ಅರೋಗ್ಯ

ನೀವು ರಾತ್ರಿ ಮಲಗೋಕಿಂತ ಮುಂಚೆ ಸ್ನಾನ ಮಾಡ್ತೀರಾ ,ಆಗದ್ರೆ ತಪ್ಪದೆ ಇದನ್ನ ಓದಿ

ನೀವು ರಾತ್ರಿ ಮಲಗುವ ಮುನ್ನ ಸ್ನಾನ ಮಾಡುತ್ತೀರಾ ? ಹಾಗಾದರೆ ಇದನ್ನು ಒಮ್ಮೆ ಓದಿ.
ನೈರ್ಮಲ್ಯದ ದೃಷ್ಟಿಯಿಂದ ಒಂದೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಸಹ ಸ್ನಾನ ಒಳ್ಳೆಯದು. ಪ್ರತಿಯೊಬ್ಬರೂ ಪ್ರತಿದಿನ ಸ್ನಾನ ಮಾಡಬೇಕು. ಸ್ನಾನದ ವಿಚಾರದಲ್ಲಿ ಆಲೋಚನೆಗಳು ಬೇರೆ ಬೇರೆಯಾಗಿದೆ. ಕೆಲವರು ಬೆಳಗ್ಗೆ ಸ್ನಾನ ಮಾಡಿದರೆ ಇನ್ನೂ ಕೆಲವರು ರಾತ್ರಿಯ ಸಮಯದಲ್ಲಿ ಸ್ನಾನ ಮಾಡಿ ಮಲಗುತ್ತಾರೆ .

 

 

 

ಬೆಳಗ್ಗೆ ಸಮಯದ ಅಭಾವದಿಂದಾಗಿ ರಾತ್ರಿ ಸ್ನಾನ ಮಾಡಿ ಮಲಗುವವರ ಸಂಖ್ಯೆ ಹೆಚ್ಚಾಗಿದೆ. ರಾತ್ರಿ ಸ್ನಾನ ಮಾಡಿದರೆ ಒಳ್ಳೆಯದೋ ? ಇಲ್ಲ ಬೆಳಗ್ಗೆ ಸ್ನಾನ ಮಾಡಿದರೆ ಒಳ್ಳೆಯದೋ ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತದೆ.
ಇನ್ನೂ ಧರ್ಮದ ಪ್ರಕಾರ ಬೆಳಗಿನ ಸಮಯದಲ್ಲಿ ಸ್ನಾನ ಮಾಡುವುದು ಬಹಳ ಒಳ್ಳೆಯದು. ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿದರೆ ನಮ್ಮ ದೇಹದಲ್ಲಿ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ನಂಬಲಾಗಿದೆ.
ವಿಜ್ಞಾನಿಗಳು ಕೂಡ ಇದನ್ನೇ ಹೇಳುತ್ತಾರೆ.
ಹಾವರ್ಡ್ ವಿಶ್ವವಿದ್ಯಾನಿಲಯದ ಸೈಕಾಲಜಿಯ ಪ್ರೊಫೆಸರ್ ಶೆಲ್ಲಿ ಕಾರ್ಸನ್ ಪ್ರಕಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿದರೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆಯಂತೆ , ಸ್ನಾನ ಮಾಡುವುದರಿಂದ ದೇಹ ಉತ್ಸಾಹ ಗೊಳ್ಳುತ್ತದೆ ,ದಿನದ ಕೆಲಸವನ್ನು ಆರಾಮವಾಗಿ ಉತ್ಸಾಹದಿಂದ ಮುಗಿಸಲು ಸಾಧ್ಯವಾಗುತ್ತದೆ.

ರಾತ್ರಿ ಸ್ನಾನ ಮಾಡುವುದು ಕೆಟ್ಟದ್ದೇನಲ್ಲ , ಆದರೆ ಬೆಳಗ್ಗಿನಿಂದ ಕೆಲಸ ಮಾಡಿ ಸುಸ್ತಾದವರಿಗೆ ರಾತ್ರಿ ಸ್ನಾನ ಮಾಡಿದರೆ ಹಿತವೆನಿಸುತ್ತದೆ. ಸ್ನಾನ ಮಾಡುವುದರಿಂದ ಬೆವರು ,ತುರಿಕೆ ,ಕಿರಿಕಿರಿ ಕಡಿಮೆಯಾಗಿ ಸುಖಕರ ನಿದ್ರೆ ನಿಮ್ಮನ್ನು ಆವರಿಸುತ್ತದೆ. ರಾತ್ರಿ ಯಾವಾಗಲೂ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಉತ್ತಮ, ನಿದ್ರೆಯೂ ಚೆನ್ನಾಗಿ ಬರುತ್ತದೆ.
ಭಾರತದಂತಹ ದೇಶದಲ್ಲಿ ಬೆಳಗ್ಗೆ ಹಾಗೂ ರಾತ್ರಿ ಎರಡು ಬಾರಿ ಸ್ನಾನ ಮಾಡುವುದು ಕೂಡ ಒಳ್ಳೆಯದು. ಬೆಳಗ್ಗೆ ಸ್ನಾನ ಮಾಡಿದರೆ ಮನಸ್ಸು ದೇಹವನ್ನು ಫ್ರೆಶ್ ಮಾಡಿದರೆ, ರಾತ್ರಿ ಸ್ನಾನ ಸುಖ ನಿದ್ರೆಗೆ ಕಾರಣವಾಗುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ .ಆದ್ದರಿಂದ ಬೆಳ್ಳಗ್ಗೆ ಮತ್ತು ರಾತ್ರಿ ಎರಡೂ ಬಾರಿ ಸ್ನಾನ ಮಾಡಿದರು ಕೂಡ ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top