿಗಿಂತ ಬಿಸಾಡುವವರೆ ಹೆಚ್ಚು ಇದನ್ನು ಏಷ್ಯಾ ಖಂಡದಲ್ಲಿ ಮಾತ್ರ ಉಪಯೋಗಿಸುವುದನ್ನು ಕಾಣಬಹುದಾಗಿದೆ.ಹೆಣ್ಣು ಮಕ್ಕಳಲ್ಲಿ ಪ್ರತೀ ತಿಂಗಳು ಬರುವ ಮುಟ್ಟನ್ನು ನಿಯಂತ್ರಿಸುತ್ತದೆ.ಹಾಲುಣಿಸುವ ತಾಯಂದಿರಿಗೂ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಒಂದು ಉತ್ತಮ ಆಹಾರ ವಾಗಿದೆ.ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ರಕ್ತ ಹೀನತೆಯನ್ನು ತಡೆಗಟ್ಟುತ್ತದೆ.ನಮ್ಮ ಕಿಡ್ನಿಯೂ ಉತ್ತಮ ರೀತಿಯಲ್ಲಿ ಕೆಲಸ ಅಥವಾ ಕಾರ್ಯವನ್ನು ನಿರ್ಮಿಸುವುದಕ್ಕಾಗಿ ಸಹಕಾರಿಯಾಗುತ್ತದೆ.ನಮ್ಮ ದೇಹದಲ್ಲಿ ಮಲಬದ್ಧತೆಯನ್ನು ನಿವಾರಿಸುತ್ತದೆ.ಅಲ್ಸರ್ ನಂತಹ ಕಾಯಿಲೆಯನ್ನು ನಿವಾರಿಸುತ್ತದೆ.ಅಧಿಕ ರಕ್ತದೊತ್ತಡ ವನ್ನು ಕಡಿಮೆಗೊಳಿಸಿ ನಿಯಂತ್ರಣದಲ್ಲಿಡುತ್ತದೆ.ಯಾವುದೇ ಸೋಂಕನ್ನು ನಿವಾರಿಸಲು ಶಕ್ತಿಯಿದೆ.ವಿಟಮಿನ್ಸ್ ಮತ್ತು ಮಿನರಲ್ ಗಳು ಇದರಲ್ಲಿ ಹೇರಳವಾಗಿವೆ.

ಬಾಳೆ ಹಣ್ಣಿನ ಗಿಡದ ಹೂವಿನ ಅಡುಗೆ ತಯಾರಿಸುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ಎರಡು ಚಮಚ ಎಣ್ಣೆಯನ್ನು ಹಾಕಿ ಕಾಯಿಸಿ.ನಂತರ ಕಾದ ಎಣ್ಣೆಗೆ ಸ್ವಲ್ಪ ಸಾಸಿವೆಯನ್ನು ಹಾಕಿ.ಸಾಸಿವೆಯೂ ಸಿಡಿದ ನಂತರ ಹಚ್ಚಿಟ್ಟುಕೊಂಡಿರುವ ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಉರಿಯಿರಿ.ಈರುಳ್ಳಿ ಕೆಂಪಗೆ ಆದ ನಂತರ ಸಣ್ಣದಾಗಿ ಹಚ್ಚಿಟ್ಟುಕೊಂಡಿರುವ ಬಾಳೆ ಹಣ್ಣಿನ ಹೂವನ್ನು ಹಾಕಿ ಚೆನ್ನಾಗಿ ಬೇಯಿಸಿ .ಬೆಂದ ನಂತರ ಹರಿಶಿನ,ಉಪ್ಪು, ಇಂಗು,ಕರಿಬೇವಿನ ಎಲೆ ಮತ್ತು ಧನ್ಯಾ ಪುಡಿಯನ್ನು ಹಾಕಿ ರುಚಿಗೆ ತಕ್ಕಷ್ಟು.ಸ್ವಲ್ಪ ನೀರನ್ನು ಹಾಕಿ ಪಾತ್ರೆಯನ್ನು ಮುಚ್ಚಿ ಹಾಗೆಯೇ ಹತ್ತು ನಿಮಿಷ ಬೇಯವ ತನಕ ಬಿಟ್ಟುಬಿಡಿ.ಪೂರ್ತಿಯಾಗಿ ಬೆಂದ ನಂತರ ತುರಿದು ಇಟ್ಟುಕೊಂಡಿರುವ ತೆಂಗಿನಕಾಯಿ ಯನ್ನು ಚೆನ್ನಾಗಿ ಮಿಶ್ರಣ ಮಾಡಿ.ಈಗ ಬಾಳೆ ಹೂವಿನ ಪಲ್ಯವೂ ತಿನ್ನಲು ತಯಾರಾಗಿದೆ.ಇದನ್ನು ನೀವು ದೋಸೆ, ಚಪಾತಿ, ಪೂರಿ, ಇಲ್ಲವೇ ಅನ್ನದ ಜೊತೆಯಲ್ಲಿ ಕೂಡ ಕಲಸಿಕೊಂಡು ತಿನ್ನಬಹುದು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top