ಸಿನಿಮಾ

ಬಾಲಿಯಲ್ಲಿ ಜಾಲಿ ಮಾಡಲು ಹೋದ ಬಿಗ್ ಬಾಸ್ ಬೆಡಗಿಯರು

ಬಿಗ್ ಬಾಸ್ ಸೀಸನ್ 5 ಮುಗಿಸಿ ಹೊರಬಂದ ಸ್ಪರ್ಧಿಗಳು ಒಂದಲ್ಲ ಒಂದು ವಿಷ್ಯಕ್ಕೆ ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ , ಕೃಷಿ ತಾಪಂಡ , ಶ್ರುತಿ ಪ್ರಕಾಶ್ ಮತ್ತು ಅನುಪಮಾ ಗೌಡ ಹೆಸರಿನ ಈ ಮೂರು ಸುಂದರಿಯರು ತಮ್ಮ ಫ್ರೆಂಡ್ ಶಿಪ್ ಬಿಗ್ ಬಾಸ್ ಮುಗಿದ ಮೇಲು ಹೇಗಿದೆ ಎಂದು ಆಗಾಗ ತೋರಿಸುತ್ತ ಇರುತ್ತಾರೆ ಇದಕ್ಕೆ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಗಳೇ ಸಾಕ್ಷಿ

ಇಂಡೋನೇಷಿಯಾದ ಬಾಲಿಗೆ ಹಾರಿದ್ದಾರೆ ಈ ಮೂರು ಬೆಡಗಿಯರು , ರೆಸಾರ್ಟ್ ಸುತ್ತುತ್ತ ಕಾಲಕಳೆಯುತ್ತ ಬೆಡಗು ಬಿನ್ನಾಣ ಪ್ರದರ್ಶಿಸುತ್ತ ತಮ್ಮ ಫೋಟೋಗಳನ್ನು ಸಾಮಾಜಿಕಜಾಲತಾಣಗಳಲಿ ಹಂಚಿಕೊಂಡಿದ್ದಾರೆ .

 

 

‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಅಂದಿದ್ರು ಕೃಷಿ ತಾಪಂಡ

ಕನ್ನಡದ ಸೋನಂ ಕಪೂರ್ ಎಂದು ಕರೆಸಿಕೊಳ್ಳುವ ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಂಡ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ಹೆಚ್ಚು ಜನಪ್ರಿರಾದವರು ಅಲ್ಲಿಂದ ಹೊರಬಂದ ಕೂಡಲೇ ಸ್ಟೈಲ್ ಐಕಾನ್​ ನಂತೆ ಮಿಂಚುತ್ತಿದ್ದಾರೆ. ಬಹುಶಃ ಅವರ ಸ್ಟೈಲ್ ನೋಡಿ ಫಿದಾ ಆಗದವರು ಇಲ್ಲವೇನೋ , ಕೃಷಿ ಅವರ ನಗುವನ್ನು ಬರೀ ಮಾತಲ್ಲಿ ಬಣ್ಣಿಸಲು ಸಾಧ್ಯ ಆಗದೆ ಇರಬಹುದು. ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಅವರೇ ಕೃಷಿ ನಗು ನೋಡಿ ಮನಸೊತ್ತಿದ್ದರು ಎಂಬುವುದು ನಮಗೆಲ್ಲ ಗೊತ್ತಿರುವ ವಿಚಾರ.

ಇತ್ತೀಚಿಗೆ ಕೃಷಿ ಅಭಿನಯದ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕ ಮನಗೆದ್ದಿದೆ. ಕಮರ್ಷಿಯಲ್ ವೆರೈಟಿಯ ಪ್ರೇಮ ಕಥೆ ಆಧರಿತ ಸಿನಿಮಾ ಇದಾಗಿದೆ ಎಂದು ತಿಳಿದು ಬಂದಿದೆ. ನಾಯಕಿ ಪಾತ್ರದಲ್ಲಿ ಕೃಷಿ ತಾಪಂಡ ಗ್ಲಾಮರಸ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು , ಇಷ್ಟೇ ಅಲ್ಲದೆ ಅನೇಕ ಜಾಹಿರಾತುಗಳಲ್ಲೂ ಕೃಷಿ ಕಾಣಿಸಿಕೊಂಡಿದ್ದರು .

 

 

ಕರಾಳ ರಾತ್ರಿಯಲ್ಲಿ ಎಲ್ಲರ ಮನಗೆದಿದ್ದ ಅನುಪಮಾ

ಈಗಾಗಲೇ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ಹೊಸ ಸಿನಿಮಾ ‘ಆ ಕರಾಳ ರಾತ್ರಿ’ ಯಲ್ಲಿ ಅನುಪಮಾ ನಾಯಕಿ ಹಾಗು ಸೂಪರ್ ಸ್ಟಾರ್ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಹೀರೋ ಆಗಿದ್ದರು , ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾ ಹಂದರವಿದ್ದ ಈ ಚಿತ್ರ ವಿಮರ್ಶಕರ ಮನಗೆದ್ದಿತ್ತು , ಬಿಗ್ ಬಾಸ್ ಮುಗಿಸಿ ಬಂದ ಅನುಪಮಾಗೆ ಅದೃಷ್ಟ ಖುಲಾಯಿಸಿದೆ ಅನೇಕ ಜಾಹಿರಾತುಗಳು ಹಾಗೆಯೇ ಬೇರೆ ಭಾಷೆಯ ಚಿತ್ರಗಳಿಂದ ಅನುಪಮಾಗೆ ಆಫರ್ ಗಳು ಬರುತ್ತಿವೆ ಎಂದು ಹೇಳಲಾಗುತ್ತಿದೆ .

ಲಂಡನ್’ನಲ್ಲಿ ಲಂಬೋದರನಿಗಾಗಿ ಕಾಯುತ್ತಿರುವ ಶ್ರುತಿ ಪ್ರಕಾಶ್

ಬಿಗ್‌ಬಾಸ್ ಸೀಸನ್ ಐದರ ಕಡೇ ತನಕ ನಿರೀಕ್ಷೆ ಹುಟ್ಟಿಸಿದ್ದಾಕೆ ಶ್ರುತಿ ಪ್ರಕಾಶ್. ಅತ್ಯಂತ ಸಹಜವಾದ ವರ್ತನೆ, ಸೂಕ್ಷ್ಮ ಮನಸ್ಥಿತಿಯಿಂದ ಬಿಗ್‌ಬಾಸ್ ಪ್ರೇಕ್ಷಕರ ಮನ ಗೆದ್ದಿದ್ದ ಶ್ರುತಿ ಬಿಗ್‌ಬಾಸ್ ಶೋನಲ್ಲಿ ಗೆಲ್ಲದಿದ್ದರೂ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಗೆದ್ದಿದ್ದಾಳೆ. ಆಕೆ ಬಿಗ್‌ಬಾಸ್ ಶೋನಿಂದ ಹೊರ ಬರುತ್ತಲೇ ಅವಕಾಶಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಅದ್ಯಾವುದರತ್ತಲೂ ಮನಸು ಮಾಡದ ಶ್ರುತಿ ಇದೀಗ ಒಂದೊಂದೇ ಚಿತ್ರಗಳನ್ನು ಸಾಲು ಸಾಲಾಗಿ ಒಪ್ಪಿಕೊಳ್ಳುತ್ತಿದ್ದಾರೆ.

 

 

 

ಪಡ್ಡೆ ಹುಡುಗರಿಂದ ಕರ್ನಾಟಕದ ಕ್ರಶ್ ಅಂತಲೇ ಕರೆಸಿಕೊಂಡಿದ್ದ ಶ್ರುತಿ ಪ್ರಕಾಶ್’ಗೆ ಕನ್ನಡ ಚಿತ್ರರಂಗದಿಂದ ಆಫರ್’ಗಳ ಸುರಿಮಳೆ ಶುರುವಾಗಿದೆ .ಕೆಲವೇ ದಿನಗಳ ಹಿಂದೆಯಷ್ಟೇ ಸಿಂಪಲ್ ಸುನಿಯವರ ಸಹಾಯಕ ನಿರ್ದೇಶಕರಾಗಿದ್ದ ರಾಜ್ ಸೂರ್ಯ ಪ್ರಥಮ ಬಾರಿಗೆ ನಿರ್ದೇಶನ ಮಾಡುತ್ತಿರುವ ಲಂಡನ್’ನಲ್ಲಿ ಲಂಬೋದರ ಚಿತ್ರವನ್ನು ಒಪ್ಪಿಕೊಂಡು ತಮ್ಮ ಮೊದಲ ಕನ್ನಡ ಚಿತ್ರ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದರು ಶ್ರುತಿ ಪ್ರಕಾಶ್ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top