ದೇವರು

ಅತ್ತೆ ಸೊಸೆಯರ ದೇವಸ್ಥಾನ,ಈ ದೇವಸ್ಥಾನ ಕುರಿತ ಯಾರಿಗೂ ತಿಳಿಯದೇ ಇರುವ ಕೆಲವು ಆಶ್ಚರ್ಯ ಹುಟ್ಟಿಸೋ ರಹಸ್ಯಗಳ ಬಗ್ಗೆ ತಿಳ್ಕೊಳ್ಳಿ

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಅತ್ತೆ ಸೊಸೆಯರ ದೂರುಗಳು ಕಂಡುಬರುತ್ತವೆ . ಇತ್ತ ತಾಯಿಗೂ ಹೇಳಲಾಗದೆ ಇತ್ತ ಹೆಂಡತಿಗೂ ಹೇಳಲಾಗದೆ, ಇವರಿಬ್ಬರ ಜಗಳದ ಮಧ್ಯೆ ಗಂಡಸರು ಸಮಸ್ಯೆ ಎದುರಿಸಬೇಕಾಗುತ್ತದೆ. ಪೂರ್ವದ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ವಿಷಯ ಎಲ್ಲರಿಗೂ ಗೊತ್ತಿರುವುದೇ . ಹೀಗೆ ರಾಜರ ಕಾಲದಲ್ಲಿ ಅತ್ತೆ, ಸೊಸೆಯರ ಜಗಳವನ್ನು ಸಹಿಸಲಾರದೆ, ರಾಜರು ಅತ್ತೆ ಸೊಸೆಯ ಇಬ್ಬರಿಗೂ ಪ್ರತ್ಯೇಕವಾಗಿ ದೇವಾಲಯವನ್ನೂ ಕಟ್ಟಿಸಿದ್ದಾರೆ. ಅದು ಎಲ್ಲಿ ? ಎಂದರೆ.

ಕ್ರಿಸ್ತ. ಶಕ 1092 ರ ಸಮಯದಲ್ಲಿ ಮಧ್ಯಪ್ರದೇಶದ ಮಹಿಪಾಲ್ ನಲ್ಲಿರುವ ಗ್ವಾಲಿಯರ್ ಆನ್ನು ಆಳಿದ ವಂಶಸ್ಥನಾದ ರಾಜನಿಗೆ ಒಬ್ಬ ಮಗನಿದ್ದನು . ಆತನ ಹೆಂಡತಿ ವಿಷ್ಣು ಭಕ್ತೆಯಾಗಿದ್ದಳು. ಪ್ರತಿದಿನ ವಿಷ್ಣುವನ್ನು ಪೂಜಿಸುತ್ತಿದ್ದಳು. ಆಕೆಗಾಗಿ ರಾಜನು ಸಾವಿರ ಕೈಗಳು ಇರುವ ಮಹಾ ವಿಷ್ಣುವಿನ ವಿಗ್ರಹವನ್ನು ಪ್ರತಿಷ್ಠಾಪಿಸಿದನು. ಮೂವತ್ತೆರಡು ಮೀಟರ್ ಉದ್ದ ಇಪ್ಪತ್ತೆರಡು ಮೀಟರ್ ಅಗಲ ಇರುವ ಈ ದೇವಾಲಯದಲ್ಲಿ ಬ್ರಹ್ಮ, ಸರಸ್ವತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಮೂರು ದಿಕ್ಕಿಗೆ ಮೂರು ದ್ವಾರಗಳನ್ನು ನಿರ್ಮಿಸಿ ನಾಲ್ಕನೇ ದಿಕ್ಕಿಗೆ ರಹಸ್ಯ ಕೊಠಡಿಯನ್ನು ನಿರ್ಮಿಸಿದ್ದರು.
ಸದಾ ಬೀಗ ಹಾಕಿರುವ ಈ ರಹಸ್ಯವಾದ ನಾಲ್ಕನೇ ಕೊಠಡಿಯಲ್ಲಿ ಏನಿದೆ ? ಎಂಬುದು ರಹಸ್ಯವಾಗಿದೆ .ದೇವಾಲಯವನ್ನು ಮೊದಲು ಸುಣ್ಣದ ಕಲ್ಲಿನಿಂದ ಪ್ರಾರಂಭಿಸಿ ನಂತರ ಶಿಲೆಯಿಂದ ಪುನರ್ ನಿರ್ಮಾಣ ಮಾಡಿದ್ದಾರೆ. ಇಂತಹ ಅದ್ಭುತ ಕಲಾ ಶಿಲೆಯಿಂದ ಕಂಗೊಳಿಸುತ್ತಿರುವ ಈ ದೇವಾಲಯದಲ್ಲಿ ರಾಣಿ ಮಹಾವಿಷ್ಣುವನ್ನು ಪೂಜಿಸತೊಡಗಿದಳು. ಅಷ್ಟರಲ್ಲೇ ಯುವರಾಜನಿಗೆ ವಿವಾಹವಾಗಿ ಸೊಸೆ ಕೋಟೆಯನ್ನು ಪ್ರವೇಶಿಸುತ್ತಿದ್ದಂತೆ ರಾಜನಿಗೆ ಕಷ್ಟಗಳು ಪ್ರಾರಂಭವಾದವು.

 

 

 

ಅದು ಹೇಗೆಂದರೆ ಸೊಸೆ ಶಿವ ಭಕ್ತೆಯಾಗಿದ್ದಳು, ಆಕೆ ಶಿವನನ್ನು ಪೂಜಿಸಬೇಕೆಂದು, ರಾಣಿ ವಿಷ್ಣುವನ್ನು ಪೂಜಿಸಬೇಕೆಂದು ಇವರಿಬ್ಬರ ಜಗಳ ಶುರುವಾದವು. ದೇವಾಲಯದಲ್ಲಿ ವಿಷ್ಣುವಿನ ಬದಲಾಗಿ ಶಿವನನ್ನು ಪ್ರತಿಷ್ಠಾಪಿಸಬೇಕೆಂದು ಸೊಸೆ, ಅದಕ್ಕೆ ಒಪ್ಪಿಕೊಳ್ಳದ ಅತ್ತೆ. ಹೀಗೆ ಇಬ್ಬರ ನಡುವೆ ಜಗಳ ಆಗುತ್ತಿದ್ದವು. ರಾಜನು ಇಬ್ಬರನ್ನು ತೃಪ್ತಿಪಡಿಸಲು ಕೂಡಲೇ ಶಿವನನ್ನು ನಿರ್ಮಿಸಿದನು. ಕಾಲ ಕ್ರಮೇಣ ಸಹಸ್ರ ಬಾಹು ಎಂಬುವುದು “ಸಾಸ್ ಬಹು” ದೇವಾಲಯವಾಗಿ ಬದಲಾಯಿತು. ಕೂಡ ಗ್ವಾಲಿಯರ್ ಕೋಟೆಯಲ್ಲಿನ ಮಾನ್ ಮಂದಿರ ಪಕ್ಕದಲ್ಲಿ ಇದು ಶಿವ ವಿಷ್ಣು ಎರಡು ದೇವಾಲಯಗಳ ದರ್ಶನಕ್ಕೆ ಹಲವು ಪ್ರವಾಸಿಗರು ಬರುತ್ತಿದ್ದಾರೆ .

ರಾಜಸ್ಥಾನದ ಉದಯ್ ಪುರ್ ನಲ್ಲಿಯೂ ಇಂತಹದ್ದೇ ಘಟನೆಯೊಂದು ನಡೆದಿದೆ. ಆದರೆ ಇಲ್ಲಿ ಅತ್ತೆ ಸೊಸೆಯರ ಇಬ್ಬರು ವಿಷ್ಣು ಭಕ್ತರೇ, ಹಾಗಾದರೆ ಸಮಸ್ಯೆ ಏನಿರುತ್ತೆ ಅನ್ನಿಸುತ್ತದೆ ಅಲ್ಲವೇ ? ಆದರೆ ಇಲ್ಲೂ ಕೂಡ ಸಮಸ್ಯೆ ಎದುರಾಗಿದೆ. ಇಬ್ಬರೂ ದೇವಾಲಯದ ಯಜಮಾನರೆಂದು ಜಗಳ ಶುರುವಾಯಿತು ಅಂದಿನಿಂದ ಆ ರಾಜ ಇಬ್ಬರಿಗೂ ಅಕ್ಕಪಕ್ಕದಲ್ಲಿಯೇ ಒಂದೊಂದು ದೇವಾಲಯಗಳನ್ನು ಕಟ್ಟಿಸಿದ್ದಾನೆ. ಉದಯಪುರ್ ಗೆ ಇಪ್ಪತ್ತ್ ಎರಡು ಕಿಲೋಮೀಟರ್ ದೂರದಲ್ಲಿರುವ ನಗರದಲ್ಲಿರುವ ಈ ದೇವಾಲಯದಲ್ಲಿ ಮೂಲ ವಿಗ್ರಹವು ಸಹಸ್ರಬಾಹು ವಿಷ್ಣುವೇ ಆಗಿದ್ದರೂ ರಾಮ, ಬಲರಾಮ, ಪರಶುರಾಮ ವಿಗ್ರಹಗಳು ಕೂಡ ಇರುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top