ಮನೋರಂಜನೆ

ಕುಡಿದ ಅಮಲಿನಲ್ಲಿ ಸ್ಟಾರ್ ಪುತ್ರನ ಪುಂಡಾಟ-ಅಡ್ಡಾದಿಡ್ಡಿ ಕಾರು ಓಡಿಸಿದ್ದಕ್ಕೆ ಮೂರು ಆಟೋಗಳು ಬಲಿ

ಸಿನಿಮಾ ಹೀರೊ ಹೀರೋಯಿನ್ನುಗಳ ಮಕ್ಕಳಿಗೆ ತಮ್ಮ ಕುತ್ತಿಗೆಯ ಮೇಲೆ ತಲೆ ನಿಲ್ಲೋದಿಲ್ಲ ಎಂಬ ಗಂಭೀರ ಆರೋಪ ಆಗಾಗ್ಗೆ ಕೇಳಿಬರುತ್ತಿರುತ್ತದೆ. ಅದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ಕಾಲಿವುಡ್ ಸೂಪರ್ ಸ್ಟಾರ್ ವಿಕ್ರಮ್ ಪುತ್ರ ಯದ್ವಾತದ್ವಾ ಕಾರ್ ಓಡಿಸಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾನೆ. ಭಾನುವಾರ ಬೆಳ್ಳಂಬೆಳಿಗ್ಗೆ ಶರವೇಗದಲ್ಲಿ ಕಾರು ಓಡಿಸುತ್ತಿದ್ದ ಧ್ರುವ ವಿಕ್ರಂ ನಿಂತಿದ್ದ ಮೂರು ಆಟೋಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಮೂರು ಆಟೋಗಳು ಸಂಪೂರ್ಣ ಜಖಂ ಆಗಿದ್ದು, ಆಟೋದಲ್ಲಿದ್ದ ಡ್ರೈವರ್’ಗೆ ಗಂಭೀರ ಗಾಯವಾಗಿದೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

ಚೆನ್ನೈನ ತೈನಂಪೇಟ್​ನಲ್ಲಿರುವ ಪೊಲೀಸ್ ಕಮೀಷನರ್ ಮನೆ ಬಳಿಯೇ ಈ ಘಟನೆ ನಡೆದಿದ್ದು ಬೇಜವಾಬ್ದಾರಿಯುತ ಚಾಲನೆ ಮತ್ತು ಅಪಘಾತದ ಪ್ರಕರಣದಡಿಯಲ್ಲಿ ವಿಕ್ರಮ್​ ಮಗನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪಘಾತದ ಸಮಯದಲ್ಲಿ ಧ್ರವನ ಜೊತೆ ಇನ್ನಿಬ್ಬರೂ ಕೂಡ ಕಾರಿನಲ್ಲಿದ್ದರು ಎಂದು ಟ್ರಾಫಿಕ್ ಪೊಲೀಸ್ ತಿಳಿಸಿದ್ದು ಕಾರು ಬಂದು ಹೊಡೆದ ವೇಗಕ್ಕೆ ಆಟೋಗಳು ಸಂಪೂರ್ಣ ನಜ್ಜುಗುಜ್ಜಾಗಿವೇ.

ಐಪಿಸಿ ಸೆಕ್ಷನ್ 279 (ನಿರ್ಲಕ್ಷ ಚಾಲನೆ), 337 ಅಡಿ ಬಂಧಿತನಾಗಿದ್ದ ಧ್ರುವ ವಿಕ್ರಮ್ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.. ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾದ ತಮಿಳು ರಿಮೇಕ್ ‘ವರ್ಮಾ’ ಮೂಲಕ ಚಿತ್ರರಂಗಕ್ಕೆ ಕೊಡುತ್ತಿರುವ ದ್ರುವ ತಮ್ಮ ಮೊದಲ ಸಿನಿಮಾ ತೆರೆಗೆ ಬರುವ ಮೊದಲೇ ಇಂಥಾ ಪುಂಡಾಟಗಳನ್ನು ಪ್ರದರ್ಶಿಸಿರುವುದು ಮಾತ್ರ ವಿಪರ್ಯಾಸವೇ ಸರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top