ಸಿನಿಮಾ

ಪುನೀತ್ ರಾಜ್ ಕುಮಾರ್ ಜೊತೆ ‘ನಿನ್ನಿಂದಲೇ’ ಸಿನಿಮಾದಲ್ಲಿ ಹೆಜ್ಜೆ ಹಾಕಿದ ನಟಿ ಎರಿಕಾ ಫರ್ನಾಂಡಿಸ್ ಈಗ ಹೇಗಿದ್ದಾರೆ,ಏನ್ ಮಾಡ್ಕೊಂಡಿದ್ದಾರೆ ಗೊತ್ತಾ

ಎರಿಕಾ ಫರ್ನಾಂಡಿಸ್ ನಿಜವಾದ ಹೆಸರು ಎರಿಕಾ ಜೆನ್ನಿಫರ್ ಫರ್ನಾಂಡಿಸ್ ,ಇವರು ಹುಟ್ಟಿದು 7 ಮೇ 1993 ಮಂಗಳೂರಿನ ಒಂದು ಕೊಂಕಣಿ ಕುಟುಂಬದಲ್ಲಿ ,ಬೆಳೆದದ್ದು ಮುಂಬೈ ನಲ್ಲಿ ,ಇವರ ತಂದೆ ಕೂಡ ಒಬ್ಬ ಮಾಡೆಲ್ ಈ ಕಾರಣದಿಂದ ಅವರ ಕೆರಿಯರ್ ಆಗಿ ಆರಿಸಿಕೊಂಡಿದ್ದು ಮಾಡೆಲಿಂಗ್ ಕ್ಷೇತ್ರ.ಇವರು ಕನ್ನಡ,ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ನಟಿಸಿರುವ ಒಟ್ಟು ಚಿತ್ರಗಳು 6 ,ನಟನೆ ಮಾಡಿರುವ ಒಟ್ಟು ಧಾರಾವಾಹಿಗಳು 4 ,ಇವರು ಮೊದಲು ಬಣ್ಣ ಹಚ್ಚಿದ ಕನ್ನಡ ಸಿನಿಮಾ ‘ನಿನ್ನಿಂದಲೇ’ ,ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ರವರಿಗೆ ನಾಯಕಿಯಾಗಿ ಅಭಿನಯ ಮಾಡಿದರು ,ಆದ್ರೆ ಆ ಸಿನಿಮಾ ನೀರಿಕ್ಷೆ ಹುಟ್ಟಿಸಿದ ಮಟ್ಟಿಗೆ ಅಷ್ಟು ಓಡಲಿಲ್ಲ,ಈ ಚಿತ್ರದ ನಂತರ ಮತ್ತೆ ಎರಿಕಾ ಕನ್ನಡ ಪ್ರೇಕ್ಶಕರ ಮುಂದೆ ಬಂದಿದ್ದು ‘ಬುಗುರಿ’ ಸಿನಿಮಾದ ಮೂಲಕ ಅದು ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಯಕಿಯಾಗಿ.ಈ ನಂತರ ಒಂದೆರಡು ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡವರು ಆಮೇಲೆ ನಾಪತ್ತೆಯಾಗಿ ಹೋದರು.

 

 

 

ಎರಿಕಾ ಫರ್ನಾಂಡಿಸ್ ಎಲ್ಲಿಗೆ ಹೋದರು ,ಈಗ ಏನ್ ಮಾಡ್ತಾಇದ್ದಾರೆ ಗೊತ್ತಾ,ಈಗಾಗಲೇ ಒಂದು ‘ಕುಚ್ ರಂಗ್ ಪ್ಯಾರ್ ಕೆ ಏಸೇ ಭಿ’ ಎಂಬ ಜನಪ್ರಿಯ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಹೆಸರು ಮಾಡಿರುವ ಎರಿಕಾ ,ಝೀ ಗೋಲ್ಡನ್ ಅವಾರ್ಡ್ಸ್ ಹಾಗೂ ಏಷಿಯನ್ ವ್ಯೂವರ್ಸ್ ಟೆಲಿವಿಷನ್ ಅವಾರ್ಡ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ನಂತರ ಕಲರ್ಸ್ ವಾಹಿನಿ ಹಾಗೂ ಎಂಟಿವಿಯಲ್ಲಿ ಪ್ರಸಾರವಾದ ‘ಬಾಕ್ಸ್ ಕ್ರಿಕೆಟ್ ಲೀಗ್-2’ ಮತ್ತು ‘ಬಾಕ್ಸ್ ಕ್ರಿಕೆಟ್ ಲೀಗ್-3’ನಲ್ಲಿ ಸ್ಪರ್ಧಿಯಾಗಿ ಎರಿಕಾ ಫರ್ನಾಂಡಿಸ್ ಭಾಗವಹಿಸಿದರು.ಈಗ ಏಕ್ತಾ ಕಪೂರ್ ನಿರ್ಮಾಣದ ‘ಕಸೌತಿ ಝಿಂದಗಿ ಕಿ-2’ .

ಎಂಬ ಸೀರಿಯಲ್ ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ,ಈ ಧಾರಾವಾಹಿಯ ಶೂಟಿಂಗ್ ಕೋಲ್ಕತ್ತದಲ್ಲಿ ನಡೆಯುತ್ತಿದ್ದು ,ಎರಿಕಾ ಫರ್ನಾಂಡಿಸ್ ಈಗ ಕೋಲ್ಕತ್ತ ದಲ್ಲಿ ಇದ್ದಾರೆ ಬೆಳ್ಳಿತೆರೆ ಇವರಿಗೆ ಅಷ್ಟು ಫೇಮ್ ಕೊಡಲಿಲ್ಲವಾದರೂ ಕಿರುತೆರೆಯಲ್ಲಿ ಇವರು ಗೊತ್ತಿಲ್ಲದೆ ಇರುವವರು ಯಾರು ಇಲ್ಲ ಆ ಮಟ್ಟಕ್ಕೆ ಪಾಪ್ಯುಲಾರಿಟಿ ತಂದು ಕೊಟ್ಟಿದೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top