ಸಿನಿಮಾ

ಉಪ್ಪಿಟ್ಟು ಕೇಸರಿಬಾತ್ ತಿನ್ಕೊಂಡು ಮಜಾ ಕೊಡೋಕೆ ಬಂದ ವಿನಯ್ ರಾಜ್ ಕುಮಾರ್

ಚಿತ್ರರಂಗದಲ್ಲಿ ನೆಲೆಯೂರಲು ಸತತ ಪ್ರಯತ್ನ ಪಡುತ್ತಿರುವ ಡಾ.ರಾಜ್ ಕುಟುಂಬದ ಕುಡಿ ವಿನಯ್ ರಾಜಕುಮಾರ್ ಅವರ ಎರಡನೇ ಚಿತ್ರವಾದ ರನ್ ಆಂಟೋನಿ ಗೆಲ್ಲಬಹುದು ಅನ್ನೋ ನಂಬಿಕೆ ಇತ್ತು. ಆದರೆ ಕೆಲವೊಂದು ತಪ್ಪಿನಿಂದಾಗಿ ಆ ಚಿತ್ರ ಬಿನಯ್ ಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವನ್ನು ತಂದು ಕೊಡುವಲ್ಲಿ ವಿಫಲವಾಯಿತು. ಇದೀಗ ಅವರ ಮೂರನೇ ಚಿತ್ರವಾದ ಅನಂತು vs ನುಶ್ರುತ್ ಚಿತ್ರ ಮೇಲೂ ಕೂಡ ನಿರೀಕ್ಷೆಗಳು ಬೆಟ್ಟಮಾಡಿಕೊಂಡಿದ್ದು ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತಿದೆ..

 

 

‘ಅನಂತು V/S ನುಸ್ರತ್’ ವಿನಯ್ ಅಭಿನಯದ ಹೊಸ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ, ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ವಿನಯ್ , ಸುಧೀರ್ ಶಾನುಭೋಗ್ ನಿರ್ದೇಶನದ ಚೊಚ್ಚಲ ಚಿತ್ರ ಅನಂತು v/s ನುಸ್ರತ್ ,ಟೀಸರ್ ವೀಕ್ಷಕರ ಗಮನ ಸೆಳೆಯುತ್ತಿದೆ. ಇದೊಂದು ಹಾಸ್ಯ ಪ್ರೇಮ ಕಥೆಯಧಾರಿತ ಚಿತ್ರವಾಗಿದ್ದು, ಚಿತ್ರದ ಟೀಸರ್ ಕೂಡಾ ಅನಂತು ಮತ್ತು ನುಸ್ರತ್ ನಡುವಿನ ಪ್ರೇಮ ಕಥೆಯನ್ನು ಹೇಳಹೊರಟಿದೆ , ನಾಯಕಿ ಲತಾ ಹೆಗ್ಗಡೆ ಮುದ್ದುಮುದ್ದಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ , ಸುನಾದ್ ಗೌತಮ್ ಸಂಗೀತ ನಿರ್ದೇಶನ ಮಾಡಿದ್ದು ರವಿಶಂಕರ್, ಗುರು ಪ್ರಸಾದ್, ಭಗವಾನ್ ಮುಂತಾದವರ ತಾರಾಗಣವಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top