ಸಿನಿಮಾ

ಎರಡನೇ ಮಗುವಿನ ಪ್ಲಾನಿಂಗ್ ಶುರು ಹಚ್ಚಿಕೊಂಡ ಕರೀನಾ ಕಪೂರ್

ಬಾಲಿವುಡ್ ಖ್ಯಾತ ನಟಿ ಕರೀನಾ ಅವರು ನಟ ಸೈಫ್ ಅಲಿಖಾನ್ ಅವರನ್ನು ಮದುವೆ ಆಗಿದ್ದು ಅವರಿಗೆ ತೈಮೂರ್ ಎಂಬ ಮಗನಿದ್ದಾನೆ ಒಂದು ಮಗುವಿನ ತಾಯಿಯಾಗಿರುವ ಕರಿನಾ ಇತ್ತೀಚಿಗೆ ‘ವೀರೇ ದಿ ವೆಡ್ಡಿಂಗ್’ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದೆ ತಡ ಸಾಲು ಸಾಲು ಆಫರ್ ಗಳು ಕರಿನಾಳನ್ನು ಹುಡುಕಿಕೊಂಡು ಬರುತ್ತಿವೆ.

ಡಿಸೆಂಬರ್ 20,2016 ರಂದು ತೈಮೂರ್ ಹುಟ್ಟಿದ್ದು ,ಕರೀನಾ ಗಂಡನಿಗೆ ಈಗಾಗಲೇ ಮೊದಲ ಇಬ್ಬರು ಮಕ್ಕಳಿದ್ದಾರೆ ಹೀಗಿರುವಾಗ ಮತ್ತೆ ಇನ್ನೊಂದು ಮಗುವಿಗೆ ಪ್ಲಾನಿಂಗ್ ಶುರು ಹಚ್ಚಿಕೊಂಡಿದ್ದಾಳಂತೆ ಕರೀನಾ ,ಅಮೃತಾ ಅರೋರಾ ಜೊತೆ ಕೋಮಲ್ ನಹಾತಾ ಶೋ Starry Nights 2.Oh! ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕರೀನಾ ಈಗಾಗಲೇ ಎರಡನೇ ಮಗುವಿನ ಪ್ಲಾನಿಂಗ್ ನಡೆಯುತ್ತಿದ್ದು ಎರಡು ವರ್ಷಗಳ ನಂತ್ರ ಒಂದು ಮುದ್ದಾದ ಮಗು ನಮ್ಮ ಕುಟುಂಬ ಸೇರಲಿದೆ ಎಂದಿದ್ದಾರೆ .

 

 

ರಿನಾ ಕಪೂರ್ ಅವರು ಸುಮಾರು 18 ವರ್ಷಗಳಿಂದ ಬಾಲಿವುಡ್ ರಂಗದಲ್ಲಿ ಅಭಿನಯ ಮಾಡುತ್ತಿದ್ದು ಸೋಲು-ಗೆಲುವು, ಪ್ರಶಸ್ತಿ, ಟೀಕೆ ಹೀಗೆ ಎಲ್ಲದಕ್ಕೂ ಒಳಗಾದವರು. ಆದಾಗ್ಯೂ ಕರೀನಾ ಬೇಡಿಕೆ ಮಾತ್ರ ಕುಗ್ಗಿಲ್ಲ. ಇನ್ನೂ ಟಾಪ್ ಹಿರೋಯಿನ್ ಗಳ ಸಾಲಿನಲ್ಲಿಯೇ ಇದ್ದಾರೆ. ವಿವಾಹ ಆಗಿ, ಒಂದು ಮಗುವಿನ ತಾಯಿ ಆದ ಮೇಲೂ ಕರೀನಾ ಅತಿ ಹೆಚ್ಚು ಸಂಭಾವನೆ ಪಡೆಯುವ ದೀಪಿಕಾ ಪಡುಕೋಣೆ ಮತ್ತು ಕಂಗನಾ ರನಾವತ್​ ಅವರ ಪಟ್ಟಿಯಲ್ಲಿ ಸೇರ್ಪಡೆ ಆಗಿರುವುದು ನಿಜಕ್ಕೂ ಗಮನಿಸಬೇಕಾದ ವಿಷಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top