ಅರೋಗ್ಯ

ಹಿಂದಿನ ಕಾಲದಲ್ಲಿ ಮನೆ ಒಳಗೆ, ಮುಂದೆ ಗುಡಿಸಿ ಸಗಣಿಲಿ ಸಾರ್ಸೋರು ಇದರ ಹಿಂದೆ ಇರೋ ಧಾರ್ಮಿಕ ಹಾಗು ವೈಜ್ಞಾನಿಕ ಕಾರಣಗಳು ಕೇಳಿ.

ಭಾರತೀಯ ಸಂಸ್ಕೃತಿಯಲ್ಲಿ ಜಾನವಾರುಗಳಿಗೆ ಬಹಳ ಪ್ರೀತಿ ಕೊಟ್ಟು ಸಾಕೋರು ಅದ್ರಲ್ಲೂ ಹಸು ಎಮ್ಮೆ ಮತ್ತು ಕರು ಅಂದ್ರೆ ವಿಶೇಷ ಪ್ರೀತಿವ್ಯವಸಾಯ ಮಾಡೋವಾಗ ಹೂಳಲು , ಸಗಣಿಯನ್ನು ಹೊಲಕ್ಕೆ ಗೊಬ್ಬರದಂತೆ ಉಪಯೋಗಿಸುತ್ತಿದ್ದರು ,ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯು ಇದೆ ಆದ್ದರಿಂದಲೇ ಹಸುವನ್ನು ದೇವರೆಂದು ಪೂಜಿಸುತ್ತಾರೆ.

ಗೋಮಯ(ಸಗಣಿ ), ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯಗಳೆನ್ನುತ್ತೇವೆ.ಶಾಸ್ತ್ರದಲ್ಲಿ ಈ ಉತ್ಪನ್ನಗಳಿಗೆ ಅದರದ್ದೇ ಆದ ವಿಶೇಷಗಳಿವೆ.

 

 

 

 

ಸೊಳ್ಳೆ ಮನೆಯೊಳಗೆ ಬರೋಲ್ಲ:ಕ್ರಿಮಿನಾಶಕವಾಗಿ ಸಗಣಿ ಕೆಲಸಮಾಡುತ್ತದೆ ಎಂಬ ಸ್ಪಷ್ಟ ಕಾರಣಕ್ಕಾಗಿಯೇ ಅದರ ಬಳಕೆಯನ್ನು ಮಾಡುತ್ತ ಬಂದಿರುತ್ತಾರೆ.ಮನೆ ಮುಂದೆ ಬೆರಣಿ ತಟ್ಟಿ ಇಡೋರು ಇದೆ ಕಾರಣಕ್ಕೆ , ಬೆರಣಿನ ಇಂಧನವಾಗಿ ಬಳಸಬಹುದು .

ಬೆರಣಿ:ಬೆರಣಿಯಲ್ಲಿ ಕಾಯಿಸಿದ ನೀರಲ್ಲಿ ಸ್ನಾನ ಮಾಡಿದ್ರೆ ದೇಹ ತಂಪಾಗುತ್ತೆ ,ಯಾವುದೇ ಸೈಡ್ ಎಫೆಕ್ಟ್ ಇಲ್ಲ ,ಬೆರಣಿಯನ್ನು ಉರಿಸಿದ ನಂತ್ರ ಸಿಗೋ ಬೂದಿಯನ್ನು ಹೊಲಕ್ಕೆ ಹಾಕಿದ್ರೆ ಒಳ್ಳೆ ಗೊಬ್ಬರ ಆಗುತ್ತೆ.

ಆಂಟಿ ಬ್ಯಾಕ್ಟೀರಿಯಾ ,ಆಂಟಿ ಫಂಗಲ್ ,ಹುಳ , ಉಪ್ಪಟ್ಟೆ ಇತ್ಯಾದಿ ಮನೆಯೊಳಗೇ ಬರೋಲ್ಲ:ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ಹೊರಗಿನ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ತೇರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ
ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡಬಹುದಾಗಿದೆ.

 

 

 

 

ಸಗಣಿಯಲ್ಲಿ ಮಾನವನ ದೇಹದ ಮೇಲೆ ದುಷ್ಪರಿಣಾಮ ಬೀರುವಂತಹ ಹಲವಾರು ಬ್ಯಾಕ್ಟೀರಿಯಾಗಳನ್ನು, ಹಾಗೂ ಮನೆಯೊಳಗೆ ಪ್ರವೇಶಿಸುವ ಹಲವಾರು ವಿಷ ಕ್ರಿಮಿಗಳನ್ನು ತಡೆಯುವಂತಹ ಬ್ಯಾಕ್ಟೀರಿಯಾ ನಿರೋಧಕ ಅಂಶವಿರುತ್ತದೆ. ಆದ್ದರಿಂದ ಮನೆಯ ಮುಂದೆ ಸಗಣಿಯಿಂದ ಸಾರಿಸಿದರೆ ಆ ಮನೆಯವರ ಆರೋಗ್ಯಕ್ಕೆ ಒಳ್ಳೆಯದು.

ಸುಣ್ಣದ ಉಂಡೆಮತ್ತು ಕೆಂಪುಮಣ್ಣು:ಚಿತ್ತಾಕರ್ಶಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆಮತ್ತು ಕೆಂಪುಮಣ್ಣುಗಳೂ ಸಹ ಆಂಟಿ ಬಯೋಟಿಕ್ ಗಳೆಂಬುದನ್ನು ಮರೆಯಬಾರದು.

ಮನೆ ಒಳಗೆ ತಂಪಾಗಿರುತ್ತೆ:ಹೌದು ಹಿಂದಿನ ಕಾಲದ ಕೂಲ್ ಮನೆಗಳ ರಹಸ್ಯ ಇದೇನೇ , ಮಂಗಳೂರು ಹೆಂಚು ಅಥವಾ ಹೊಂಗೆ ಮರದ ಸೊಪ್ಪು ,ತೆಂಗಿನ ಗರಿ ಮನೆಗಳನ್ನ ಮಾಡೋರು ಅಥವಾ ಮನೆಮೇಲೆ ಕಲ್ಲಿನ ಚಪ್ಪಡಿ ಹಾಕೋರು , ಇವೆಲ್ಲವೂ ಉಷ್ಣ ಕಡಿಮೆ ಮಾಡುತ್ತೆ .ಗೋಡೆಗಳಿಂದ ಬರೋ ಉಷ್ಣ ತಡೆಯೋಕೇ ಸಗಣಿ ಮನೆಯೊಳಗಿರೋ ಗೋಡೆ ಮೇಲೆಲ್ಲಾ ಬಳಿಯೋರು.ಈಗೀಗ ನಗರ ಪ್ರದೇಶಗಳಲ್ಲಿ ಸಮಯಾಭಾವ ಮತ್ತು ಸ್ಥಳಾಭಾವದಿಂದ ಮನೆಯಮುಂದೆ ಸಾರಿಸುವುದು ಮತ್ತು ರಂಗವಲ್ಲಿ ಹಾಕುವುದು ದೂರವೇ ಉಳಿದಿದೆ. ಅಲ್ಲಲ್ಲಿ ನಡೆಯುವ ರಂಗವಲ್ಲಿ ಸ್ಪರ್ದೆಗಳಲ್ಲಿ ಮಾತ್ರ ರಂಗವಲ್ಲಿಗಳನ್ನು ನೋಡುವುದು ಅನಿವಾರ್ಯವಾಗಿದೆ.ಈಗಿನ ಕಾಲದ ಜನರಿಗೆ ಸಂಗನಿ ಅಂದ್ರೆ ಒಹ್ ಶಿಟ್ ಅನ್ಕೊಂಡು ಮೂಗು ಮುರಿತಾರೆ ,ಇಷ್ಟೆಲ್ಲ ಉಪಯೋಗ ಇದೆ ಆದ್ದರಿಂದ ಸಾಧ್ಯ ಆದಾಗ ಸಗಣಿ ಹಾಕಿ ಮನೆ ಸಾರಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top