ಮನೋರಂಜನೆ

ಕನ್ನಡಾಭಿಮಾನಿಗಳೇ ‘ಬಿಗ್ ಬಾಸ್-6ರ’ ಪ್ರೋಮೋದಲ್ಲಿರುವ ಒಂದು ವಿಶೇಷತೇ ಗಮನಿಸಿದಿರಾ?

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಎಂಬ ಹೆಸರು ಗಿಟ್ಟಿಸಿರುವ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಿಸಲು ತೆರೆಮರೆಯಲ್ಲೇ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ.. ಕಳೆದ ಐದು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ.. ಈ ಸೀಸನ್ನಿನ ಮೊದಲ ಪ್ರೊಮೊ ಅದಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದೆ.

 

 

ಕನ್ನಡ ಅಕ್ಷರಗಳಲ್ಲಿ ‘ಬಿಗ್ ಬಾಸ್’:
ಅಂದಹಾಗೆ ಈ ಪ್ರೋಮೋದಲ್ಲಿ ‘ಬಿಗ್ ಬಾಸ್’ ಶೀರ್ಷಿಕೆಯನ್ನ ಕನ್ನಡ ಅಕ್ಷರದಲ್ಲಿ ಬಳಸಲಾಗಿದೆ. ಈ ಹಿಂದಿನ ಐದೂ ಸೀಸನ್’ಗಳ ಪ್ರೋಮೋಗಳಲ್ಲಿ ‘ಬಿಗ್ ಬಾಸ್’ ಪದ ಕೇವಲ ಇಂಗ್ಲೀಷ್ ನಲ್ಲಿ ಮಾತ್ರ ಇರುತ್ತಿತ್ತು. ಈ ಬಾರಿ ಕನ್ನಡದಲ್ಲಿ ಕಂಡು ಬಂದಿರುವುದು ಸಹಜವಾಗಿ ಕನ್ನಡಾಭಿಮಾನಿಗಳಿಗೆ ಖುಷಿಕೊಟ್ಟಿದೆ. ಕಾರ್ಯಕ್ರಮದ ವೇದಿಕೆಗಳಲ್ಲಿ ಬಿಗ್ ಬಾಸ್ ಎಂಬ ಪದವನ್ನು ಕನ್ನಡ ಬರೆಯಬೇಕು ಎಂದು ಈ ಹಿಂದೆ ಕೆಲ ಕನ್ನಡ ಪರ ಕಾರ್ಯಕರ್ತರು ಆಯೋಜಕರ ಮುಂದೆ ಬೇಡಿಕೆ ಇಟ್ಟಿದ್ದರು.. ಆ ಬೇಡಿಕೆ ಈಗ ಈಡೇರುತ್ತಿದೆ..

 

 

ಪ್ರೋಮೋ ಮೂಲಕ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದ್ದಾರೆ. 35 ಸೆಕೆಂಡ್​ಗಳ ಈ ಪ್ರೋಮೋದಲ್ಲಿ ಭರ್ಜರಿ ಡೈಲಾಗ್​ನೊಂದಿಗೆ ಅಭಿನಯ ಚಕ್ರವರ್ತಿ ಎಂಟ್ರಿ ಕೊಟ್ಟಿದ್ದಾರೆ. ‘ಈ ಮನೆಯಲ್ಲಿ ಕಿಚ್ಚು ಇದೆ ಅಂತ ನಾನು ಮೊದಲಿನಿಂದಲೂ ಹೇಳ್ತಾನೆ ಇದ್ದೆ. ಆದರೆ ಅದೇ ಕಿಚ್ಚು ಇಡೀ ಮನೆಯನ್ನೇ ಸುಟ್ಟು ಬೂದಿ ಮಾಡುತ್ತೆ ಅಂತ ನಂಗ್ ಗೊತ್ತಿರಲಿಲ್ಲ. ಈಗ ಅದೇ ಬೂದಿಯಿಂದ ಎದ್ದು ಬಂದಿರುವ ಕಿಚ್ಚು, ಈಗ ಹೊಸ ಮನೆ ಕಟ್ತಾಯಿದೆ. ಹೊಸ ಮನೆ ಜೊತೆ ಹೊಸ ಹೊಸ ಸ್ಪರ್ಧಿಗಳು. ಇನ್ನೊಂದು ಹೊಸ ಸೀಸನ್. ಮಜಾ ಅಂದರೆ ಈ ಮನೆಲೂ ಕಿಚ್ಚಿರುತ್ತೆ, ಹುಚ್ಚಿರುತ್ತೆ. ಮನಸ್ಸಲ್ಲೇ ಮಡಗಿರೋ ಮಚ್ಚಿರುತ್ತೆ, ಕಾಡ್ಗಿಚ್ಚಿರುತ್ತೆ’ ಎಂಬ ಡೈಲಾಗ್​ನ ಪ್ರೋಮೋ ಬಿಡುಗಡೆ ಮಾಡಿದ್ದಾರೆ.

ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್’ನಲ್ಲಿ ವೇಳೆಗೆ ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡೋದಂತೂ ಕನ್ಫರ್ಮ್ ಅಂತೇ. ಈ ಮೂಲಕ ಎಲ್ಲೋ ಒಂದಿಷ್ಟು ಮಂದಿ ಪ್ರತಿಭಾವಂತರು, ರಿಟೇರ್‍ಮೆಂಟ್ ಸ್ಟೇಜಿನ ಕಲಾವಿದರು ಮತ್ತು ಕೆಲವೊಂದಷ್ಟು ತಿಕ್ಕಲುತಾಣಗಳು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕಾಲ ಬರುತ್ತಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top