ಕ್ರಿಕೆಟ್

ಕಳಪೆ ಬ್ಯಾಟಿಂಗ್ ಪ್ರದರ್ಶನ- 107 ರನ್ನುಗಳಿಗೆ ಟೀಮ್ ಇಂಡಿಯಾ ಆಲೌಟ್.

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ ಕೇವಲ 107ರನ್’ಗಳಿಗೆ ಆಲೌಟ್ ಆಗಿದೆ. ಜೇಮ್ಸ್ ಆಂಡೆರ್ಸನ್ ಮಾರಕ ದಾಳಿಗೆ ತತ್ತರಿಸಿರುವ ಟೀಮ್ ಇಂಡಿಯಾ ಎರಡನೇ ದಿನದಂತ್ಯಕ್ಕೆ 35.2 ಓವರ್‌ಗಳಲ್ಲೇ 107 ರನ್‌ಗಳಿಗೆ ಸರ್ವಪತನವನ್ನು ಕಂಡಿದೆ. ಈ ಮೂಲಕ ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಸೋಲಿಗೆ ಕಾರಣವಾಗಿದ್ದ ಭಾರತ ಟೆಸ್ಟ್ ತಂಡದ ಬ್ಯಾಟಿಂಗ್ ವೈಫಲ್ಯ ಎರಡನೇ ಟೆಸ್ಟ್​ನಲ್ಲೂ ಮುಂದುವರಿದಿದೆ.

 

 

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ 2ನೇ ದಿನ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತಕ್ಕೆ ಇಂಗ್ಲೆಂಡ್ ಬೌಲರ್’ಗಳು ಆರಂಭದಿಂದಲೂ ಕಾಡಲಾರಂಭಿಸಿದರು. ಸತತ ಮಳೆಯಿಂದಾಗಿ ಪಿಚ್ ಸಂಪೂರ್ಣ ಬೌಲಿಂಗ್ ಸ್ನೇಹಿ ಎನಿಸಿಕೊಂಡಿತು. ಅಲ್ಲದೆ ಇಂಗ್ಲೆಂಡ್ ವೇಗಿಗಳ ಸ್ವಿಂಗ್ ದಾಳಿಗೆ ಭಾರತೀಯರ ಬಳಿ ಉತ್ತರವೇ ಇರಲಿಲ್ಲ. ಆರ್ ಅಶ್ವಿನ್ ಅವರ 29 (38) ರನ್ನೇ ಭಾರತದ ಪರವಾಗಿ ಅಧಿಕ ಎನಿಸಿತು. ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ ಕೇವಲ 20 ರನ್ನಿಗೆ 5 ವಿಕೆಟ್ ಉರುಳಿಸಿ ಪಾರಮ್ಯ ಮೆರೆದರು.. ನಿರಂತರವಾಗಿ ಮಳೆ ಕಾಟಕೊಡುತ್ತಿದ್ದರಿಂದ ಭಾರತದ ಇನ್ನಿಂಗ್ಸ್ ಅಂತ್ಯವಾಗುತ್ತಿದ್ದಂತೆ ಎರಡನೇ ದಿನದಾಟವೂ ಅಂತ್ಯವಾಯಿತು. ಇಂದು ಇಂಗ್ಲೆಂಡ್ ಮೂರನೇ ದಿನದಾಟವನ್ನು ಆರಂಭಿಸಲಿದೆ.

ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್- 35.2 ಓವರ್‌ಗಳಲ್ಲೇ 107 ರನ್ ಆಲೌಟ್.
ಆರ್ ಅಶ್ವಿನ್ ಅವರ 29 (38)
ಕೊಹ್ಲಿ 23 (57),
ಅಜಿಂಕ್ಯ ರಹಾನೆ 18 (44),
ಹಾರ್ದಿಕ್ ಪಾಂಡ್ಯ 11 (10)

ಇಂಗ್ಲೆಂಡ್ ಬೌಲಿಂಗ್:
ಜೇಮ್ಸ್ ಆಂಡೆರ್ಸನ್ 20-5
ಕ್ರಿಸ್ ವೋಕ್ಸ್ 19-2

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top