ಸಿನಿಮಾ

ಬಾಹುಬಲಿ – 3 ನೇ ಭಾಗಕ್ಕೆ ಕಾಯ್ತಾ ಇದ್ರೆ ನೀವು ಈ ರಿಪೋರ್ಟ್ ನೋಡ್ಲೇಬೇಕು

ಬಾಹುಬಲಿ ಸಿನಿಮಾ ಎಸ್. ಎಸ್. ರಾಜಮೌಳಿ ನಿರ್ದೇಶಿಸಿದ ಒಂದು ಭಾರತೀಯ ಕಾವ್ಯಾಧಾರಿತ ಕಲ್ಪನಾ ಚಲನಚಿತ್ರ. ಚಿತ್ರದ ಎರಡು ಭಾಗಗಳು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದು ಭಾರತ ಸಿನಿಮಾ ರಂಗದಲ್ಲೇ ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿದ್ದವು.

ಬಾಹುಬಲಿ ಸಿನಿಮಾದಲ್ಲಿ ಬರುವ ಎಲ್ಲ ಪಾತ್ರಗಳನ್ನೂ ಅಚ್ಚುಕ್ಕಟ್ಟಾಗಿ ತೆರೆ ಮೇಲೆ ಬರುವಂತೆ ಮಾಡಲು ಸಫಲರಾಗಿದ್ದ ನಿರ್ದೇಶಕ ರಾಜಮೌಳಿ ಪಾತ್ರಗಳು ಮನಸಿನಲ್ಲಿ ಮೂಡುವಂತೆ ಮಾಡಿದ್ದರು., ಬಾಕ್ಸಾಫೀಸ್‍ನಲ್ಲಿ ಬಾಹುಬಲಿ ಸಿನಿಮಾ ಸರಣಿ 600ಕೋಟಿಗೂ ಅಧಿಕ ಗಳಿಕೆ ಮಾಡಿ ಹೊಸ ಇತಿಹಾಸ ಸೃಷ್ಟಿಸಿರೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಭಾರತೀಯ ಸಿನಿಮಾ ರಂಗದಲ್ಲೇ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದ ಈ ಸಿನಿಮಾ ಅನೇಕ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಅತಿ ಹೆಚ್ಚು ವಹಿವಾಟು ನಡೆಸಿದ ಭಾರತದ ಚಿತ್ರಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ‘ಬಾಹುಬಲಿ’ ಸರಣಿಗಳ ಪ್ರೀಕ್ವೆಲ್‌ ಈಗ ಬರಲಿದೆ ಎಂದು ತಿಳಿದು ಬಂದಿದೆ.

 

 

ನೆಟ್‌ಫ್ಲಿಕ್ಸ್‌ ಕೆಲವು ತಿಂಗಳ ಹಿಂದೆ ಭಾರತದ ಮೊದಲ ಒರಿಜಿನಲ್‌ ಸರಣಿ ‘ಸೇಕ್ರೆಡ್ ಗೇಮ್ಸ್‌’ ಬಿಡುಗಡೆ ಮಾಡಿತ್ತು. ಈಗ ‘ದಿ ರೈಸ್ ಆಫ್‌ ಶಿವಗಾಮಿ’ ಸರಣಿ ಘೋಷಿಸಿದೆ. ‘ಬಾಹುಬಲಿ’ ಸರಣಿಗಳ ಪ್ರೀಕ್ವೆಲ್‌ ಇದಾಗಿದೆ. ಬಾಹುಬಲಿ ಸಿನಿಮಾಗಳಿಗೆ ಮುನ್ನ ನಡೆಯುವ ಕತೆ ‘ದಿ ರೈಸ್ ಆಫ್‌ ಶಿವಗಾಮಿ’ ಸರಣಿಯಲ್ಲಿ ಇರಲಿದೆ. ‘ಬಾಹುಬಲಿ’ ಸರಣಿಗಳನ್ನು ನಿರ್ಮಾಣ ಮಾಡಿದ ಆರ್ಕಾ ಮೀಡಿಯಾ ವರ್ಕ್ಸ್‌ ಹಾಗು ನಿರ್ದೇಶಕ ಎಸ್ ಎಸ್ ರಾಜಮೌಳಿ ರವರೊಂದಿಗೆ ನೆಟ್‌ಫ್ಲಿಕ್ಸ್ ಕೈಜೋಡಿಸಿದೆ .

ಆದರೆ ಬಾಹುಬಲಿ ಒಂದು ಹಾಗು ಎರಡನೇ ಭಾಗದ ನಂತರ ಮೂರನೇ ಭಾಗ ಬರುವುದೇ ಎಂದು ಅನೇಕರು ಭಾವಿಸದ್ದರು ಆದರೆ ಈ ವದಂತಿಗೆ ಬ್ರೇಕ್ ಹಾಕಿದ್ದಾರೆ ನಟಿ ತಮನ್ನಾ , ಬಾಹುಬಲಿ ಸಿನಿಮಾ ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿತ್ತು ಆದರೆ ಈ ಚಿತ್ರ ನಿರ್ಮಾಣದ ಕೆಲವು ಹಂತದಲ್ಲೇ ಕೇವಲ ಎರಡೇ ಭಾಗಕ್ಕೆ ಸೀಮಿತಗೊಳಿಸಬೇಕು ಎಂದು ನಿರ್ಧರಿಸಲಾಗಿತ್ತು ಹೀಗಾಗಿ ಮೂರನೇ ಭಾಗ ಬರುವುದಿಲ್ಲ ಎಂದು ತಮನ್ನಾ ಹೇಳಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top