ಸಿನಿಮಾ

ಸ್ಯಾಂಡಲ್ ವುಡ್ ಸ್ಟಾರ್ ನಟರು ನಾಡಿನ ಸಮಸ್ತ ಜನರಿಗೆ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದು ಹೀಗೆ

ಗಣೇಶ ಹಬ್ಬವನ್ನು ಲೋಕಮಾನ್ಯ ತಿಲಕರು ಸಾರ್ವಜನಿಕ ಉತ್ಸವನ್ನಾಗಿ ಆಚರಿಸಲು ಕರೆ ನೀಡಿದ ಬಳಿಕ ಭಾರತದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನ ಗೌರಿ ಗಣೇಶ ಹಬ್ಬ ಅಥವಾ ಗೌರಿಹಬ್ಬವನ್ನು ದಕ್ಷಿಣ ಭಾರತದಲ್ಲಿ ಮಾತ್ರ ಆಚರಣೆ ಮಾಡಲಾಗಿತ್ತು ಹೀಗಿರುವಾಗ ಸ್ಯಾಂಡಲ್ ವುಡ್ ನ ಖ್ಯಾತ ತಾರೆಯರು ಹಬ್ಬದ ಶುಭಾಶಯ ಕೋರಲು ಮರೆಯಲಿಲ್ಲ .

ಸಮಸ್ತ ಕನ್ನಡ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.ದೇವರ ಆಶೀರ್ವಾದ ಇರಲಿ ,ಸಂತಸದಿಂದಿರೀ, ಸಂತೋಷವನ್ನು ಹರಡಿ. ಎಂದು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ ಕಿಚ್ಚ sudeep.

ಸಮಸ್ತ ಕರುನಾಡ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮೆಲ್ಲ ಸಂಕಷ್ಟಗಳು ದೂರವಾಗಿ ಜೀವನದ ಎಲ್ಲಾ ಸುಖ ಸಂತೋಷ ನಿಮ್ಮದಾಗಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಣೇಶನ ಮುಂದೆ ಕೈ ಮುಗಿದು ನಿಂತು ಎಲ್ಲರಿಗು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ .

ರೋರಿಂಗ್ ಸ್ಟಾರ್ ಮುರಳಿ ಕೂಡ ‘ಭರಾಟೆ’ ಚಿತ್ರತಂಡದಿಂದ . ಎಲ್ಲರಿಗೂ ಶುಭಾಶಯ ತಿಳಿಸಿ ಎಲ್ಲರಿಗೂ ಗುಡ್ ಲಕ್ ಎಂದು ಟ್ವೀಟ್ ಮಾಡಿ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಗೌರಿ ಶಕ್ತಿ, ಶೌರ್ಯದ ಪ್ರತೀಕವಾದರೆ, ಗಣಪತಿಯು ವಿದ್ಯೆ, ಜ್ಞಾನದ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಗೂ ಈ ಎರಡೂ ಗುಣಗಳಿಂದಲೇ ವ್ಯಕ್ತಿತ್ವ ವಿಕಾಸವಾಗಲು ಸಾಧ್ಯ. ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ.

ನನ್ನ ಉಸಿರಿನಲ್ಲಿ ಬೆರೆತ ಕನ್ನಡ ನಾಡಿನ ಸಮಸ್ತ ಬಂಧುಗಳಿಗೆ ಗೌರಿ ಗಣೇಶನ ಹಬ್ಬದ ಶುಭಾಶಯಗಳು..ನೂರ್ಕಾಲ ಸುಖ ಸಂತೋಷದಿಂದ ನೆಮ್ಮದಿಯಾಗಿ ನಗುತ ಬಾಳಿ..ಶುಭದಿನ ಶುಭೋದಯ ಎಂದು ಜಗ್ಗೇಶ್ ಎಲ್ಲರಿಗು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top