ಅರೋಗ್ಯ

ಹೊಳೆಯುವ ಬಿಳಿ ಹಲ್ಲುಗಳಿಗೆ ಇಷ್ಟು ಮಾಡಿದ್ರೆ ಸಾಕು , ನೀವು ಟ್ರೈ ಮಾಡಿ .

ಹೊಳೆಯುವ ಬಿಳಿ ಹಲ್ಲುಗಳು ನಿಮ್ಮದಾಗಬೇಕೇ ಹಾಗಿದ್ದರೆ ಈ ರೀತಿ ಮಾಡಿ ಹಲ್ಲುಗಳು ಬೆಳ್ಳಗಾಗಿ ಬದಲಾಗುತ್ತವೆ.

ನಿಂಬೆ ಮತ್ತು ಉಪ್ಪು ಮಿಶ್ರಣ ವನ್ನು ಬಳಸಿ:

 

 

 

ನಿಂಬೆಯಲ್ಲಿ ಸಿಟ್ರಿಕ್ ಆಮ್ಲ ಇರುತ್ತದೆ ಉಪ್ಪಿನೊದಿಗೆ ಬೆರೆತಾಗ ಇದು ಅದ್ಬುತ ಕೆಲಸ ಮಾಡಿ ನಿಮ್ಮ ಹಲ್ಲುಗಳನ್ನು ಪಳ- ಪಳ ಹೊಳೆಯುವಂತೆ ಮಾಡುತ್ತದೆ..ಬಿಳೀ ಹಲ್ಲುಗಳನ್ನು ಪಡೆಯಲು ನಿಯಮಿತವಾಗಿ ನಿಂಬೆ ಮತ್ತು ಉಪ್ಪು ಮಿಶ್ರಣದಿಂದ ಬ್ರಷ್ ಮಾಡಿರಿ.

ಪ್ರತಿ 3 ತಿಂಗಳಿಗೂಂಮ್ಮೆ ಬ್ರಷ್ ಬದಲಿಸಿರಿ:ಉತ್ತಮ ಪಲಿತಾಂಶ ಪಡೆಯಲು ನಿಯಮೀತವಾಗಿ ಬ್ರಷ್ ಬದಲಿಸುವುದು ಉತ್ತಮ..ಅವದಿಯ ನಂತರ ನಿಮ್ಮ ಬ್ರಷ್ ಕಠಿಣವಾಗುವುದು..ಇದರಿಂದ ಹಲ್ಲುಗಳ ದಂತ ಕವಚವನ್ನು ಹಾಳು ಮಾಡಬಹುದು.

ಮೌತ್ವಾಷ್ , ಕಾಫಿ , ಸೋಡಗಳಿಂದ ಸಾದ್ಯವಾದಷ್ಟು ದೂರವಿರಿ:ಕಾಫಿ , ಸೋಡ ಹಾಗು ಕೆಲವೊಮ್ಮೆ ಮೌತ್ವಾಷ್ ನ ಕೆಲವು ಬ್ರಾಂಡ್ ಗಳ ಬಳಕೆಯಿಂದ ನಿಮ್ಮ ಹಲ್ಲುಗಳ ಮೇಲೆ ಹಳದಿ ಕಲೆಗಳಾಗುವ ಸಾದ್ಯತೆಗಳಿವೆ..ಆದ್ದರಿಂದ ಇವುಗಳಿಂದ ದೂರ ಉಳಿಯುವುದು ಓಳ್ಳೆಯದು.

ಅಂಟಿಬಯೋಟಿಕ್ ಗಳ ಅಧಿಕ ಡೋಸೇಜ್ ಗಳನ್ನು ಆದಷ್ಟು ತಪ್ಪಿಸಿ:ಆಂಟಿಬಯೋಟಿಕ್ ಗಳ ಅಧಿಕ ಡೋಸೇಜ್ ಗಳಿಂದ ಹಲ್ಲುಗಳು ವರ್ಣರಹಿತ ವಾಗುವ ಅಪಾಯವಿದೆ..ಆದ್ದರಿಂದ ಅಂಟಿಬಯಯೋಟಿಕ್ ಗಳ ಅನಗತ್ಯ ಸೇವನೆ ತಪ್ಪಿಸಿ..

ಪ್ರಬಲ ಪುದೀನಯುಕ್ತ ಟೂತ್ ಪೇಷ್ಟ್ ಬಳಸಿ:ಪುದೀನ ಹಲ್ಲುಗಳನ್ನು ಬಿಳೀ ಮಾಡಲು ಸಹಕಾರಿ ಎಂದು ಸಾಬೀತಾಗಿದೆ..ಇದು ತಕ್ಷಣ ಫಲಿತಾಂಶ ತೋರುವುದಿಲ್ಲಾ ಆದರೆ ಕೆಲವು ದಿನಗಳ ಸತತ ಬಳಕೆಯಿಂದ ಖಂಡಿತವಾಗಿಯು ಧನಾತ್ಮಕ ಫಲಿತಾಂಶ ಕಂಡುಬರುತ್ತದೆ.

ತರಕಾರಿಗಳು:ಒಂದು ರೀತಿಯ ಕೂಸುಗಡ್ಡೆ , ಕ್ಯಾರೆಟ್ , ಕುಂಬಳಕಾಯಿ ಇತ್ಯದಿಗಳಲ್ಲೀ ಜೀವಸತ್ವಗಳು ಸಮೃದ್ದವಾಗಿರುವುದರಿಂದ ಇದು ದಂತ ಕವಾಚ ದ ರಚನೆಗೆ ಸಹಾಯಕಾರಿಯಾಗಿವೆ..ಇವುಗಳನ್ನು ಹಸಿಯಾಗಿ ತಿನ್ನುವುದರಿಂದ ಒಸಡುಗಳಿಗೆ ಸ್ವಾಭಾವಿಕವಾಗಿ ಹಲ್ಲುಗಳಿಗೆ ಮಸಾಜ್ ಆಗುವುದು.ಹಲ್ಲಿನ ನಡುವಿನ ಭಾಗವು ಸ್ವಚ್ಚವಾಗುವುದು , ಮತ್ತು ಹಲ್ಲುಗಳ ಬಿಳುಪು ವೃದ್ಧಿಸುವುದು.

ನಿಮ್ಮ ಹಲ್ಲುಗಳ ಕ್ಯಾಲ್ಷಿಯಂಯುಕ್ತ ಆಹಾರ ಸೇವನೆ ಮುಂದುವರಿಸಿ:

 

 

 

ಕ್ಯಾಲ್ಷಿಯಂಯುಕ್ತ ಆಹಾರ ಸೇವನೆಯಿಂದ ನಿಮ್ಮ ಹಲ್ಲು ಬಲಪಡಿಸುವಲ್ಲಿ ಮತ್ತು ಹಲ್ಲುಗಳ ರಚನೆಯನ್ನು ನಿರ್ವಹಿಸುವಲ್ಲಿ ಸಹಾಯವಾಗುತ್ತದೆ.

ಅನುವಂಶಿಯತೆ ಕಾರಣ:ಅನುವಂಶಿಕ ಕಾರಣಗಳಿಂದಲೂ ಅನೇಕಬಾರಿ ಹಲ್ಲುಗಳ ಮೇಲೆ ಕಲೆಗಳಾಗುತ್ತವೆ. ಆದರೆ ಈ ಹೆಚ್ಚಿನ ವಿಷಯಗಳು ತಿಳಿದಿರುವುದಿಲ್ಲ..ಆದ್ದರಿಂದ ದಂತವೈದ್ಯರ ಸಹಾಯದಿಂದ ಹಲ್ಲಿನ ಕಲೆಗಳ ಸರಿಯಾದ ಕಾರಣ ತಿಳಿಯಬಹುದು..ಮತ್ತು ಅವುಗಳನ್ನು ಗುಣಪಡಿಸಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top