ಮನೋರಂಜನೆ

ಕ್ರಿಕೆಟ್ ದೇವರು ಸಚಿನ್ ಮೇಲೆ ಗಂಭೀರ ಆರೋಪ ಮಾಡಿದ ಬೆತ್ತಲೆ ಸ್ಟಾರ್ ಶ್ರೀ ರೆಡ್ಡಿ.

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬೇರೂರಿರುವ ಪಾತ್ರಕ್ಕಾಗಿ ಮಂಚಕ್ಕೆ ಕರೆಯುವವ ಕಾಮುಕರಿಗೆ ಪಾಠ ಕಲಿಸುತ್ತೇನೆ ಎಂದು ನಿರ್ಣಾಯಕ ಸಮರ ಸಾರಿರುವ ಬಾಲಿವುಡ್ ಮೂಲದ ನಟಿ ಶ್ರೀರೆಡ್ಡಿಯ ತರೇಹವಾರಿ ವಿವಾದಗಳು ಯಾವುದೇ ಅಡೆತಡೆಯಿಲ್ಲದೆ ಭರ್ಜರಿಯಾಗಿ ಮುಂದುವರೆದಿವೆ. ಕಾಸ್ಟಿಂಗ್ ಕೌಚ್ ಎಂಬ ಅನಿಷ್ಟ ಪದ್ದತಿಯ ವಿರುದ್ಧ ನಡು ರೋಡಿನಲ್ಲಿ ಬಟ್ಟೆಯನ್ನು ಕಿತ್ತೆಸೆದು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ನಂತರ ತಮಿಳು, ತೆಲುಗು ಚಿತ್ರರಂಗಗಳ ಅನೇಕ ನಿರ್ದೇಶಕ, ನಟರ ಮೇಲೆ ಯಾವುದೇ ಆಧಾರವಿಲ್ಲದೆ ಗಂಭೀರ ಆರೋಪ ಮಾಡಿ, ಅಸಹ್ಯವಾಗೆಲ್ಲಾ ಬೈದು ಹುಚ್ಚಾಟ ಪ್ರದರ್ಶಿಸಿದ್ದ ಶ್ರೀರೆಡ್ಡಿ ಇದೀಗ ಮತ್ತೊಮ್ಮೆ ಕಣಕ್ಕಿಳಿದಿದ್ದಾಳೆ.

 

 

ಆಕೆ ಮಾಡುತ್ತಿರೋ ನಿಜವೋ? ಸುಳ್ಳೋ? ಅಥವಾ ಪ್ರಚಾರದ ಉಮೇದಿಗೆ ಬಿದ್ದು ಈ ರೀತಿಯ ಐಲಾಟಗಳನ್ನ ಆಡುತ್ತಿದ್ದಾಳೋ ಗೊತ್ತಿಲ್ಲಾ. ಇಷ್ಟು ದಿನ ತೆಲುಗು ಮತ್ತು ತಮಿಳು ನಂತರ ವಿರುದ್ಧ ಕೊಳಕಾಗಿ ಆರೋಪ ಮಾಡುತ್ತಿದ್ದ ಈ ರೆಡ್ಡಿ ಇದೀಗ ನೇರವಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಳಿಗೆ ಬಾಂಬ್ ಎಸೆದಿದ್ದಾಳೆ.. ತನ್ನ ಫೇಸ್ಬುಕ್ ನಲ್ಲಿ ಸಚಿನ್ ಬಗ್ಗೆ ಪೋಸ್ಟ್ ಹಾಕಿರುವ ಶ್ರೀರೆಡ್ಡಿ “ಸಚಿನ್ ಅವರು ಹೈದರಾಬಾದಿಗೆ ಬಂದಿದ್ದಾಗ ಒಬ್ಬ ಸುಂದರ ಹುಡುಗಿ ಜೊತೆ ರೋಮ್ಯಾನ್ಸ್ ಮಾಡಿದ್ದರು” ಎಂದು ಬರೆದುಕೊಂಡಿದ್ದಾರೆ..

“ರೋಮ್ಯಾಂಟಿಕ್ ಕ್ರಿಕೆಟರ್ ಎಂದೇ ಹೆಸರುವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ಎಂಬ ವ್ಯಕ್ತಿ ಒಮ್ಮೆ ಹೈದರಾಬಾದ್ ಗೆ ಬಂದಿದ್ದಾಗ ಅವರ ಜೊತೆ ಸುಂದರ ಹುಡುಗಿಯೊಬ್ಬಳು ರೋಮ್ಯಾನ್ಸ್ ಮಾಡಿದ್ದಳು. ಹಾಯ್ ಪ್ರೊಫೈಲ್ ಚಾಮುಂಡೇಶ್ವರ್ ಸ್ವಾಮಿ ಇವರಿಗೆ ಮಧ್ಯವರ್ತಿಯಾಗಿದ್ದರು. ದೊಡ್ಡ ಮನುಷ್ಯರು ಅದ್ಭುತವಾಗಿ ಆಟವಾಡ್ತಾರೆ, i mean ರೋಮ್ಯಾನ್ಸ್ ಚೆನ್ನಾಗಿ ಮಾಡ್ತಾರೆ” ಎಂದು ಸಚಿನ್ ಬಗ್ಗೆ ಒಗಟಾಗಿ ಬರೆದುಕೊಂಡಿದ್ದಾಳೆ..

ಈಕೆಯ ಈ ಹೇಳಿಕೆ ಸಹಜವಾಗಿ ಸಚಿನ್ ತೆಂಡೂಲ್ಕರ್ ಅವರ ಅಖಂಡ ಅಭಿಮಾನಿಗಳನ್ನ ಕೆರಳಿಸಿದ್ದು ಶ್ರೀರೆಡ್ಡಿ ವಿರುದ್ಧ ಸೆಟೆದು ನಿಂತಿದ್ದಾರೆ. “ಪ್ರಚಾರಕ್ಕಾಗಿ ಈಕೆ ಸಚಿನ್ ಹೆಸರನ್ನ ಬಳಸಿಕೊಳ್ಳುತ್ತಿದ್ದಾಳೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರು ಈ ಶ್ರೀರೆಡ್ಡಿ?
ತನಗೆ ಕಾಸ್ಟ್ ಕೌಚಿಂಗ್ ಮಾಡಿದವರ ಬಣ್ಣ ಬಯಲು ಮಾಡುವ ಶಪಥ ತೊಟ್ಟಿರುವ ಈಕೆ ತಿಂಗಳಿನಿಂದೆ ಫಿಲಂ ಚೇಂಬರ್ ಎದುರು ಬಟ್ಟೆ ಕಳಚಿ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಳು. ತನ್ನನ್ನು ಬಲವಂತವಾಗಿ, ಅವಕಾಶ ಕೊಡಿಸುವ ಆಮಿಷವೊಡ್ಡಿ ಕೆಡವಿಕೊಂಡಿದ್ದರು ಎಂದು ಸಿನಿಮಾರಂಗದ ದೊಡ್ಡ ದೊಡ್ಡ ನಿರ್ದೇಶಕ, ನಿರ್ಮಾಪಕ ಮತ್ತು ನಟರ ಮೇಲೆ ಆರೋಪ ಮಾಡುವುದೇ ಕಸುಬಾಗಿಸಿಕೊಂಡು ಬಂದಿದ್ದಾಳೆ. ಪವನ್ ಕಲ್ಯಾಣ್, ಮಹೇಶ್ ಬಾಬು ಅವರಂಥ ದೊಡ್ಡ ನಟರನ್ನೇ ಲೆಕ್ಕಿಸಿದೆ ಅವರನ್ನು ಟಾರ್ಗೆಟ್ ಮಾಡಿ ಕೆಟ್ಟದಾಗಿ ಮೂದಲಿಸಿದ ಈಕೆಯ ವಕ್ರದೃಷ್ಟಿ ಈ ಸಚಿನ್ ಮೇಲೆ ಬಿದ್ದಿದ್ದು ಮುಂದಿನ ದಿನಗಳಲ್ಲಿ ಕ್ರಿಕೆಟ್ ರಂಗದ ಮತ್ತಷ್ಟು ಜನರ ಮೇಲೆ ಆರೋಪ ಮಾಡುತ್ತಾಳೆ ಎಂದು ಊಹಿಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top