ಮನೋರಂಜನೆ

ವೈರಲ್ ಆಯ್ತು ಗರ್ಭಿಣಿ ರಾಧಿಕಾ ಪಂಡಿತ್ ಫೋಟೋ.

ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ.. ಸರಿಸುಮಾರು ಒಂದೂವರೆ ವರ್ಷದ ಹಿಂದೆ ಇಬ್ಬರೂ ಸಾಂಸಾರಿಕ ಜೀವನಕ್ಕೆ ಧುಮುಕಿದ್ದಾರಲ್ಲಾ, ಆಗಿನಿಂದಲೂ ಇವರಿಬ್ಬರಿಗೂ ಅಭಿಮಾನಿಗಳಿಂದ ಹಿಡಿದು ಆಪ್ತರು ಕೇಳುತ್ತಿದ್ದುದು ಒಂದೇ ಪ್ರಶ್ನೆ ”ಮಗು ಯಾವಾಗ?”.. ಪ್ರತಿ ಸಲ ಈ ಪ್ರಶ್ನೆಗೆ ಕೆಳಿದಾಗಲೆಲ್ಲ ನಗುತ್ತಲೇ ‘ಸದ್ಯದಲ್ಲೇ’ ಎಂದು ಉತ್ತರಿಸುತ್ತಿದ್ದ ಯಶ್ ಜೋಡಿ ಕೊನೆಗೂ ಸಿಹಿ ಸುದ್ದಿ ನೀಡಿ ವಾರಗಳೇ ಕಳೆದಿದೆ.. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಧಿಕಾ ಪಂಡಿತ್ ಗರ್ಭಿಣಿ ಅವತಾರದಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು, ಅದಕ್ಕೀಗ ತೆರೆ ಬಿದ್ದಿದೆ.

 

 

ಇತ್ತೀಚೆಗಷ್ಟೆ ತಾವು ಪೋಷಕರಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದ ಯಶ್ ದಂಪತಿ, ಇದೀಗ ಫೇಸ್ಬುಕ್ ನಲ್ಲಿ ಗರ್ಭಿಣಿ ರಾಧಿಕಾ ಫೋಟೊ ಶೇರ್ ಮಾಡಿದ್ದಾರೆ. ಆಗಸ್ಟ್ 12, 2016ರಲ್ಲಿ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿತ್ತು, ಎರಡನೇ ವರ್ಷದ ನಿಶ್ಚಿತಾರ್ಥ ವಾರ್ಷಿಕೋತ್ಸವದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರು ರಾಧಿಕಾ ಎಂಗೇಜ್ ಆಗಿ ಎರಡು ವರ್ಷಗಳಾಯ್ತು ಇದು ಖಚಿತವಾಗಿ ‘bumpy ride’ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಎಂಗೇಜ್ಮೆಂಟ್ ಫೋಟೋ ಜೊತೆಗೆ ಗರ್ಭಿಣಿ ರಾಧಿಕಾ ಫೋಟೋವನ್ನು ಹಂಚಿಕೊಂಡಿದ್ದಾರೆ.

ರಾಧಿಕಾ ತಮ್ಮ ಉಬ್ಬಿದ ಹೊಟ್ಟೆಯೊಂದಿಗೆ ಯಶ್​ರೊಂದಿಗೆ ಫೋಸ್​ ನೀಡಿರುವ ಈ ಫೋಟೋ ಶೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಗರ್ಭಿಣಿ​ ಆದ ನಂತರ ಇದೇ ಮೊದಲ ಬಾರಿ ತಮ್ಮ ಉಬ್ಬಿದ ಹೊಟ್ಟೆಯೊಂದಿಗಿನ ಫೋಟೋ ಶೇರ್​ ಮಾಡಿರುವ ರಾಧಿಕಾ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top