ಸಮಾಚಾರ

ಬಿದ್ದು ಹೋಗುತ್ತಾ ಕುಮಾರಸ್ವಾಮಿ ಮೈತ್ರಿ ಸರ್ಕಾರ ,ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ

ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀಗಳು ತಾಳೆಗರಿ ಹಿಡಿದು ನುಡಿಯುವ ಭವಿಷ್ಯದಲ್ಲಿ ಸಂಭವಿಸುವ ಒಗಟು ನಿಜವಾಗುತ್ತದೆ ಎಂದು ಹೇಳಲಾಗುತ್ತಿದೆ ,ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದ ಭವಿಷ್ಯ ನಿಜವಾಗುತ್ತದೆ ಎಂದು ಅನೇಕರು ನಂಬುತ್ತಾರೆ .

ನವೆಂಬರ್ ವರೆಗೆ ರಾಜಕೀಯ ಹಗ್ಗಜಗ್ಗಾಟಗಳು ಮುಂದುವರೆಯಲಿದೆ. ದೇಶದಲ್ಲಿ ಪ್ರಾಕೃತಿಕ ವಿಕೋಪ ಮುಂದುವರೆಯಲಿದೆ.ಮಳೆ ಹೆಚ್ಚಾಗುತ್ತದೆ ಭೂ ಕಂಪನದ, ಜೊತೆಗೆ ದೊಡ್ಡ ದೊಡ್ಡ ನಗರಗಳೂ ಕಂಪಿಸಲಿವೆ, ಸಾವು ನೋವುಗಳ ಸರಣಿ ಮುಂದುವರೆಯಲಿದೆ ಎಂದು ಕೋಡಿ ಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

 

 

ಬ್ರಾತೃ ಬಲ ಹೆಚ್ಚೀತು ಎಂದು ಎರಡು ತಿಂಗಳ ಮುಂಚೆ ಹೇಳಿದ್ದರು , ಸಹೋದರ ಕಂಟಕ ಸರ್ಕಾರಕ್ಕೆ ಆಪತ್ತು ತರಲಿದೆ ಎಂದು ಸಹ ಕೊಡಿ ಮಠದ ಶ್ರೀಗಳು ನುಡಿದಿದ್ದು ಈ ಮಾತನ್ನು ಅನೇಕರು ಅನೇಕ ರೀತಿಯಲ್ಲಿ ಅರ್ಥೈಸಿದ್ದಾರೆ ಕೆಲವರು ಜಾರಕಿಹೊಳಿ ಸಹೋದರರು ಮೈತ್ರಿ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಹೇಳುತ್ತಿದ್ದಾರೆ ಎನ್ನುತ್ತಿದ್ದಾರೆ ಇನ್ನು ಕೆಲವರು ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಸಹೋದರ ರೇವಣ್ಣ ಆಪತ್ತು ತರುತ್ತಾರೆಯೋ ಕಾದು ನೋಡಬೇಕಿದೆ .

ಇದಕ್ಕೂ ಮುನ್ನ ಯಾರೋ ಬಿತ್ತಿದ ಬೀಜದ ಫಸಲು ಮತ್ತೊಬ್ಬರು ಅನುಭವಿಸುತ್ತಾರೆ ಎಂದು ಎಲೆಕ್ಷನ್ ಟೈಮ್ ನಲ್ಲಿ ಹೇಳಿದ್ದರು ಆಗ ಬಿಜೆಪಿ ಬಹುಮತಗಳಿಸಿದರು ಸಹ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top