ಸಮಾಚಾರ

ಕಾಂಗ್ರೆಸ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ-‘ಕೈ’ಗೆ ತೀವ್ರ ಆಘಾತ.

ಕಾಂಗ್ರೆಸ್ ಪಕ್ಷದ ಮತ್ತೊಂದು ಅನುಭವಿ ನಾಯಕನ ವಿಕೆಟ್ ಪತನವಾಗಿದೆ. ಹಾಡು ಇತ್ತೀಚಿನ ವರ್ಷಗಳಲ್ಲಿ ಒಂದಲ್ಲ ಕಾರಣಕ್ಕೆ ರಚ್ಚೆಯಿಡಿದು ಒಬ್ಬರ ಹಿಂದೊಬ್ಬರಂತೆ ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರಲ್ಲಾ ಕಾಂಗ್ರೆಸ್ ಹಿರಿ ತಲೆಗಳು. ಈಗ ಆ ಸಾಲಿಗೆ ಮತ್ತೋರ್ವ ಅನುಭವಿಯ ಸೇರ್ಪಡೆಯಾಗಿದೆ. ಮೇಘಾಲಯದಲ್ಲಿ ಐದು ಬಾರಿ ಸಿಎಂ ಆಗಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಡಿಡಿ ಲಪಾಂಗ್ ಕಾಂಗ್ರೆಸ್ ಪಕ್ಷಕ್ಕೆ ನೋವಿನ ವಿದಾಯ ಘೋಷಣೆ ಮಾಡಿದ್ದಾರೆ.

 

 

ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ಹೊರಗಟ್ಟುವ ನೀತಿಯನ್ನು ಪಕ್ಷವು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಲಪಾಂಗ್ “ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚೆನ ಬೆಳವಣಿಗೆಗಳು ನನಗೆ ತುಂಬಾನೇ ನೋವನ್ನುಂಟು ಮಾಡಿದೆ. ಪಕ್ಷದ ಹಿರಿಯ ನಾಯಕರಿಗೆ, ಅನುಭವಕ್ಕೆ ಸಿಗಬೇಕಾದ ಗೌರವ ಮತ್ತು ಮನ್ನಣೆ ದೊರೆಯುತ್ತಿಲ್ಲ.. ಪಕ್ಷಕ್ಕೆ ನಾವು ಸಲ್ಲಿಸಿರುವ ಸೇವೆ, ನಮ್ಮ ಹಿರಿತನ ಮತ್ತು ಅನುಭವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಹೈಕಮಾಂಡ್ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ತುಂಬಾ ನೋವಿನಿಂದ ನಾನು ಪಕ್ಷ ತೊರೆಯುತ್ತಿದ್ದೇನೆ ” ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಮೇಘಾಲಯದಲ್ಲಿ ಅತ್ಯಂತ ಪ್ರಭಾವಿ ನಾಯಕರಾದ ಲಪಾಂಗ್ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top