ಭವಿಷ್ಯ

ನೀವು ಮನೆ ಕಟ್ಟಲು ರೆಡಿ ಆಗಿದ್ರೆ ತಪ್ಪದೆ ಈ ಅವಶ್ಯಕ ವಿಷಯಗಳ ಬಗ್ಗೆ ಗಮನ ಕೊಡಿ

ನೀವು ಮನೆ ಕಟ್ಟಲು ತಯಾರಾಗಿದ್ದೀರಾ ಹಾಗಾದರೆ ಈ ವಿಷಯಗಳನ್ನು ಅವಶ್ಯವಾಗಿ ಪಾಲಿಸಿ.
ಮುಖ್ಯವಾಗಿ ಮನೆ ಕಟ್ಟುವ ಮೊದಲು ಒಂದು ಸೈಟು ಅಥವಾ ಜಾಗವನ್ನು ಖರೀದಿ ಮಾಡುತ್ತೇವೆ . ಒಂದು 30 -40 ಅಥವಾ ಯಾವುದೋ ಒಂದು ಸ್ಥಳವನ್ನು ಖರೀದಿ ಮಾಡಿರುತ್ತೇವೆ. ಆ ಖರೀದಿ ಮಾಡಿದ ಜಾಗದಲ್ಲಿ ಎಷ್ಟು ಆಯಾ ಮನೆಯನ್ನು ಕಟ್ಟಬೇಕು ಎಂದು ಹೇಳುತ್ತೇವೆ . ಈ ಆಯಾ ಅಥವಾ ಅಳತೆಯನ್ನು ನಿರ್ಮಾಣ ಮಾಡುವ ಮುಂಚಿತವಾಗಿ ಅದರ ಶುದ್ಧೀಕರಣ ಎಷ್ಟಿದೆ ? ಅಂದರೆ ಈ ಭೂಮಿ ಹೇಗೆಂದರೆ ಹಾಗೆ ಇರುತ್ತದೆ. ಭೂಮಿಯ ಒಳಗೆ ಯಾರನ್ನು ಯಾವಾಗ ಇಲ್ಲಿ ಮಣ್ಣು ಮಾಡಿದ್ದರು ಎಂದು ನಮಗೆ ತಿಳಿದಿರುವುದಿಲ್ಲ.

ಅದಕ್ಕೆ ನಾವು ಏನು ಮಾಡಬೇಕು ?ಎಂದರೆ ಮೊದಲು ಭೂಮಿ ಶುದ್ದಿಯನ್ನು ಮಾಡಿಕೊಳ್ಳಬೇಕು. ನಾವು ಯಾರ ಹೆಸರಿನಲ್ಲಿ ಈ ಭೂಮಿ ಇತ್ತು.ಯಾರ ಹೆಸರಿನಲ್ಲಿ ಈಗ ಖರೀಧಿ ಮಾಡಿದ್ದೇವೆ ? ಒಂದು ಹತ್ತು ವರ್ಷ ಇಪ್ಪತ್ತು ವರ್ಷ ಹಿಂದೆ ಯಾವ ಪ್ರಾಣಿಯನ್ನು ಅಲ್ಲಿ ಹೂತು ಹಾಕಿರಬಹುದು ಅಥವಾ ದೊಡ್ಡ ಮರವನ್ನು ಕಡಿದು ಹಾಕಿರಬಹುದು, ಹುತ್ತವನ್ನು ಹೊಡೆದು ಹಾಕಿರಬಹುದು. ಆಗ ಆ ಅತೀ ಹೆಚ್ಚು ನಾಕಾರಾತ್ಮಕ ಶಕ್ತಿ ಆ ಸ್ಥಳದಲ್ಲಿ ಹೆಚ್ಚಾಗಿ ಇರುತ್ತವೆ. ಮೊದಲು ಅದನ್ನು ಶುದ್ಧೀಕರಣ ಮಾಡಿಕೊಳ್ಳಬೇಕು. ಸರಳವಾಗಿ ಮೊದಲು ಋಣ ಯಾರದು ?ಯಾರ ಹೆಸರಲ್ಲಿ ಇದ್ದಂತಹ ಜಾಗ ಅದು ನಮ್ಮ ಹೆಸರಿಗೆ ಬಂದಿರುತ್ತದೆ. ಆದ್ದರಿಂದ ಮೊದಲು ಶುದ್ದೀಕರಿಸಿ ಕೊಳ್ಳಬೇಕು.
ಮೊದಲು ಉಪ್ಪನ್ನು ತೆಗೆದು ಕೊಳ್ಳಬೇಕು .20 ಅಥವಾ 30 ಕೆಜಿ ಕಲ್ಲುಪ್ಪನ್ನು ತೆಗೆದುಕೊಂಡು ಆ ಜಾಗದ ಎಲ್ಲಾ ಕಡೆಯಲ್ಲೂ ಮೊದಲು ಪ್ರೋಕ್ಷಣೆ ಮಾಡಬೇಕು. ಕನಿಷ್ಠ ಪಕ್ಷ ಒಂದು ತಿಂಗಳಾದರೂ ಹಾಗೆ ಆ ಉಪ್ಪನ್ನು ಕರಗಲು ಬಿಡಬೇಕು ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.

 

 

 

ಎರಡನೆಯದಾಗಿ ಗೋಮಯ ಮತ್ತು ಗೋಮೂತ್ರವನ್ನು ತೆಗೆದುಕೊಂಡು ಎಲ್ಲಾ ಕಡೆ ಸಿಂಪಡನೆ ಮತ್ತು ಪ್ರೋಕ್ಷಣೆಯನ್ನು ಮಾಡಬೇಕು. ನಂತರ ಈಗಾಗಲೇ ಪಾಯವನ್ನು ಹಾಕುತ್ತಿದ್ದಾರೆ ಎಂದರೆ 10 ಕೆಜಿ ಅರಿಶಿಣವನ್ನು ತೆಗೆದುಕೊಂಡು ಗೋಮೂತ್ರ ಅಥವಾ ನೀರಿನಲ್ಲಿ ಕಲಸಿಕೊಂಡು ಎಲ್ಲಾ ಕಡೆಯೂ ಚೆಲ್ಲಬೇಕು. ಈ ವಸ್ತುಗಳಿಂದ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಎಂತಹ ದೋಷ ಇದ್ದರು ಬೃಹದಾಕಾರದ ಮರವನ್ನು ಕಡಿದ ದೋಷವಿದ್ದರೂ ಕೂಡ ನಿವಾರಣೆಯಾಗುತ್ತದೆ.ಇದು ಪ್ರಥಮ ಹಂತದ ಶುದ್ಧೀಕರಣವಾಗಿರುತ್ತದೆ.
ಎರಡನೇ ಹಂತದ ಶುದ್ಧೀಕರಣ ಎಂದರೆ ಎಷ್ಟು ಹಳತೆಯಲ್ಲಿ ಮನೆಯನ್ನು ಕಟ್ಟಬೇಕು. ಕನಿಷ್ಠ ಪಕ್ಷವಾದರೂ ಒಂದು ಮನೆಯಿಂದ ಇನ್ನೊಂದು ಮನೆಗೆ ಮೂರು ಅಡಿ ಯಾದರೂ ಜಾಗ ಬಿಡಬೇಕು . ಒಂದು ಗೋಡೆಗೆ ಇನ್ನೊಂದು ಗೋಡೆಯನ್ನು ಅಂಟಿಕೊಂಡಂತೆ ಇರಬಾರದು. ಸಾಮಾನ್ಯವಾಗಿ ಕನಿಷ್ಠ ಪಕ್ಷ ಎಂದರೂ ಮೂರು ಅಡಿ ಜಾಗವನ್ನು ಬಿಡಬೇಕು. ಇಲ್ಲವೆಂದರೆ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. ಅದೇ ರೀತಿಯಲ್ಲಿ ಮೂರು ಅಡಿ ಜಾಗವನ್ನು ಬಿಟ್ಟು ಪಾಯವನ್ನು ಹಾಕಬೇಕು.

ಆಯಾಗಳಲ್ಲಿ ಕೆಲವು ಆಯಾಗಳು ಇರುತ್ತವೆ .ಉದಾಹರಣೆಗೆ ವೃಷಭಾಯ, ಗಜಾಯ ಎಂದು ಹೇಳುತ್ತೇವೆ. ಮನೆಯನ್ನು ಕಟ್ಟಬೇಕಾದರೆ ವೃಷಭಾಯ ತುಂಬಾ ಶ್ರೇಷ್ಠ . ಇದರ ನಂತರ ಗಜಾಯವನ್ನು ಹಾಕಬೇಕಾಗುತ್ತದೆ ನಂತರ ದ್ವಜಾಯ ಎನ್ನುವುದು ಇದೆ.ದ್ವಜಾಯ ಎಂದರೆ ಅದು ದೇವಸ್ಥಾನಗಳಿಗೆ ಅಥವಾ ಇನ್ನೊಂದು ಸಿಂಹಾಯ ಎಂದು ಬರುತ್ತದೆ .ಆಗ ಅದನ್ನು ಹಾಕಿದರೆ ನಾವು ಚೆನ್ನಾಗಿರುತ್ತೇವೆ.ನಮ್ಮ ಎದುರುಗಡೆ ಇರುವ ಮನೆಯವರು ಕೂರಗುತ್ತಾ ಇರುತ್ತಾರೆ. ಆದ್ದರಿಂದ ಈ ಸಿಂಹಾಯವನ್ನು ಎಲ್ಲಿ ಹಾಕಬೇಕು ಎಂದರೆ ಪೋಲಿಸ್ ಸ್ಟೇಷನ್ ಗೆ, ಈ ಸಿಂಹಾಯವನ್ನು ಹಾಕಿರುವ ಮನೆಯ ಯಜಮಾನನಿಗೆ ಯಾವಾಗಲೂ ಕೋಪ ಉಗ್ರ ಸ್ವರೂಪದಲ್ಲಿ ಇರುತ್ತಾನೆ. ಮಕ್ಕಳು, ಹೆಂಡತಿ ಎಲ್ಲರೂ ಭಯ ಬೀಳುತ್ತಾರೆ. ಮನೆಯಲ್ಲಿ ಮುಖ್ಯವಾಗಿ ಶಾಂತಿ ನೆಲೆಸಬೇಕು. ಆದ್ದರಿಂದ ಈ ಸಿಂಹಾಯವನ್ನು ಮನೆಗಳಿಗೆ ಹಾಕುವುದಿಲ್ಲ. ಕೋರ್ಟು, ಪೋಲಿಸ್ ಸ್ಟೇಷನ್, ನ್ಯಾಯಕ್ಕೆ ಸಂಬಂಧಪಟ್ಟ ಕಟ್ಟಡಗಳಿಗೆ ಈ ಸಿಂಹಾಯವನ್ನು ಹಾಕಲಾಗುತ್ತದೆ .

ಮೂರನೆಯದಾಗಿ ಮನೆಯ ನಿರ್ಮಾಣದ ಹಂತಕ್ಕೆ ಬಂದಾಗ 50 ವರ್ಷದ ಹಳೆಯ ಬಂಡೆಗಳನ್ನು ಹಾಕುವುದು. ಹಳೆಯ ಮನೆ ಹೊಡೆದ ಹಾಕಿರುವ ಇಟ್ಟಿಗೆಗಳನ್ನು ತಂದು ಈ ಮನೆಯನ್ನು ಕಟ್ಟಲು ಉಪಯೋಗಿಸುವುದು ಮತ್ತು ಹಳೆ ಕಲ್ಲುಗಳನ್ನು ಬಳಸಿದರೆ ಆಯಸ್ಸು ಪರಿಪೂರ್ಣವಾಗಿರುತ್ತದೆ.ಕಲ್ಲುಗಳನ್ನು ಉಪಯೋಗಿಸಬಹುದು ಅಥವಾ ಬಾವಿಯಾಗಿರುತ್ತದೆ ಅಲ್ಲಿಂದ ತಂದಂತಹ ಕಲ್ಲುಗಳನ್ನು ಉಪಯೋಗಿಸಬಾರದು ಅದರಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತವೆ .ನೂರಕ್ಕೆ ತೊಂಬತ್ತು 99% ವಾಸ್ತು ಪ್ರಕಾರದಲ್ಲಿ ಮನೆಯನ್ನು ಕಟ್ಟಿದರೂ ಕೂಡ ಮನೆಯಲ್ಲಿ ಆರ್ಥಿಕ ಸ್ಥಿತಿ ಕೆಟ್ಟು ಹೋಗಿರುತ್ತದೆ. ಯಾಕೆಂದರೆ ಮನೆಯೊಳಗೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಇರುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top