ಸಿನಿಮಾ

ರಕ್ಷಿತ್-ರಶ್ಮಿಕಾ ಬ್ರೇಕಪ್ ವಿಷ್ಯಕ್ಕೆ ಡ್ಯಾಶ್ ಮುಚ್ಕೊಂಡ್ ನಿಮ್ ಕೆಲಸ ನೀವ್ ಮಾಡಿ ಎಂದ ರಕ್ಷಿತ್ ಮ್ಯಾನೇಜರ್

ಸ್ಯಾಂಡಲ್ ವುಡ್’ನಲ್ಲಿ ಸದ್ಯದ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿಯ ನಡುವಿನ ಸಂಭಂದ ಕೊನೆಗೂ ಮುರಿದುಬಿದ್ದಿದೆ.. ಹಾಗಂತ ಇದು ಯಾರೋ ಕೆಲಸಿಲ್ಲದ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ ಎಂದು ಭಾವಿಸುವಂತಿಲ್ಲ. ಯಾಕಂದರೆ ಈ ಸುದ್ದಿ ಬಂದಿರೋದು ಈ ಇಬ್ಬರ ಆಪ್ತ ವಲಯದಿಂದಲೇ.. ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ವೃತ್ತಿ ಕಾರಣದಿಂದಾಗಿ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ..

 

 

ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಕಳೆದೊಂದು ತಿಂಗಳಿನಿಂದ ನಾವು ತುಂಬಾ ಡಿಸ್ಟರ್ಬ್ ಆಗಿದ್ದೇವೆ. ಅವರವರ ಜೀವನ ಅವರವರ ಸ್ವಂತದ್ದು. ರಶ್ಮಿಕಾಗೆ ಅವಳ ಕೆರಿಯರ್ ಮುಖ್ಯ . ಕೆಲಸಕ್ಕೆ ಕಷ್ಟ ಮಾಡಿಕೊಂಡು ಏಕೆ ಇರಬೇಕು? ಖುಷಿಯಿಂದ ಬದುಕಬೇಕು,, ಇದು ನಮ್ಮ ಕುಟುಂಬದ ವಿಚಾರ. ಎರಡು ಕುಟುಂಬಗಳು ಕೂತು ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ. ಇದರಲ್ಲಿ ತಲೆಹೋಗುವಂಥದ್ದು ಏನೂ ಇಲ್ಲ” ಎಂದು ಸುಮನ್ ಮಂದಣ್ಣ ಹೇಳಿದ್ದಾರೆ.

ಈ ಹೇಳಿಕೆ ಹೊರಬೀಳುತ್ತಲೇ ಮಾಧ್ಯಮಗಳು ಬಿಸಿ ಬಿಸಿ ಚರ್ಚೆ ಶುರು ಹಚ್ಚಿಕೊಂಡಿದ್ದವು , ಈ ವಿಷ್ಯದ ಬಗ್ಗೆ ಗರಂ ಆದ ‘ಡ್ಯಾಶ್ ಮುಚ್ಕೊಂಡ್ ನಿಮ್ ಕೆಲಸ ನೀವ್ ಮಾಡಿ’ ಎಂದು ರಕ್ಷಿತ್ ಶೆಟ್ಟಿ ಪಿ.ಎ ಪ್ರವೀಣ್ ತಮ್ಮ ವಾಟ್ಸ್ ಆಪ್ ಖಾತೆಯ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದರು .

ಯಾಕೆ ಎಲ್ಲರು ಎಂಗೇಜ್ಮೆಂಟ್ ಬ್ರೇಕ್ ಅಪ್ ಬಗ್ಗೆ ಮಾತಾಡುತ್ತಿದ್ದಿರಿ , ಅವರಿಗೆ ಅವರ ವೈಯಕ್ತಿಕ ಜೀವನ ಇದೆ ಯಾಕೆ ಎಲ್ಲ ಪ್ರಿಂಟ್ ಹಾಗು ಮಾಧ್ಯಮಗಳು ಅವರ ಹಿಂದೆ ಬಿದ್ದಿದ್ದೀರಿ , ಭಿನ್ನಾಭಿಪ್ರಾಯಗಳು ಎಲ್ಲರ ಜೀವನದಲ್ಲೂ ಇದ್ದೆ ಇದೆ ಹಾಗೆಂದ ಮಾತ್ರಕ್ಕೆ ಅದು ಮುಗಿದೇ ಹೋಯಿತು ಅಥವಾ ಸುಖಾಂತ್ಯ ಕಾಣುವುದಿಲ್ಲ ಎಂದಲ್ಲ ಎಲ್ಲದಕ್ಕೂ ಸಮಯ,ತಾಳ್ಮೆ ಬೇಕು ,ಏನೇ ಆಗಲಿ ಪ್ರೀತಿ ಹಾಗು ಗೌರವ ಹಾಗೆಯೇ ಇರುತ್ತದೆ ಯಾರ್ಯಾರು ಈ ವಿಷ್ಯದ ಬಗ್ಗೆ ಪ್ರಭಾವ ಬೀರುತ್ತಿದ್ದಿರೋ ಅವರು ನಿಜವಾದ ಪ್ರೀತಿ ಏನೆಂಬ ವಿಷಯವನ್ನು ಅರ್ಥ ಮಾಡಿಕೊಳ್ಳ್ಬೇಕು,

ರಕ್ಷಿತ್ ಶಾಂತಿಯಿಂದ ಇರಲಿ , ರಶ್ಮಿಕಾ ಆಕೆಯ ಸುತ್ತಲೂ ಇರುವ ನಕಾರಾತ್ಮಕ ಪರಿಸರದಿಂದ ಹೊರಬರಲಿ ಹಾಗೆಯೇ ಶಾಂತಿ ಹಾಗು ನೆಮ್ಮದಿ ಸಿಗಲಿ ,ಯಾರನ್ನು ವಿಲ್ಲನ್ ಮಾಡಬೇಡಿ ,ಯಾವುದೇ ಸ್ವಂತ ಅಭಿಪ್ರಾಯಗಳನ್ನು ಈ ವಿಷ್ಯದ ಬಗ್ಗೆ ಹೊಂದಬೇಡಿ ,ಬೇರೆಯವರನ್ನು ಜಡ್ಜ್ ಮಾಡುವುದು ನಿಲ್ಲಿಸಿ ,ಒಂದು ದಿನ ಎಲ್ಲರಿಗು ನಿಜ ಏನೆಂದು ತಿಳಿಯುತ್ತದೆ.

 

 

‘ಡ್ಯಾಶ್ ಮುಚ್ಕೊಂಡ್ ನಿಮ್ ಕೆಲಸ ನೀವ್ ಮಾಡಿ’

ರಕ್ಷಿತ್-ರಶ್ಮಿಕಾ ಬ್ರೇಕಪ್ ವಿಚಾರವಾಗಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಫೇಸ್ ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ಅನ್ನು ತೆಗೆದುಕೊಂಡು ರಕ್ಷಿತ್ ಶೆಟ್ಟಿ ಪಿ.ಎ ಪ್ರವೀಣ್ ಅದಕ್ಕೆ ಮೀಡಿಯಾ ಹಾಗು ಟ್ರೊಲ್ ಪೇಜ್ ಗಳು ‘ಡ್ಯಾಶ್ ಮುಚ್ಕೊಂಡ್ ನಿಮ್ ಕೆಲಸ ನೀವ್ ಮಾಡಿ’ ಎಂದು ಬರೆದುಕೊಂಡು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ .

ಸಿನಿಮಾ ಪ್ರಚಾರ ಇತ್ಯಾದಿಗಳಿಗೆ ಮಾಧ್ಯಮಗಳು ಹಾಗು ಟ್ರೊಲ್ ಪೇಜ್ ಗಳನ್ನೂ ಬಳಸಿಕೊಳ್ಳುವ ಸಿನಿಮಾ ಮಂದಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಮೆಂಟ್ ಮಾಡಿದಾಗ ಸಿಟ್ಟಾಗುತ್ತಾರೆ ಹಾಗಾದರೆ ಮಾಧ್ಯಮಗಳು ಕೇವಲ ಇವರ ಪ್ರಚಾರಕ್ಕೆ ಮಾತ್ರ ಇವೆಯಾ ಎಂದು ಅನೇಕ ಮಾಧ್ಯಮದವರು ಅಭಿಪ್ರಾಯ ಪಡುತ್ತಿದ್ದಾರೆ

ನೆನ್ನೆ ಸಂಜೆ ಹಾಕಿದ್ದ ಈ ಪೋಸ್ಟ್ ಗೆ ಭಾರಿ ವ್ಯತಿರಿಕ್ತವಾದ ಹಿನ್ನಲೆಯಲ್ಲಿ ಪ್ರವೀಣ್ ಈಗ ಮಾಧ್ಯಮದವರ ಮುಂದೆ ಕ್ಷಮೆ ಕೇಳಿದ್ದಾರೆ.

 

 

‘ನೋವಿನಿಂದ ನೊಂದು ಉದ್ವೇಗದಲ್ಲಿ ಬಳಸಿದ ಡ್ಯಾಶ್ ಎಂಬ ಪದ ತಪ್ಪೆಂದು ಅರಿವಾಗಿ ಮಾಧ್ಯಮದವರ ಮುಂದೆ ಕ್ಷಮೆ ಕೇಳುತ್ತಿದ್ದೇನೆ , ದಯವಿಟ್ಟು ಕ್ಷಮಿಸಿ’ -ಪ್ರವೀಣ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top