ಸಿನಿಮಾ

ಅಭಿಷೇಕ್ ಬಚ್ಚನ್ ಮನದಾಳದ ಮಾತು “ನನ್ನ ತಂದೆ ರಾಜ್ ಕುಮಾರ್ ದೊಡ್ಡ ಫ್ಯಾನ್”.ಮುಂದೆ ನೋಡಿ

ಹಿಂದಿ ಚಿತ್ರರಂಗದಲ್ಲಿ ಬಿಗ್ ಬಿ ಅಮಿತಾ ಬಚ್ಚನ್ ರವರ ಕುಟುಂಬಕ್ಕೆ ಇರುವ ಸ್ಥಾನವೇ ಬೇರೆ ,ಆ ಕುಟುಂಬದಲ್ಲಿ ಪ್ರತಿಯೊಬ್ಬರು ಚಿತ್ರಗಳಲ್ಲಿ ಮಿಂಚಿ ಅಮೋಘ ಅಭಿಮಾನಿ ಬಳಗವನ್ನು ಹೊಂದಿದವರೇ.ಅಮಿತಾ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಅವರ ಹೊಸ ಚಿತ್ರ ‘ಮನ್ ಮರ್ಜಿಯಾ’ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು ,ಆ ಸಂದರ್ಭದಲ್ಲಿ ನಮ್ಮ ಕರ್ನಾಟಕದ ಹೆಮ್ಮೆ ಅಣ್ಣಾವ್ರ ಬಗೆಗಿನ ಅವರ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ನನ್ನ ತಂದೆ ಕರುನಾಡ ಚಕ್ರವರ್ತಿ ಡಾ. ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್’ ಎಂದು ಹೇಳಿದ್ದಾರೆ ನಂತರ ಅಣ್ಣಾವ್ರ ಹಾಗೂ ಅವರ ತಂದೆ ನಡುವೆ ಇದ್ದ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

 

 

 

ರಾಜ್ ಕುಮಾರ್ ರವರನ್ನು ಕಂಡರೆ ನಮ್ಮ ತಂದೆಗೆ ತುಂಬಾ ಇಷ್ಟ. ಸ್ವತಃ ತಂದೆಯೇ ನಾನು ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದರು ಎಂದು ಆ ವಿಷಯವನ್ನು ಹೊರಹಾಕಿದ್ದರು .ಈ ಹಿಂದೆ ಅಮಿತಾಬ್ ಬಚ್ಚನ್, ಹಿಂದಿ ಚಿತ್ರರಂಗಕ್ಕೆ ರಾಜ್‍ಕುಮಾರ್ ಬಾರದೇ ಇದ್ದದ್ದು ಒಳ್ಳೆಯದಾಯಿತು. ಅವರು ಬಂದಿದ್ದರೆ ನಮಗೆ ಸಿನಿಮಾಗಳೇ ಸಿಗುತ್ತಿರಲಿಲ್ಲ ಎಂದು ಅಣ್ಣಾವ್ರ ಬಗ್ಗೆ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದರು.ಎಂಬ ವಿಷಯವನ್ನು ಈ ಸಂದರ್ಭದಲ್ಲಿ ಹೇಳಿದರು. ನಾನು ಒಂದೆರೆಡು ಬಾರಿ ರಾಜ್ ಕುಮಾರ್ ಸರ್ ಅವರನ್ನು ಭೇಟಿ ಮಾಡಿದ್ದೆ ಆದರೆ ಆಗ ನಾನಿನ್ನು ಚಿಕ್ಕವನು. ಅವರ ನಟನೆ ಎಂದರೆ ತಂದೆಗೆ ತುಂಬಾ ಇಷ್ಟ. ಅವರ ಮಕ್ಕಳು ಕೂಡ ತುಂಬಾ ಒಳ್ಳೆಯ ಸಿನಿಮಾಗಳನ್ನು ಮಾಡಿ ತುಂಬಾ ಜನ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ತಂದೆ ಹೇಳಿದ್ದರು.

ನಾನು ಸೌತ್ ಸಿನಿಮಾಗಳನ್ನು ನೋಡಿದ್ದೇನೆ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು ,ಈಗ ಕೂಡ ಬಿಗ್ ಬಿ ರಾಜ್‍ಕುಮಾರ್ ರವರ ಕುಟುಂಬದೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top