ದೇವರು

ಭಾದ್ರಪದ ಮಾಸದಲ್ಲಿ ವಿಷ್ಣುವಿನ 10 ಅವತಾರಗಳ ಪೂಜೆ,ಭಜನೆ ಹಾಗೂ ಆರಾಧನೆಯಿಂದ ನಿಮ್ಮ ಜೀವನ ಬದಲಾಗಿ ಸಿಗುವ ಫಲ ಏನೇನು ಗೊತ್ತಾ

ಭಾದ್ರಪದ ಮಾಸದಲ್ಲಿ ವಿಷ್ಣುವಿನ ಹತ್ತು ಅವತಾರಗಳ ಪೂಜೆ ಮತ್ತು ದಶಾವತಾರಿಯಾದ ವಿಷ್ಣುವಿನ ಭಜನೆ ಆರಾಧನೆಯಿಂದ ಏನು ಫಲ.ನರಸಿಂಹನ ಪೂಜೆಯಿಂದ ಶತ್ರುನಾಶ ,ವರಹಾ ಅವತಾರ ಪೂಜೆಯಿಂದ ರಾಜಕೀಯ ಕ್ಷೇತ್ರದಲ್ಲಿ ಉನ್ನತಿ, ದಶಾವತಾರಿ ವಿಷ್ಣುವಿನ ಆರಾಧನೆಯಿಂದ ಫಲಗಳೇನು ?

ಭಾದ್ರಪದ ಮಾಸದಲ್ಲಿ ವಿಷ್ಣುವಿನ ಆರಾಧನೆಯನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಇಂದು ನಾವು ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ತಿಳಿದುಕೊಳ್ಳೋಣ…. ಯಾವ್ಯಾವ ಯುಗದಲ್ಲಿ ಯಾವ ಯಾವ ಅವತಾರವನ್ನು ಎತ್ತಿ ಲೋಕವನ್ನು ಉದ್ಧರಿಸಿದ್ದಾನೆ ಎನ್ನುವ ವಿಷಯವನ್ನು ತಿಳಿಯೋಣ.
ಯಾವಾಗ ಧರ್ಮ ನಾಶವಾಗುತ್ತದೆಯೋ, ಅದರ್ಮ ಮಿತಿಮೀರುತ್ತದೆಯೋ, ಆಗ ನಾನು ಅವತಾರ ಎತ್ತುತ್ತೇನೆ. ಶಿಷ್ಟ ರಕ್ಷಣೆಗಾಗಿ ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ. ಇದು ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀ ಕೃಷ್ಣನೇ ಹೇಳಿರುವ ಮಾತು.ಈ ಮಾತಿನಂತೆ ಶ್ರೀಮಹಾವಿಷ್ಣು ದುಷ್ಟ ಶಕ್ತಿಯ ನಾಶಕ್ಕಾಗಿ ಧರ್ಮರಕ್ಷಣೆಗಾಗಿ ಕಾಲಕಾಲಕ್ಕೆ ಭೂಮಿಯ ಮೇಲೆ ಹತ್ತು ಅವತಾರಗಳನ್ನು ತಳೆದಿದ್ದಾನೆ. ಇದೆ ವಿಷ್ಣುವಿನ ದಶಾವತಾರ.ವಿಷ್ಣುವಿನ ದಶಾವತಾರಗಳು ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ, ನರಸಿಂಹಾವತಾರ, ವಾಮನಾವತಾರ ,ಪರಶುರಾಮ ಅವತಾರ ,ರಾಮಾವತಾರ, ಕೃಷ್ಣಾವತಾರ, ಬುದ್ಧಾವತಾರ ಮತ್ತು ಕಲ್ಕಿ ಅವತಾರ.

ವಿಷ್ಣು ಯಾವ ಯಾವ ಯುಗಗಳಲ್ಲಿ ಯಾವ ಯಾವ ಅವತಾರ ತಳೆದನು ಎನ್ನುವುದನ್ನು ನೋಡಿದರೆ ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ ಮತ್ತು ನರಸಿಂಹಾವತಾರ ಈ ನಾಲ್ಕು ಅವತಾರಗಳು ಸತ್ಯಯುಗದಲ್ಲಿ ಸಂಭವಿಸಿವೆ. ವಾಮನ ಅವತಾರ, ಪರಶುರಾಮ ಅವತಾರ, ರಾಮ ಅವತಾರ, ತ್ರೇತಾಯುಗದಲ್ಲಿ ಆಗಿವೆ. ಎಂಟನೇ ಅವತಾರವಾದ ಕೃಷ್ಣ ಅವತಾರ ದ್ವಾಪರ ಯುಗದಲ್ಲಿ ಆಗುತ್ತದೆ .ಒಂಬತ್ತನೆಯ ಅವತಾರ ಬುದ್ಧಾವತಾರ ಕಲಿಯುಗದಲ್ಲಿ ಆಗಿದೆ. ಹತ್ತನೇ ಅವತಾರ ಕಲ್ಕಿ ಅವತಾರ ಕಲಿಯುಗದ ಕೊನೆಯಲ್ಲಿ ಸಂಭವಿಸುವುದಾಗಿ ಹೇಳಲಾಗುತ್ತದೆ.

 

 

 

ವಿಷ್ಣುವಿನ ಅವತಾರಗಳಲ್ಲಿ ಒಂದೊಂದು ರೂಪವು ಅತ್ಯಂತ ವಿಶಿಷ್ಟ. ಇಷ್ಟಕ್ಕೂ ಪ್ರತಿ ಅವತಾರದಲ್ಲಿ ವಿಷ್ಣು ಮಾಡಿದ ಕಾರ್ಯ, ಧರ್ಮರಕ್ಷಣೆಗಾಗಿ ಅವನು ಏನು ಮಾಡಿದ್ದಾನೆ ? ಎನ್ನುವುದನ್ನು ನೋಡಿದರೆ ಮತ್ಸ್ಯಾವತಾರದಲ್ಲಿ ಮೀನಿನ ಅವತಾರ ತಳೆದು, ಮಾನವನ ಮೂಲ ಪುರುಷ ಮಾನವಕುಲದ ಮೂಲ ಪುರುಷ ಮನುವನ್ನು ಪಾರು ಮಾಡಿದ್ದ , ಹಯಗ್ರೀವ ಎಂಬ ರಾಕ್ಷಸನನ್ನು ವಧಿಸಿ ವೇದಗಳನ್ನು ರಕ್ಷಣೆ ಮಾಡಿದ. ಕೂರ್ಮಾವತಾರದಲ್ಲಿ ಆಮೆಯ ಅವತಾರವನ್ನು ತಳೆದು ಸಮುದ್ರಮಂಥನದ ವೇಳೆ ಸಾಗರ ಕಡೆಯಲು ನೆರವಾಗಿದ್ದ. ವರಹ ಅವತಾರದಲ್ಲಿ ಹಂದಿಯ ಅವತಾರವೆತ್ತಿ ಹಿರಣ್ಯಾಕ್ಷನಿಂದ ಭೂಮಿಯನ್ನು ರಕ್ಷಿಸಿದ್ದ. ನರಸಿಂಹ ಅವತಾರದಲ್ಲಿ ಅರ್ಧ ಮನುಷ್ಯ ಅರ್ಧ ಸಿಂಹನಾಗಿ ದುಷ್ಟ ಅಸುರ ಹಿರಣ್ಯಕಶಪುವನ್ನು ಸಂಹಾರ ಮಾಡಿ ಪ್ರಹ್ಲಾದನನ್ನು ರಕ್ಷಿಸಿದ. ವಾಮನ ಅವತಾರದಲ್ಲಿ ಕುಬ್ಜ ಅವತಾರವನ್ನು ವೆತ್ತಿ ಮಹಾಬಲಿಯ ಅಹಂಕಾರವನ್ನು ಅಡಗಿಸಿದ್ದ, ಪರಶುರಾಮ ಅವತಾರದಲ್ಲಿ ಸಾವಿರ ಕೈಗಳುಳ್ಳ ಕಾರ್ತ್ಯವೀರ್ಯಾರ್ಜುನನನ್ನು ಸೋಲಿಸಿದ್ದ . ರಾಮಾವತಾರದಲ್ಲಿ ಅಯೋಧ್ಯೆಯ ರಾಜನಾಗಿ ಪಡಬಾರದ ಕಷ್ಟಪಟ್ಟು ಅರಣ್ಯ ವಾಸ ಅನುಭವಿಸಿದ್ದ ,ರಾವಣನ ಸಂಹಾರ ಮಾಡಿ ಆ ಮುಖಾಂತರ ಧರ್ಮವನ್ನು ರಕ್ಷಣೆ ಮಾಡಿದ್ದ, ಕೃಷ್ಣಾವತಾರದಲ್ಲಿ ಶ್ರೀಕೃಷ್ಣ ದ್ವಾರಕೆಯ ರಾಜನಾಗಿದ್ದ ಧರ್ಮಸ್ಥಾಪನೆಗಾಗಿ ಮಹಾಭಾರತದ ಕೇಂದ್ರಬಿಂದುವಾಗಿದ್ದ ರಣರಂಗದಲ್ಲಿ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ. ಮಹಾವಿಷ್ಣುವಿನ ಈ ಎಲ್ಲ ಅವತಾರಗಳ ಜಂಜಾಟವನ್ನು ಮುಗಿಸಿ ಶಾಂತ ಮನಸ್ಥಿತಿಯನ್ನು ಪಡೆಯುವುದೇ ಬುದ್ಧಾವತಾರ.ಈ ಬುದ್ಧಅವತಾರದ ನಂತರ ಕಲಿಯುಗದ ಕೊನೆಯಲ್ಲಿ ಕಲ್ಕಿ ಅವತಾರವನ್ನು ಎತ್ತಿ ಬರುವ ವಿಷ್ಣು ಕ್ರೌರ್ಯವನ್ನು ಶಾಶ್ವತವಾಗಿ ನಾಶಮಾಡುತ್ತಾನೆ. ನಶಿಸಿಹೋಗಿರುವ ಧರ್ಮವನ್ನು ಸ್ಥಾಪನೆ ಮಾಡುತ್ತಾನೆ ಎಂಬ ನಿರೀಕ್ಷೆ ಇದೆ.

ಭಾದ್ರಪದ ಮಾಸದಲ್ಲಿ ವಿಷ್ಣುವಿನ ದಶಾವತಾರ ರೂಪಗಳ ಆರಾಧನೆ ಮತ್ತು ದಶಾವತಾರಿ ವಿಷ್ಣುವಿನ ಆರಾಧನೆಯ ಫಲಗಳೇನು ?
ಶುಭ ಭಾದ್ರಪದ ಮಾಸ ಆರಂಭವಾಗಿದೆ. ಈ ಮಾಸ ಗೌರಿ ಗಣೇಶ ಚತುರ್ಥಿ, ಅನಂತಪದ್ಮನಾಭ ಸೇರಿದಂತೆ ಹಲವಾರು ಹಬ್ಬಗಳನ್ನು ಹೊತ್ತು ತರುತ್ತದೆ. ನಿಮಗೆಲ್ಲಾ ಗೊತ್ತಿರುವಂತೆ ಒಂದೊಂದು ಮಾಸಕ್ಕೆ ಒಬ್ಬೊಬ್ಬ ನಾಮಕ ದೇವರು ಇರುತ್ತಾನೆ. ಆ ಪ್ರಕಾರ ಈ ಮಾಸದ ಅಧಿಪತಿ ದೇವತೆ ಋಷಿಕೇಶ. ಋಷಿಕೇಶ ಬೇರೆ ಯಾರು ಅಲ್ಲ ಶ್ರೀಮನ್ನಾರಾಯಣನ ರೂಪವೇ ಆಗಿದ್ದಾನೆ. ಈ ಭಾದ್ರಪದ ಮಾಸದ ನಾಮಕ ದೇವತೆ ಶ್ರೀ ಮಹಾವಿಷ್ಣು. ವಿಶೇಷ ಎಂದರೆ ಮಹಾವಿಷ್ಣು ವಾಮನ ಅವತಾರದ ರೂಪ ತಳೆದದ್ದು ಇದೇ ಮಾಸದಲ್ಲಿ. ಆದ್ದರಿಂದ ಈ ಮಾಸದಲ್ಲಿ ದಶಾವತಾರಿ ರೂಪಗಳನ್ನು ನೆನೆಯಬೇಕು. ಹಾಗೆ ದಶಾವತಾರದ ನಾರಾಯಣನನ್ನು ನೆನೆದು ಈ ಮಾಸದಲ್ಲಿ ಆರಾಧನೆ ಮಾಡಿದರೆ ಅವನ ಸಂಪೂರ್ಣ ಕೃಪೆ ಪ್ರಾಪ್ತಿಯಾಗುತ್ತದೆ.ಈ ಭಾದ್ರಪದ ಮಾಸದಲ್ಲಿ ವಿಷ್ಣುವಿನ ದಶಾವತಾರ ಆರಾಧನೆಯಿಂದ ಭಕ್ತರಿಗೆ ಲೆಕ್ಕವಿಲ್ಲದಷ್ಟು ಲಾಭವಾಗುತ್ತದೆ. ಶ್ರೀಮನ್ನಾರಾಯಣನ ಸಂಪೂರ್ಣ ಕೃಪೆ ಭಕ್ತರ ಮೇಲಿರುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

 

ವಿಷ್ಣುವಿನ ಆರಾಧನೆಯ ಪೂಜಾ ಫಲ.
ವಿಷ್ಣುವಿನ ಆರಾಧನೆಯನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಪುರುಷ ಸೂಕ್ತ ,ಗಾಯಿತ್ರಿ ಮಂತ್ರವನ್ನು ಪಠಿಸಿ ವಿಷ್ಣುವಿನ ಅನುಗ್ರಹಕ್ಕಾಗಿ ಮೀನುಗಳಿಗೆ ಆಹಾರ ನೀಡಿ. ನೀರಿನ ಅಭಾವವಿರುವ ಅವರಿಗೆ ನೀರಿನ ವ್ಯವಸ್ಥೆ ಮಾಡಿ ವೃದ್ಧರಿಗೆ ಅಪಾರ ಗೌರವವನ್ನು ನೀಡಿ, ಅಸಹಾಯಕರಿಗೆ ಸಹಾಯ ಮಾಡಿ. ಧರ್ಮಗ್ರಂಥಗಳನ್ನು ದಾನ ಮಾಡಿ, ಹೀಗೆ ಮತ್ಸ್ಯಾವತಾರಿ ವಿಷ್ಣುವಿನ ಆರಾಧನೆಯಿಂದ ಜ್ಞಾನಾರ್ಜನೆಯಾಗುತ್ತದೆ.
ಕೂರ್ಮಾವತಾರದ ಆರಾಧನೆ ಮತ್ತು ಫಲ.
ಕೂರ್ಮಾವತಾರ ವಿಷ್ಣುವಿನ ರೂಪವನ್ನು ಮನಸ್ಸಿನಲ್ಲಿ ಧಾರಣೆ ಮಾಡಿಕೊಂಡು ಆತನನ್ನು ಸಕಲ ರೋಗಗಳಿಂದ ಮುಕ್ತಿ ಗೊಳಿಸುವಂತೆ ಬೇಡಿಕೊಳ್ಳಿ, ದೀರ್ಘಾಯುಷ್ಯಕ್ಕಾಗಿ ಬೇಡಿಕೊಳ್ಳಿ, ನಾಯಿಗಳಿಗೆ ಆಹಾರ ನೀಡಿ, ಸಹೋದರರೊಂದಿಗೆ ತೀರ್ಥಯಾತ್ರೆ ಮಾಡಿ.

ವರಹ ಅವತಾರಿ ವಿಷ್ಣುವಿನ ಆರಾಧನೆ ಮತ್ತು ಫಲ
“ ಓಂ ನಮೋ ಭಗವತಿ ವರಾಹಾಯ ನಮಃ” ಬುದ್ಧಮ್ ಶರಣಂ ಗಚ್ಚಾಮಿ ಈ ಮಂತ್ರ ಪಠಿಸುವುದರಿಂದ ಅತ್ಯಂತ ಒಳ್ಳೆಯದಾಗುತ್ತದೆ, ತುಳಸಿ ಮಂತ್ರ ಹಿಡಿದು ಮಂತ್ರವನ್ನು ಜಪಿಸಿ ವಿಷ್ಣುವಿನ ವರಹಾ ಅವತಾರದ ಪೂಜೆಯಿಂದ ಮುಖ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ ಉನ್ನತಿ ಗಳಿಸಬಹುದು, ಸಾಧನೆಯನ್ನು ಮಾಡಬಹುದು.
ನರಸಿಂಹಾವತಾರದ ಆರಾಧನೆಯ ಪೂಜಾ ಫಲ
ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ಕುಳಿತು “ಓಂ ನಮೋ ಭಗವತೇ ನಾರಸಿಂಹಯ ನಮಃ” ಈ ಮಂತ್ರವನ್ನು ಜಪಿಸಿ 23 ನಿಂಬೆಹಣ್ಣಿನ ಹಾರವನ್ನು ಸ್ವಾಮಿಗೆ ಅರ್ಪಿಸುವುದರಿಂದ ದುಷ್ಟ ಶಕ್ತಿಗಳು ನಾಶವಾಗುತ್ತವೆ. ಕೋರ್ಟ್ ಕಚೇರಿ ಕಲಹಗಳಲ್ಲಿ ವಿಜಯವನ್ನು ಗಳಿಸುತ್ತೀರಿ.

ವಾಮನ ಅವತಾರ ಆರಾಧನೆ ಮತ್ತು ಪೂಜಾ ಫಲ .
ವಿಷ್ಣುವಿನ ವಾಮನ ಅವತಾರವನ್ನು ಮನಸ್ಸಿನಲ್ಲಿ ಸ್ಮರಿಸಿ ,ವಿಷ್ಣು ಸಹಸ್ರನಾಮ ಪಠಣ ಮಾಡಿ, ಛತ್ರಿ ದಾನ ಮಾಡಿ, ವಿಷ್ಣುವಿನ ವಾಮನ ರೂಪದ ಆರಾಧನೆಯಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
ದಶಾವತಾರಿ ಭಗವಂತನ ಆರಾಧನೆಯಿಂದ ನಾರಾಯಣ ಅತಿ ಬೇಗ ಪ್ರಸನ್ನನಾಗುತ್ತಾನೆ. ಮನುಷ್ಯನ ಬೆಳವಣಿಗೆಯ ಗುಟ್ಟು ವಿಷ್ಣುವಿನ ದಶಾವತಾರದಲ್ಲಿ ಅಡಗಿದೆ. ಪರಶುರಾಮ ಅವತಾರ ಜಮದಗ್ನಿಯ ಪುತ್ರನಾಗಿ ಭಗವಂತ ಸ್ವಯಂ ಅವತರಿಸಿದ ರೂಪವೇ ಪರಶುರಾಮ ಅವತಾರ ಈ ಅವತಾರದಲ್ಲಿ ಪ್ರಜಾಪೀಡಕ ರಾದ ಅಸುರರನ್ನು ಸಂಹರಿಸಿದ. ಪರಶಿವನ ಶಸ್ತ್ರವಾದ್ದರಿಂದ ಇವನಿಗೆ ಪರಶುರಾಮ ಎನ್ನುವ ಹೆಸರು ಬಂತು.
ಪರಶುರಾಮ ಅವತಾರದ ಆರಾಧನೆಯಿಂದ ಪೂಜಾ ಫಲಗಳು
ರಾಮಾಯಣದ 5ನೇ ಅಧ್ಯಾಯವನ್ನು ಓದಿ, ಭಗವಂತನಿಗೆ ಮೊಸರು ಮತ್ತು ಒಡೆಯ ನೈವೇದ್ಯವನ್ನು ಮಾಡಿ, ಹಸುವಿಗೆ ಧಾನ್ಯವನ್ನು ತಿನ್ನಿಸಿ,ಪರಶುರಾಮನ ಆರಾಧನೆಯಿಂದ ಜ್ಞಾನವೃದ್ಧಿ, ಸಕಲ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.
ರಾಮಾವತಾರ ತ್ರೇತಾಯುಗದಲ್ಲಿ ದಶರಥನ ಮಗನಾಗಿ ರಾಮನಾಗಿ ಭಗವಂತ ಚೈತ್ರ ಶುಕ್ಲಪಕ್ಷದ ನವಮಿಯಂದು ಜನಿಸಿದ ರಾವಣನ ವಧೆ ಮಾಡಿದ. ಆ ಮುಖಾಂತರ ಧರ್ಮ ರಕ್ಷಣೆ ಮಾಡಿದ ರಾಮಾವತಾರ ಆರಾಧನೆ ಹಾಗೂ ಫಲಗಳು.ರಾಮರಕ್ಷಾ ಸ್ತೋತ್ರವನ್ನು ಪಠಿಸಿ, “ಓಂ ರಾಮ ಜೈ ರಾಮ ಜೈ ಜೈ ರಾಮ” ಈ ಮಂತ್ರ ಪಠಿಸಿ ತಂದೆ-ತಾಯಿ ಗುರುಗಳ ಆಶೀರ್ವಾದ ಪಡೆಯಿರಿ, ವಸ್ತ್ರ ದಾನ ಮಾಡಿ, ಶ್ರೀರಾಮ ಪೂಜೆಯಿಂದ ಸಕಲ ಕಾರ್ಯಗಳಲ್ಲಿಯೂ ಜಯ ಲಭಿಸುತ್ತದೆ.

 

 

 

ಕೃಷ್ಣಾವತಾರ ದ್ವಾಪರಯುಗದಲ್ಲಿ ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿಯಂದು ಮಧ್ಯರಾತ್ರಿಯಲ್ಲಿ ಕೃಷ್ಣ ಜನಿಸಿದ ಕಂಸನನ್ನು ವದಿಸಲು ಧರ್ಮರಕ್ಷಣೆಗಾಗಿ ಭಗವಂತ ಈ ಅವತಾರ ತಾಳಿದ ಲೀಲಾ ಪುರುಷೋತ್ತಮ ಕೃಷ್ಣ ಎಂದರೆ ಆಕರ್ಷಣೆ. ತನ್ನ ಸುಂದರ ರೂಪ ಮಾಧುರ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತಾನೆ.
ಕೃಷ್ಣಾವತಾರ ಆರಾಧನೆ ಹಾಗೂ ಫಲಗಳು.
ಕೃಷ್ಣನ ವಿಗ್ರಹ ಅಥವಾ ಫೋಟೋ ಪೂಜಿಸಿ “ಓಂ ನಮೋ ಭಗವತೇ ವಾಸುದೇವಾಯ ನಮಃ”ಈ ಮಂತ್ರವನ್ನು ಜಪಿಸಿ ಗುರುವಾರಗಳಂದು ಬಾಳೆಗಿಡವನ್ನು ಪೂಜಿಸಿ, ಹಳದಿ ವಸ್ತ್ರ ಧರಿಸಿ ಭಗವದ್ಗೀತೆಯನ್ನು ಓದಿ ,ಭಗವದ್ಗೀತೆಯ 12 ಪುಸ್ತಕಗಳನ್ನು ದಾನ ಮಾಡಿ. ಕೃಷ್ಣನ ಪೂಜೆ ಮಾಡಿದರೆ ಕಷ್ಟಗಳಿಂದ ಮುಕ್ತಿ, ಸುಖೀ ದಾಂಪತ್ಯ, ಸಂತಾನ ಪ್ರಾಪ್ತಿಯಾಗುತ್ತದೆ.
ಬುದ್ಧಾವತಾರ. ಬುದ್ಧನಾಗಿ ಸ್ವಾಮಿ ಮೋಕ್ಷದ ಮಾರ್ಗವನ್ನು ಜನರಿಗೆ ತೋರಿಸಿದ , ಇಲ್ಲೇ ಸ್ವರ್ಗ, ಇಲ್ಲೇ ನರಕ ಭಗವಂತ ಈ ಅವತಾರದ ರೂಪದಲ್ಲಿ ಉಪದೇಶಿಸಿದ ಬುದ್ಧ ಅವತಾರ ಬುದ್ಧ ಅವತಾರ ಆರಾಧನೆ ಹಾಗೂ ಫಲಗಳು ಬಿಳಿ ವಸ್ತ್ರ ಧರಿಸಿ “ಬುದ್ದಂ ಶರಣಂ ಗಚ್ಚಾಮಿ’ಈ ಮಂತ್ರ ಜಪಿಸಿ ಬುದ್ಧನ ಆರಾಧನೆಯಿಂದ ಸಕಲ ರೋಗಗಳು ದೂರವಾಗುತ್ತವೆ.

ಕಲ್ಕಿ ಅವತಾರ.
ಇದು ವಿಷ್ಣುವಿನ ಅಂತಿಮ ಅವತಾರ. ಪರಮಾತ್ಮನ ಸೃಷ್ಟಿ ನಿರ್ಮಾಣದ ನಂತರ ಮತ್ತು ನವನವೀನ ಎಂಬ ಸೂಚನೆಯೇ ಕಲ್ಕಿ ಅವತಾರ. ಕಲಿಯುಗದ ಅಂತ್ಯದಲ್ಲಿ ಕಲ್ಕಿ ರೂಪದಲ್ಲಿ ಭಗವಂತ ಅವತರಿಸುತ್ತಾನೆ ಎಂಬ ನಂಬಿಕೆ ಇದೆ. ದಶಾವತಾರದ ಪರಿಕಲ್ಪನೆಯಲ್ಲಿ ಜೀವನದ ವಿಕಾಸದ ಚಿತ್ರಣವಿದೆ. ಮೊದಲು ಕಾಣಿಸಿಕೊಂಡಿದ್ದು ಜಲಚರ ಜೀವಿಗಳು ಎಂಬುದನ್ನು ಸೂಚಿಸಿದರೆ ನಂತರ ಉಭಯವಾಸಿ ಜೀವಿಗಳು ಸೃಷ್ಟಿಯಾದವು ಎಂಬುದನ್ನು ಕೂರ್ಮಾವತಾರ ಸೂಚಿಸುತ್ತದೆ. ಸಸ್ತನಿಗಳು ವರಹಾ ಅವತಾರ ಸೂಚಿಸಿದರೆ, ಪ್ರಾಣಿ ಸ್ಥಿತಿಯಿಂದ ಮಾನವ ವಿಕಾಸಗೊಂಡದ್ದು ಎಂಬುದನ್ನು ನರಸಿಂಹ ಅವತಾರ ಸೂಚಿಸುತ್ತದೆ, ಆರಂಭದಲ್ಲಿ ಕಾಣಿಸಿಕೊಂಡ ಮಾನವನನ್ನು ವಾಮನ ಅವತಾರ ಸೂಚಿಸಿದರೆ, ವಿಕಾಸಗೊಂಡ ಆದರ್ಶವಾದಿ ಮಾನವನನ್ನು ರಾಮ ಅವತಾರ ಸೂಚಿಸುತ್ತದೆ. ರಾಜನೀತಿತಜ್ಞ ಪಾತ್ರವನ್ನು ಶ್ರೀಕೃಷ್ಣನು ಆಧ್ಯಾತ್ಮಿಕ ವಿಕಾಸವನ್ನೂ ಸೂಚಿಸುತ್ತದೆ, ಆದರೆ ಮಾನವ ರೂಪ ಹೀಗೆ ದಶಾವತಾರದ ಕಲ್ಪನೆಯಲ್ಲಿ ಮಾನವ ವಿಕಾಸ ಚಕ್ರ ,ಮನುಷ್ಯನ ಬೆಳವಣಿಗೆ ವಿಷ್ಣುವಿನ ದಶಾವತಾರ ತಿಳಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top