ಅರೋಗ್ಯ

ಈ ಹತ್ತು ಆಹಾರವನ್ನು ಯಾವತ್ತಿಗೂ ಜೊತೆಯಾಗಿ ತಿನ್ನಬೇಡಿ.

ಆಹಾರ ಸಂಯೋಜನೆಯಲ್ಲಿ ಯ ಬಗ್ಗೆ ನಿಮಗೆಷ್ಟು ಗೊತ್ತು?ಯಾವ ಹಣ್ಣಿನ ಜೊತೆ ಯಾವ ಆಹಾರ ತಿನ್ನಬೇಕು,ಯಾವುದನ್ನು ತಿನ್ನಬಾರದು. ಇದನ್ನು ತಿಳಿದುಕೊಂಡು ನೀವು ಇದನ್ನು ಪಾಲಿಸಿ. ಯಾವುವು ಅವು ನೋಡೋಣ ಬನ್ನಿ.

ಹಾಲಿನ ಉತ್ಪನ್ನಗಳು ಒಣ ದ್ರಾಕ್ಷಿ, ಮೂಲಂಗಿ:ಹಣ್ಣುಗಳು ನಮ್ಮ ಶರೀರದಲ್ಲಿ ಬೇಗ ಜೀರ್ಣವಾಗುತ್ತವೆ ಆದರೆ ಹಾಲು ಹಾಗೂ ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಅದಕ್ಕೆ ಪಕ್ಕಾ ಉಲ್ಟಾ. ನೀವು ಹಾಲು ಮತ್ತು ಹಣ್ಣುಗಳನ್ನು ಜೊತೆಯಾಗಿ ಅಥವಾ ಒಂದರ ನಂತರ ಇನ್ನೊಂದು ತಿಂದರೆ ಅದು ಹಾಲನ್ನು ಮೊಸರು ಮತ್ತು ಆಮ್ಲಿಯ ಮಾಡುತ್ತದೆ.ಮೂಲಂಗಿ ಅಧಿಕ ಉಷ್ಣಾಂಶ ಒಂದಿರುವ ಪದಾರ್ಥ ಆದರೆ ಹಾಲು ,ಹಾಲಿನ ಉತ್ಪನ್ನಗಳು ನಮ್ಮ ದೇಹಕ್ಕೆ ತಂಪು. ಅದಕ್ಕೋಸ್ಕರ ಇವೆರಡನ್ನೂ ಜೊತೆಯಾಗಿ ಯಾವತ್ತೂ ತಿನ್ನಬಾರದು.

ಮೀನು ಮತ್ತು ಹಾಲು:ಮೀನು ಮತ್ತು ಹಾಲನ್ನು ಜೊತೆಗೆ ತಿಂದರೆ ದೇಹಕ್ಕೆ ಹಾನಿಕಾರಕ.ಮತ್ತೆ ಅದೇ ಮೇಲೆ ಹೇಳಿದ ಹಾಗೆ ಮೀನು ಜಾಸ್ತಿ ಉಷ್ಣಾಂಶ ಹೊಂದಿದೆ ಅದೇ ಹಾಲು ತಂಪು.ಇವೆರಡನ್ನೂ ಜೊತೆಗೆ ಅಥವಾ ಒಂದಾದ ಮೇಲೆ ಇನ್ನೊಂದನ್ನು ತಿಂದರೆ ನಮ್ಮ ಶರೀರದಲ್ಲಿ ವಿಷವಾಗಿ ಮಾರ್ಪಾಡಾಗುತ್ತದೆ ಮತ್ತು ನಮ್ಮ ಶರೀರದ ವ್ಯವಸ್ಥೆಯಲ್ಲಿ ನಿರ್ಬಂಧಗಳನ್ನು ತರುತ್ತದೆ.

ಹಾಲು ಮತ್ತು ಉಪ್ಪು:ಹಾಲು ಅಂಗಾಂಗಗಳನ್ನು ಪೋಷಣೆ ಮಾಡುವ ಆಹಾರ ಆದರೆ ಉಪ್ಪು ಸಂಕೋಚಕ.ಇಂತಹ ಪದಾರ್ಥಗಳನ್ನು ಒಟ್ಟೊಟ್ಟಿಗೆ ತಿನ್ನುವುದನ್ನು ತಡೆಯಿರಿ. ಇದು ಬಹಳ ವ್ಯತಿರಿಕ್ತವಾದದ್ದು.

ತಂಪು ಪಾನೀಯಗಳು ಮತ್ತು ಐಸ್ ಅಥವಾ ಐಸ್ ಹಾಕಿ ಮಾಡಿದ ಪದಾರ್ಥಗಳು ಊಟದ ನಂತರ:

 

 

 

ಸಾಮಾನ್ಯವಾಗಿ ನಾವೆಲ್ಲರೂ ಊಟ ಮಾಡಿದ ನಂತರ ತಂಪು ಪಾನೀಯಗಳನ್ನು ಕುಡಿಯುತ್ತೇವೆ.ಪಾನೀಯಗಳು ಮತ್ತು ತಂಪು ಪಾನೀಯಗಳು ಮತ್ತು ಐಸ್ ಕ್ರೀಮ್ ಗಳನ್ನು ಊಟ ಮಾಡಿದ ತಕ್ಷಣ ತಿನ್ನಬಾರದು ಯಾಕೆಂದರೆ ಜೀರ್ಣಕ್ರಿಯೆಯ ವ್ಯವಸ್ಥೆಗೆ ಅಡೆ ತಡೆದು ಹಾಳು ಮಾಡುತ್ತದೆ.

ಸಂಜೆಯ ನಂತರ ಸಿಹಿತಿಂಡಿಗಳು:ಸಂಜೆಯ ನಂತರ ಯಾವುದೇ ತರದ ಸಿಹಿತಿಂಡಿಗಳು ಮತ್ತು ಮೊಸರನ್ನು ತಿನ್ನಬಾರದು. ಯಾಕೆಂದರೆ ಈ ತರದ ಸಿಹಿ ಪದಾರ್ಥಗಳು ನಮ್ಮ ಶರೀರದ ವ್ಯವಸ್ಥೆಯಲ್ಲಿ ಅಧಿಕ ಲೋಳೆಯನ್ನು ಉತ್ಪತ್ತಿ ಮಾಡುತ್ತವೆ. ಆದ್ದರಿಂದ ಸಿಹಿತಿಂಡಿಗಳನ್ನು ಸಾಯಂಕಾಲದ ನಂತರ ತಿನಬೇಡಿ.

ಬೇಯಿಸಿದ ಜೇನುತುಪ್ಪ:ತಾಜಾ ಜೇನುತುಪ್ಪದಲ್ಲಿ ಯಾವುದೇ ಉಳುಕಿಲ್ಲ ಅದರಲ್ಲಿ ಔಷದೀಯ ಗುಣಗಳು ಗಾಢವಾಗಿ ಅಡಗಿವೆ ತುಂಬಾ ಖಾಯಿಲೆಗಳನ್ನು ಗುಣಪಡಿಸುವ ಅಂಶವನ್ನು ಹೊಂದಿದೆ ಉದಾಹರಣೆಗೆ ಕೆಮ್ಮು, ನೆಗಡಿ.ಆದರೆ ಬೇಯಿಸಿದ ಜೇನುತುಪ್ಪದಲ್ಲಿ ಈ ಗುಣಗಳು ಇರುವುದಿಲ್ಲ.ಜೇನುತುಪ್ಪವು ರಾಸಾಯನಿಕ ವಾಗಿ ಬದಲಾಗಿ ರಾಸಾಯನಿಕ ಗುಣಗಳನ್ನು ಪಡೆದುಕೊಳ್ಳುತ್ತದೆ.ಅದು ಅಂಟು ಪದಾರ್ಥವಾಗಿ ಬದಲಾಗಿ ವಿಷಕಾರಿಯಾಗುತ್ತದೆ. ಆದ್ದರಿಂದ ಯಾರು ಕೂಡ ಜೇನುತುಪ್ಪವನ್ನು ಅಡುಗೆ ಮಾಡಲು ಅಥವಾ ಬಿಸಿ ಮಾಡಲು ಬಳಸಬೇಡಿ.

ತುಪ್ಪ ಮತ್ತು ಜೇನುತುಪ್ಪ:ಜೇನುತುಪ್ಪ ಉಷ್ಣ, ತುಪ್ಪ ತಂಪು.ಆದ್ದರಿಂದ ಇವೆರಡನ್ನೂ ಜೊತೆಯಾಗಿ ತಿನ್ನಬಾರದು. ಜಾಗೃತರಾಗಿರಿ ಇವೆರಡನ್ನೂ ಒಟ್ಟಿಗೆ ತಿನ್ನುವುದರಿಂದ ದೂರವಿರಿ.

ಹಣ್ಣುಗಳ ಜೊತೆ( starchy) ಪಿಷ್ಟ ಆಹಾರ:

 

 

 

ಹಣ್ಣುಗಳನ್ನು ಯಾವತ್ತೂ ಪಿಷ್ಟ ಭರಿತ ಆಹಾರದ ಜೊತೆಗೆ ಸಂಯೋಜನೆ ಮಾಡಿ ತಿನ್ನಬಾರದು.ಹಾಲುಗೆಡ್ಡೆ, ಅನ್ನ,ಕರಿದ ಪದಾರ್ಥಗಳು,ಗಿಣ್ಣು ಇನ್ನೂ ಅನೇಕ ಇವಿಷ್ಟು ಪಿಷ್ಟ ಭರಿತ ಆಹಾರ. ಹಣ್ಣುಗಳು ಸುಲಭವಾಗಿ ಬೇಗನೇ ಜೀರ್ಣವಾಗುತ್ತವೆ. ಆದರೆ ಪಿಷ್ಟ ಭರಿತ ಆಹಾರವು ತುಂಬಾ ಸಮಯ ತೆಗೆದುಕೊಳ್ಳುತ್ತವೆ.

ಧಾನ್ಯಗಳು ಮತ್ತು ಕಲ್ಲಂಗಡಿ:ಧಾನ್ಯಗಳು ಜೀರ್ಣವಾಗಲು ತುಂಬಾ ಬಹಳ ಸಮಯ ತೆಗೆದುಕೊಳ್ಳುತ್ತವೆ. ಆದರೆ ಕಲ್ಲಂಗಡಿ ಬೇರೆಯ ಹಣ್ಣಿನ ತರಹ ಸುಲಭವಾಗಿ ಬೇಗನೇ ಜೀರ್ಣವಾಗುತ್ತದೆ.ಅದಕ್ಕೋಸ್ಕರ ಈ ಎರಡನ್ನು ಜೊತೆಯಲ್ಲಿ ಮಾಡಿದ ಆಹಾರ ತಿನ್ನಬಾರದು. ಹಾಗೇನಾದರೂ ಒಟ್ಟಿಗೆ ಸೇವಿಸಿದರೆ ನಮ್ಮ ಜೀರ್ಣ ಕ್ರಿಯೆಯಲ್ಲಿ ಏರು ಪೇರಾಗುತ್ತದೆ.

ಜಾಸ್ತಿ ತೂಕ ವಿರುವ ಆಹಾರ ಮತ್ತು ಕಡಿಮೆ ತೂಕ ವಿರುವ ಆಹಾರ:ಈ ರೀತಿಯ ಸಂಯೋಜನೆಯಲ್ಲಿ ತಿಂದರೆ ಆರೋಗ್ಯಕ್ಕೆ ಹಾನಿಕಾರಕ.ಜೀರ್ಣ ಕ್ರಿಯೆಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ.ಇವೆರಡರಲ್ಲಿ ಯಾವುದಾದರೂ ಒಂದನ್ನು ಮಾತ್ರ ಒಂದೇ ಸಮಯದಲ್ಲಿ ಸೇವಿಸಿ.ಎರಡನ್ನೂ ಒಟ್ಟಿಗೆ ತಿನ್ನಬೇಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top