ಮನೋರಂಜನೆ

ಹಿಂದಿಯಲ್ಲೂ ಶುರುವಾಯ್ತು ದರ್ಶನ್ ಹವಾ- ಚಕ್ರವರ್ತಿ ಅಬ್ಬರಕ್ಕೆ ದಾಖಲೆಗಳು ಉಡೀಸ್

ಕಳೆದ ವರ್ಷ ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರ ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸಿದೆ. ಕೇವಲ ಕನ್ನಡ ನೆಲಕ್ಕಷ್ಟೇ ದರ್ಶನ್ ಕ್ರೇಜ್​ ಸೀಮಿತವಾಗಿಲ್ಲ. ಕರ್ನಾಟಕದಾಚೆಗೂ `ದರ್ಶನ್’ ಅನ್ನೋ ಹೆಸರಿಗೆ ಬೇಡಿಕೆ ಇದೆ. ಅದಕ್ಕೆ ಸಾಕ್ಷಿ ದರ್ಶನ್ ಅಭಿನಯದ ಸಿನಿಮಾಗಳು ಹಿಂದಿಗೆ ಡಬ್ ಆಗಿ ಕೋಟಿ ಕೋಟಿ ವೀಕ್ಷಣೆಯನ್ನ ಸಂಪಾದಿಸೋದು.

 

 

ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಇದೇ ತಿಂಗಳ ಮೂರನೇ ತಾರೀಕಿನಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಯಾವ ಥರದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತೆಂದರೆ ಎರಡು ದಿನ ಕಳೆಯೋದರೊಳಗೆ ಏಳು ಮಿಲಿಯನ್‍ಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದರು. ಆರು ದಿನಗಳಲ್ಲೇ 10 ಮಿಲಿಯನ್(ಒಂದು ಕೋಟಿ) ಜನ ಚಿತ್ರವನ್ನು ವೀಕ್ಷಿಸಿದ್ದಾರೆ. ಭಾರತದಲ್ಲೇ ಅಲ್ಲದೆ ಕತಾರ್, ಯುಎಇ ಮತ್ತು ನೇಪಾಳದಲ್ಲೂ ಹೆಚ್ಚಿನ ಜನರು ದರ್ಶನ್ ಚಿತ್ರವನ್ನು ವೀಕ್ಷಿಸಿರುವುದು ವಿಶೇಷ.

 

 

 

ಬೆಂಗಳೂರು ಭೂಗತ ಜಗತ್ತಿನ ಕಥೆ ಹೊಂದಿರುವ ಚಕ್ರವರ್ತಿ ಸಿನಿಮಾವನ್ನು ಚಿಂತನ್ ಎಂಬುವರು ನಿರ್ದೇಶಿಸಿದ್ದರು. ದರ್ಶನ್ ಗೆ ಜೋಡಿಯಾಗಿ ದೀಪಾ ಸನ್ನಿದಿ ನಟಿಸಿದ್ದರು. ಇನ್ನು ದರ್ಶನ್ ಸಹೋದರ ದಿನಕರ್ ತೂಗುದೀಪ ಸಹ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಅಭಿಯಿಸಿದ್ದು ವಿಶೇಷವಾಗಿತ್ತು.

ದರ್ಶನ್​ ಅಭಿನಯದ ಮಿಸ್ಟರ್​​ ಐರಾವತ ಹಾಗೂ ಜಗ್ಗುದಾದ ಸಿನಿಮಾಗಳು ಈ ಹಿಂದೆಯೇ ಹಿಂದಿಗೆ ಡಬ್​ ಆಗಿ ರಿಲೀಸ್​ ಆಗಿತ್ತು. ಈ ಸಿನಿಮಾಗಳಿಗೂ ಜನ ಒಳ್ಳೆ ರೆಸ್ಪಾನ್ಸ್​ ಕೊಟ್ಟಿದ್ರು. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರವನ್ನು ಹಿಂದಿಯ ಪ್ರೇಕ್ಷಕರೂ ಮೆಚ್ಚಿಕೊಂಡಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top