ಸಮಾಚಾರ

2ನೇ ಟೆಸ್ಟ್- ಭಾರತದ ಮೇಲೆ ಬಿಗಿ ಹಿಡಿತ ಸಾದಿಸಿದ ಇಂಗ್ಲೆಂಡ್, ಟೀಮ್ ಇಂಡಿಯಾಗೆ ಭಾರಿ ಹಿನ್ನಡೆ.

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾ ಮೇಲೆ ಬಿಗಿ ಹಿಡಿತ ಸಾಧಿಸಿದೆ. ರಡನೇ ಟೆಸ್ಟ್ ನ ಮೂರನೇ ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್ ಆರು ವಿಕೆಟ್ ನಷ್ಟಕ್ಕೆ 357 ರನ್‌ ಗಳಿಸಿದ್ದು ಈ ಮೂಲಕ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 250 ರನ್’ಗಳ ಭಾರಿ ಮುನ್ನಡೆ ಸಾಧಿಸಿದಂತಾಗಿದೆ. ಇನ್ನು ಎರಡು ದಿನಗಳು ಬಾಕಿ ಉಳಿದಿರುವಂತೆಯೇ ಗೆಲುವಿನತ್ತ ಮುನ್ನಡೆದಿರುವ ಆಂಗ್ಲರು ಸತತ ಎರಡನೇ ಟೆಸ್ಟ್ ಪಂದ್ಯದಲ್ಲೂ ಜಯದ ತವಕದಲ್ಲಿದ್ದಾರೆ. ಇದರೊಂದಿಗೆ ಮೊದಲು ಬ್ಯಾಟಿಂಗ್ ನಂತರ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲೂ ಹೀನಾಯ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಭಾರಿ ಹಿನ್ನಡೆಯನ್ನು ಅನುಭವಿಸಿದೆ.

 

 

ತೃತೀಯ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಅನ್ನು ಭಾರತ ತಂಡ ಉತ್ತಮ ಬೌಲಿಂಗ್ ದಾಳಿ ನಡೆಸಿ ಅತಿಥೇಯರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಆರಂಭದ ನಾಲ್ಕು ವಿಕೆಟ್ ಗಳು ಊಟದ ವಿರಾಮಕ್ಕೆ ಮುನ್ನವೇ ಉರುಳಿಸಿ ಪಂದ್ಯದ ಮೇಲೆ ಭಾರತೀಯರು ಹಿಡಿತ ಸಾಧಿಸುತ್ತಿದ್ದರೆಂದೇ ಭಾವಿಸಲಾಗಿತ್ತು. ಆದರೆ ಊಟದ ವಿರಾಮ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಆರನೇ ವಿಕೆಟ್’ಗೆ ಕ್ರಿಸ್ ವೋಕ್ಸ್ ಹಾಗೂ ಜಾನಿ ಬೈರ್‌ಸ್ಟೋವ್ ಜೋಡಿಯು 189 ರನ್ ಜತೆಯಾಟ ನೀಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಅದ್ಭುತ ಮುನ್ನಡೆ ಸಾಧಿಸಲು ಅವಕಾಶ ಒದಗಿಸಿಕೊಟ್ಟಿತು.

ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್- 35.2 ಓವರ್‌ಗಳಲ್ಲೇ 107 ರನ್ ಆಲೌಟ್.
ಆರ್ ಅಶ್ವಿನ್ ಅವರ 29 (38)
ಕೊಹ್ಲಿ 23 (57),
ಅಜಿಂಕ್ಯ ರಹಾನೆ 18 (44),
ಹಾರ್ದಿಕ್ ಪಾಂಡ್ಯ 11 (10)

ಇಂಗ್ಲೆಂಡ್ ಬೌಲಿಂಗ್:
ಜೇಮ್ಸ್ ಆಂಡೆರ್ಸನ್ 20-5
ಕ್ರಿಸ್ ವೋಕ್ಸ್ 19-೨

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
ಮೂರನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 357 ರನ್‌
ಕ್ರಿಸ್ ವೋಕ್ಸ್ (120*)
ಜಾನಿ ಬೈರ್‌ಸ್ಟೋವ್ (93)
ಕೇಟನ್ ಜೆನಿಂಗ್ಸ್ (11)
ಆಲಿಸ್ಟಾರ್ ಕುಕ್ (21)
ಒಲ್ಲಿ ಪಾಪ್ (28)
ಜೋ ರೂಟ್(19)

ಬೌಲಿಂಗ್ ಭಾರತ:
ಮೊಹಮ್ಮದ್ ಶಮಿ 74-3

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top