ಸಮಾಚಾರ

ಲವರ್ ಬಾಯ್ ಆಗಿ ಬದಲಾದ ಗ್ರೇಟ್ ವಿಲನ್ ವಸಿಷ್ಠ,ಫೋಟೋ ಒಳಗಿದೆ.

ವಸಿಷ್ಠ ಎನ್‌‌. ಸಿಂಹ ಹೆಸರು ಎತ್ತಿದ್ರೆ ಮೊದಲು ನೆನಪಿಗೆ ಬರೋದು ರಾಜಾಹುಲಿ ಜಗ್ಗನ ಪಾತ್ರ ಇಲ್ಲಿಯವರೆಗೂ ಅನೇಕ ಚಿತ್ರದಲ್ಲಿ ನಟಿಸಿರುವ ವಶಿಷ್ಠ ತಮ್ಮ ಉತ್ತಮವಾದ ಅಭಿನಯದಿಂದ ಜನರ ಮನಗೆದ್ದಿದ್ದಾರೆ. ಕನ್ನಡದಲ್ಲಿ ಅತಿ ಮೊನಚಾದ, ಕಂಚಿನ ಖಂಠ ಹೊಂದಿರೋ ನಟ ವಸಿಷ್ಠ ತಮ್ಮ ಪಾಲಿಗೆ ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಲೇ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗೋದಿ ಬಣ್ಣ ಸಾಧಾರಣ ಮೈಕಟ್ಟು, ದಯವಿಟ್ಟು ಗಮನಿಸಿ, ಮಫ್ತಿ, ಟಗರು ಸೇರಿ ಅನೇಕ ಯಶಸ್ವೀ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಈ ಹಿಂದೆ ವಿಲನ್ ಪಾತ್ರದಲ್ಲಿ ತಮ್ಮ ಗುಂಗುರು ಕೂದಲಿನಿಂದ ಎಲ್ಲರನ್ನೂ ಸೆಳೆಯುತ್ತಿದ್ದ ವಸಿಷ್ಠ ಈಗ ತಮ್ಮ ಲುಕ್ ಬದಲಿಸಿದ್ದಾರೆ. ಅದು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾಗಾಗಿ. ವಸಿಷ್ಠ ಹಾಗೂ ಅವರಿಗೆ ನಾಯಕಿಯಾಗಿ ಅಭಿನಯ ಮಾಡುತ್ತಿರುವ ಮಾನ್ವಿತಾ ಹರೀಶ್ ನಾಲ್ಕೈದು ದಿನಗಳ ಹಿಂದೆ ಲಂಡನ್​​ಗೆ ತೆರಳಿದ್ದಾರೆ. ನಾಗತಿಹಳ್ಳಿ ಮಗಳು ಕನಸು ಚಿತ್ರಕಥೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ವಸಿಷ್ಠ ತಮ್ಮ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

 

ಮಾನ್ವಿತಾ ಮತ್ತು ವಶಿಷ್ಠಾ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾನ್ವಿತಾ ಮತ್ತು ವಶಿಷ್ಠಾ ಜೋಡಿಗೆ ಒಂದು ಪ್ರೇಮ ಕಥೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ಹೆಣೆದಿದ್ದಾರೆ ಎನ್ನಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ಶೇಕಡ 80 ರಷ್ಟು ಶೂಟಿಂಗ್ ಯೂರೋಪ್​ ದೇಶಗಳಲ್ಲಿ ನಡೆಯಲಿದೆ. ಸಿನಿಮಾ ಮೊದಲ ಶಾಟ್ ಲಂಡನ್ ತೇನ್ಸ್ ನದಿಯ ತೀರದಲ್ಲಿ ಇರುವ ವಿಶ್ವಗುರು ಬಸವಣ್ಣವರ ಪುತ್ಥಳಿ ಬಳಿ ಶೂಟಿಂಗ್ ಆಗಲಿದೆ ಎಂದು ತಿಳಿದು ಬಂದಿದೆ.

ಸುಮಾರು 30 ದಿನಗಳ ಯುರೋಪ್ ಚಿತ್ರೀಕರಣ ಮುಗಿದ ಬಳಿಕ ಬೆಂಗಳೂರು ಹಾಗು ಶಿವಮೊಗ್ಗದ ಸುತ್ತ ಮುತ್ತ ಎರಡನೆಯ ಹಂತದ ಶೂಟಿಂಗ್ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವುದು ವಿಶೇಷವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top