ದೇವರು

ನಿಮಗೆ ಅದೃಷ್ಟ ಖುಲಾಯಿಸಿ ,ಲಕ್ಷ್ಮಿ ದೇವಿ ಸದಾ ಕಾಲ ನಿಮ್ಮ ಮನೆಯಲ್ಲಿ ನೆಲೆಸಿರಬೇಕು ಅಂದ್ರೆ ಈ ವಿಷಯಗಳನ್ನು ತಪ್ಪದೆ ತಿಳ್ಕೊಂಡ್ರೆ ಒಳ್ಳೆಯದು

ಲಕ್ಷ್ಮಿ ದೇವಿಯ ಭಕ್ತರಿಗೆ ಅವಶ್ಯಕವಾಗಿ ಈ ವಿಷಯಗಳು ತಿಳಿದುಕೊಂಡಿರಬೇಕು ಮತ್ತು ತಿಳಿದುಕೊಂಡಿದ್ದರೆ ಒಳ್ಳೆಯದು.
ತಾಯಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುವುದು ಅಷ್ಟೊಂದು ಸುಲಭದ ಮಾತಲ್ಲ. ದೇವರ ಪೂಜೆಯನ್ನು ಭಕ್ತಿಯಿಂದ ಮಾಡಿದರೆ ಅಷ್ಟೇ ಸಾಲದು. ಕೆಲವೊಂದು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗುತ್ತದೆ . ನಿಯಮದಂತೆ ನಡೆದುಕೊಳ್ಳದೆ ಹೋದಲ್ಲಿ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ.
ಬೆಳಗ್ಗೆ ಎದ್ದ ತಕ್ಷಣ ಮುಖವನ್ನು ಸಹ ತೊಳೆಯದೆ ಅನೇಕರು ದೇವರಿಗೆ ಹೂವನ್ನು ಅರ್ಪಿಸಬೇಕು ಎಂದು ಹೂವನ್ನು ಗಿಡದಿಂದ ಕೀಳುತ್ತಾರೆ. ತುಳಸಿಯ ಎಲೆಗಳನ್ನು ಸಹ ಕಿತ್ತು ಬುಟ್ಟಿಗೆ ಹಾಕಿಕೊಳ್ಳುತ್ತಾರೆ . ಆದರೆ ಸ್ನಾನ ಮಾಡದೆ ಕಿತ್ತ ತುಳಸಿಯ ಎಲೆಗಳನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಗಳು ಈ ಪೂಜೆಯನ್ನು ಸ್ವೀಕರಿಸುವುದಿಲ್ಲ. ಲಕ್ಷ್ಮಿ ದೇವಿಯು ಇದರಿಂದ ಅತೃಪ್ತಳಾಗುತ್ತಾಳೆ .
ಆತ ಲಕ್ಷ್ಮೀ ದೇವಿಯ ಎಷ್ಟು ದೊಡ್ಡ ಭಕ್ತನಾಗಿದ್ದರು, ಗುರುವಿನ ಆರಾಧನೆ ಮಾಡದಿದ್ದಲ್ಲಿ, ಲಕ್ಷ್ಮೀ ದೇವಿ ಆತನ ಮನೆಯಲ್ಲಿ ನೆಲೆಸುವುದಿಲ್ಲ. ಪತ್ನಿಯ ಜೊತೆ ಕೆಟ್ಟದಾಗಿ ನಡೆದುಕೊಳ್ಳುವ ವ್ಯಕ್ತಿಗೆ ಆರ್ಥಿಕ ಕಷ್ಟ ಮತ್ತು ನಷ್ಟಗಳು ಜೀವನದಲ್ಲಿ ತಪ್ಪಿದ್ದಲ್ಲ .

 

 

 

ಸ್ವಚ್ಛತೆ ಇಲ್ಲದ ಮನೆಯನ್ನು ಲಕ್ಷ್ಮೀ ದೇವಿ ತಕ್ಷಣ ಬಿಟ್ಟು ಬಿಡುತ್ತಾಳೆ. ಸ್ನಾನ ಮಾಡದೆ ಲಕ್ಷ್ಮೀ ದೇವಿಯ ಪೂಜೆ ಮಾಡುವವರು ಮತ್ತು ಮನಸ್ಸಿನಲ್ಲಿ ಕಲ್ಮಶ ತುಂಬಿಕೊಂಡಿರುವ ಮನೆಯಲ್ಲಿ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ.
ಯಾರ ಮನೆಯ ಮಹಿಳೆ ಹಿರಿಯರಿಗೆ ಗೌರವ ನೀಡುವುದಿಲ್ಲವೋ, ಪರಪುರುಷನಿಗೆ ಆಸೆಪಡುತ್ತಾಳೆ, ಸದಾ ಗಲಾಟೆ ಮಾಡುತ್ತಾಳೆ, ಮನೆಗೆ ಲಕ್ಷ್ಮಿ ಬರುವುದಿಲ್ಲ .ಆಲಸಿಯಾಗಿ, ಸೋಮಾರಿಯಾಗಿ ಇರುವ ವ್ಯಕ್ತಿಯ ಮನೆಗೂ ಲಕ್ಷ್ಮೀ ದೇವಿ ಕಾಲಿಡುವುದಿಲ್ಲ. ಕೆಲಸ ಮಾಡದೇ ಫಲ ಬೇಡುವ ವ್ಯಕ್ತಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಯಾವುದೇ ಪೂಜೆ ಮಾಡಿದರೂ ಸಹ ಲಕ್ಷ್ಮಿ ತೃಪ್ತಳಾಗುವುದಿಲ್ಲ.

ಕಾರಣವಿಲ್ಲದೆ ಮನೆಯ ವ್ಯಕ್ತಿಗಳ ನಡುವೆ ಭೇದಭಾವ ಮಾಡುವವರ ಮನೆಯಲ್ಲಿಯೂ ಸಹ ಲಕ್ಷ್ಮೀದೇವಿ ನೆಲೆಸುವುದಿಲ್ಲ. ವ್ಯಾಪಾರದಲ್ಲಿ ಅವರಿಗೆ ಎಂದಿಗೂ ಯಶಸ್ಸು ಸಿಗುವುದಿಲ್ಲ. ಪೂಜೆ ಮಾಡುವಾಗ ಕೋಪಗೊಳ್ಳುವ ಅಥವಾ ಜಗಳವಾಡುತ್ತಾ ದೇವರ ಪೂಜೆ ಮಾಡುವವರಿಗೆ ಲಕ್ಷ್ಮೀ ದೇವಿಯು ಒಲಿಯುವುದಿಲ್ಲ.ಬಾಡಿ ಹೋಗಿರುವ ಹೂವನ್ನು ದೇವರಿಗೆ ಅರ್ಪಿಸುವ ಮನೆ ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವ ಮತ್ತು ಕೊಳಕು ಬಟ್ಟೆಯನ್ನು ಧರಿಸುವವರ ಬಳಿ ಲಕ್ಷ್ಮೀದೇವಿಯು ಸುಳಿಯುವುದಿಲ್ಲ .ಸೂರ್ಯಾಸ್ತದ ವೇಳೆ ಅಥವಾ ಶುಭ ದಿನಗಳಲ್ಲಿ ಸ್ತ್ರೀಯರ ಸಹವಾಸ ಮಾಡುವ ಪುರುಷ ಹಗಲಿನಲ್ಲಿ ಮಲಗುವವರು ಪರರ ಹಣ ಹಾಗೂ ಪರಸ್ತ್ರೀ ಮೋಹಕ್ಕೆ ಬೀಳುವ ವ್ಯಕ್ತಿಗೆ ಲಕ್ಷ್ಮೀ ದೇವಿಯು ಒಲಿಯುವುದಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top