ಸಿನಿಮಾ

‘ಬಾಲಿ’ಗೆ ಹಾರಿ ಮೋಜು ಮಸ್ತಿಯಲ್ಲಿ ಮುಳುಗಿದ ‘ಬಿಗ್ ಬಾಸ್ ಚಿಟ್ಟೆಗಳು.ಫೋಟೋ ಒಳಗಿದೆ

ಕಳೆದ ಕನ್ನಡದ ‘ಬಿಗ್ ಬಾಸ್-5’ ಸೀಸನ್ ನಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳಾಗಿ ಭಾಗವಹಿಸಿ ,ಅಲ್ಲಿ ಸಾಕಷ್ಟು ಆಕ್ಟಿವ್ ಆಗಿ ಎಲ್ಲ ಆಟದಲ್ಲೂ ಭಾಗವಹಿಸಿ ಅತಿ ಹೆಚ್ಚಿನ ಜನಪ್ರಿಯತೆ ಯಿಂದ ತುಂಬಾ ಸಂಚಿಕೆವರಿಗೂ ಬಿಗ್ ಬಾಸ್ ಮನೆಯಲ್ಲಿ ಇದ್ದು ಕೊನೆಗೆ ಹೊರಬಂದು ಇಡೀ ಕರ್ನಾಟಕ ಜನರ ಪ್ರೀತಿ ವಿಶ್ವಾಸ ಪಡೆದ ಹೆಣ್ಣು ಮಕ್ಕಳು ಈ 3 ಜನ,3 ಜನ ಯಾರು ಅನ್ಕೊಂಡ್ರಾ ,ಅವ್ರು ಯಾರು ಅಂದ್ರೆ ಕೃಷಿ ತಾಪಂಡ, ಶ್ರುತಿ ಪ್ರಕಾಶ್ ಹಾಗೂ ಅನುಪಮಾ ಗೌಡ.
ಸಾಮಾನ್ಯವಾಗಿ ಎರಡು ಜಡೆ ಸೇರಿದರೆ ಜಗಳ ಖಂಡಿತಾ ಅಂತಾರೆ ಆದ್ರೆ ಬಿಗ್ ಬಾಸ್ ಶೋನಲ್ಲಿ ಒಳಗೆ ಇರುವುದರಿಂದ ಹಿಡಿದು ಹೊರಗಡೆ ಬಂದ ಮೇಲೆ ಈ ಮೂವರ ಮಧ್ಯ ಇರುವ ಪ್ರೀತಿ ,ವಿಶ್ವಾಸ ಹಾಗೂ ಸ್ನೇಹ ನೋಡಿದ್ರೆ ಎಂತವರಿಗೂ ಹೊಟ್ಟೆ ಕಿಚ್ಚಗುತ್ತೆ.

ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಇವರುಗಳು ಅವರವರ ಅಭಿಮಾನಿಗಳಿಗೆ ಟಚ್ ನಲ್ಲಿ ಇರುವುದು ಸಾಮಾಜಿಕ ಜಾಲತಾಣದ ಮೂಲಕ ,ಅವರ ಪ್ರತಿಯೊಂದು ಚಟುವಟಿಕೆ ಕೂಡ ಅದರ ಮೂಲಕ ಜನರಿಗೆ ಗೊತ್ತಾಗುತ್ತಾ ಹೋಗುತ್ತದೆ .ಈಗ ಈ ಮೂವರ ಸ್ನೇಹ ಮುಂದುವರೆದಿದ್ದು ಎಷ್ಟರಮಟ್ಟಿಗೆ ಅಂದ್ರೆ, ಫಾರಿನ್ ಟ್ರಿಪ್ ಗೆ ಜೊತೆಗೆ ಹೋಗುವವರೆಗೆ.ಈ 3 ಜನ ನಟಿ ಕೃಷಿ ತಾಪಂಡ, ಅನುಪಮಾ ಗೌಡ ಹಾಗೂ ಶ್ರುತಿ ಪ್ರಕಾಶ್ ಈ ನಟಿಮಣಿಯರ ಪ್ರಯಾಣ ಹೊರಟಿದ್ದು ಇಂಡೋನೇಷಿಯಾ ಕಡೆಗೆ, ಹೌದು ಈ 3 ಜನ ಒಟ್ಟಿಗೆ ಇಂಡೋನೇಷಿಯಾ ಹಾರಿದ್ದಾರೆ,ಅದು ಇಂಡೋನೇಷಿಯಾದ ಅತಿ ಅದ್ಬುತ ರಮಣೀಯ ಕಣ್ಮನ ಸೆಳೆಯುವ ತಾಣ ‘ಬಾಲಿ’ಗೆ.
ಬಿಗ್ ಬಾಸ್ ಯಿಂದ ಹೊರಬಂದ ಪ್ರತಿಯೊಬ್ಬ ಸ್ಪರ್ಧಿಗಳು ಹೇಳ್ತಾಇದದ್ದು ಎಲ್ಲ ಸೇರಿ ಒಂದು ಟ್ರಿಪ್ ಗೆ ಹೋಗಬೇಕು ಅಂತ ಅಂದ್ರೆ ಅದು ಬರೀ ಪ್ಲಾನ್ ಆಗೇ ಉಳಿತ್ತು,ಅದನ್ನ ನಿಜ ರೂಪಕ್ಕೆ ತಂದದ್ದು ಮಾತ್ರ ಈ ಮೂವರು ಹುಡುಗಿಯರು,ಅವರ ಪ್ಲಾನ್ ಹೊರಟದ್ದು ‘ಬಾಲಿ’ಗೆ.

 

 

 

ಬಿಗ್ ಬಾಸ್ ಕಾರ್ಯಕ್ರಮ ಈ 3 ಜನ ಹುಡುಗಿಯರಿಗೂ ಒಳ್ಳೆಯ ಬ್ರೇಕ್ ಕೊಡ್ತು,ಬಿಗ್ ಬಾಸ್’ನಂತರ ಶ್ರುತಿ ಪ್ರಕಾಶ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. ‘ಲಂಡನ್ ನಲ್ಲಿ ಲಂಬೋದರ’ ಎಂಬ ಚಿತ್ರಕ್ಕೆ ನಾಯಕಿ ಆದ್ರೂ ,ಕೃಷಿ ಅಭಿನಯದ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರ ತೆರೆಗೆ ಬಂತು.ಹಾಗೇ ಸಿನಿಮಾ ಆಫರ್ ಗಳ ಸಂಖ್ಯೆ ಹೆಚ್ಚಾಗಿದ್ದೇ ಕೃಷಿ ಒಳ್ಳೆಯ ಸ್ಕ್ರಿಪ್ಟ್ ಗಳ ಆಯ್ಕೆಯಲ್ಲಿ ಬ್ಯುಸಿ ಯಾಗಿದ್ದಾರೆ ಹಾಗೂ ಅನುಪಮಾ ಆಗಲೇ ‘ಆ ಕರಾಳ ರಾತ್ರಿ’ ಎಂಬ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ ,ಈಗ ಸಂಗೀತ ಕಾರ್ಯಕ್ರಮ ಒಂದರಲ್ಲಿ ನಿರೂಪಕಿಯಾಗಿ ಬ್ಯುಸಿ ಯಾಗಿದ್ದಾರೆ ಅನುಪಮಾ,ಅನುಪಮಾ ಗೌಡ ರವರಿಗಿದು ಮೊದಲ ಇಂಟರ್ ನ್ಯಾಷನಲ್ ಟ್ರಿಪ್. ಹೀಗಾಗಿ, ಮೊಟ್ಟ ಮೊದಲ ಫಾರಿನ್ ಟೂರ್ ನಲ್ಲಿ ಅನುಪಮಾ ಗೌಡ ಸೂಪರ್ ಎಕ್ಸೈಟ್ ಆಗಿದ್ದಾರೆ. .

ಈ ಮೂವರ ಬ್ಯುಸಿ ಟೈಮ್ ಗೆ ಸ್ವಲ್ಪ ಬ್ರೇಕ್ ಹಾಕಿ ಈ ಮೂವರು ಹುಡುಗಿಯರು ಈಗ ಬಾಲಿ ಯಾ ರೆಸಾರ್ಟ್ ನಲ್ಲಿ ಮೋಜು ಮಸ್ತಿ ಮಾಡುತ್ತಾ ಅವರವರ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಗಳನ್ನೂ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತೋಷ ನೀಡುತ್ತಿದ್ದಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top