ಸಿನಿಮಾ

ಗಣೇಶ ಹಬ್ಬವನ್ನ ಭರ್ಜರಿಯಾಗಿ ಆಚರಣೆ ಮಾಡಿದ ಸ್ಯಾಂಡಲ್ ವುಡ್ ,ಎಕ್ಸ್ಕ್ಲೂಸಿವ್ ಫೋಟೋ ಒಳಗಿದೆ

ಗಣೇಶ ಹಬ್ಬವನ್ನು ಲೋಕಮಾನ್ಯ ತಿಲಕರು ಸಾರ್ವಜನಿಕ ಉತ್ಸವನ್ನಾಗಿ ಆಚರಿಸಲು ಕರೆ ನೀಡಿದ ಬಳಿಕ ಭಾರತದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನ ಗೌರಿ ಗಣೇಶ ಹಬ್ಬ ಅಥವಾ ಗೌರಿಹಬ್ಬವನ್ನು ದಕ್ಷಿಣ ಭಾರತದಲ್ಲಿ ಮಾತ್ರ ಆಚರಣೆ ಮಾಡಲಾಗಿತ್ತು ಹೀಗಿರುವಾಗ ಸ್ಯಾಂಡಲ್ ವುಡ್ ನ ಖ್ಯಾತ ತಾರೆಯರು ಹಬ್ಬದ ಶುಭಾಶಯ ಕೋರಲು ಮರೆಯಲಿಲ್ಲ .

ಸಮಸ್ತ ಕನ್ನಡ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಅವರ ಸ್ಟೈಲ್ ನಲ್ಲಿ ಹೇಗೆ ಹೇಳಿದ್ರು ನೀವೇ ನೋಡಿ , ಮಣ್ಣಿನ ಗಣೇಶ ಮೂರ್ತಿಯನ್ನು ಮನೆಗೆ ಬರಮಾಡಿಕೊಳ್ಳುವ ಮೂಲಕ ನಟಿ ಮಾನ್ವಿತಾ ಹರೀಶ್ ಹಬ್ಬವನ್ನು ಫುಲ್ ಎಂಜಾಯ್ ಮಾಡಿದ್ರು , ತಾವೇ ಮಾಡಿದ ಮಣ್ಣಿನ ಗಣೇಶ ಮೂರ್ತಿಯನ್ನು ಕೈಯಲ್ಲಿ ಹಿಡಿದು ಹಲ್ಲು ಬಿಟ್ಟು ಮನಸಾರೆ ನಕ್ಕರು ನಟಿ ಮಯೂರಿ .

 

 

ಗಣೇಶ ಮೂರ್ತಿಯ ಅಲಂಕಾರದ ಜೊತೆಗೆ ಸಾಕ್ಷಾತ್ ಮಹಾಲಕ್ಷ್ಮಿಯ ಹಾಗೆ ನಗೆ ಬೀರಿದರು ನಟಿ ಪ್ರಿಯಾಂಕಾ ಉಪೇಂದ್ರ , ಪ್ರಿಯಾಂಕಾ ಉಪೇಂದ್ರ ಅವರಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳು, ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಸರ್ವೇ ಜನಃ ಸುಖಿನೋ ಭವಂತು ನೀವು ಮಾಡುವ ಎಲ್ಲ ಕೆಲಸಗಳಿಗೆ ಶುಭವಾಗಲಿ ಎಂದರು ಕಿರುತೆರೆ ನಟಿ ಅರ್ಚನಾ .
ಅಕುಲ್ ಬಾಲಾಜಿ ತಮ್ಮ ಮಡದಿ ಜ್ಯೋತಿ ಹಾಗು ಮಗನ ಜೊತೆ ಗ್ರಾಂಡ್ ಆಗಿ ಗಣೇಶ ಹಬ್ಬ ಆಚರಿಸುತ್ತಿದ್ದಾರೆ .

 

 

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು ಎಲ್ಲಾ ಕನಸುಗಳು ನಿರ್ವಿಘ್ನವಾಗಿ ನೆರವೇರಲಿ ಎಂದರು ನಟಿ ರಾಗಿಣಿ ದ್ವಿವೇದಿ
ಗುಲಾಭಿ ಬಣ್ಣದ ಬಟ್ಟೆಯನ್ನು ತೊಟ್ಟಿದ್ದ ಆಶಿಕಾ ರಂಗನಾಥ್ ತಾವೇ ತಮ್ಮ ಕೈಯಿಂದ ಮಾಡಿದ ಗಣಪ ಮೂರ್ತಿಯನ್ನು ಕೈಯಲ್ಲಿ ಹಿಡಿದು ಅಲಂಕಾರ ಮಾಡುತ್ತಾ ಎಲ್ಲರಿಗು ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದರು .
ಮಾಲಿನ್ಯ ರಹಿತ ಪರಿಸರ ಸ್ನೇಹಿ ಗಣಪನಿಗೆ ಜೈ ಎಂದರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.

 

 

ಮಣ್ಣಿನ ಗಣೇಶ ಮೂರ್ತಿಯನ್ನು ಮನೆಗೆ ಬರಮಾಡಿಕೊಳ್ಳುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರುಗು ಕೊಟ್ಟ ರವಿ ಚಂದ್ರನ್ ಪುತ್ರ ಮನೋರಂಜನ್
ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಲ್ಲರಿಗು ಒಳ್ಳೆಯದಾಗಲಿ ಎಂದರು ನಟಿ ರಕ್ಷಿತಾ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top