ಮನೋರಂಜನೆ

ಕರುಣಾನಿಧಿ ಜೊತೆಗಿನ ಹಳೆ ನೆನಪನ್ನು ಬಿಚ್ಚಿಟ್ಟರು ನವರಸನಾಯಕ ಜಗ್ಗೇಶ್.

ಡಿಎಂಕೆ ವರಿಷ್ಠ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ನಿಧನದಿಂದ ಇಡೀ ತಮಿಳುನಾಡಿಗೆ ತಮಿಳುನಾಡೇ ಶೋಕ ಗ್ರಸ್ತವಾಗಿದ್ದು ಅಗಲಿದಾನಾಯಕನಿಗಾಗಿ ಕಂಬನಿ ಮಿಡಿಯುತ್ತಿದ್ದಾರೆ. ಕುಟುಂಬ ಸದಸ್ಯರ ಕಂಬನಿ, ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರು ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಂತ ಗಣ್ಯರು ಕೂಡ ಎಂ. ಕರುಣಾನಿಧಿಯವರೊಟ್ಟಿಗಿನ ನೆನಪುಗಳನ್ನು ಬಿಚ್ಚಿಡುತ್ತಿದ್ದಾರೆ. ಅದೇ ರೀತಿ ನಟ ಕಮ್ ರಾಜಕಾರಣಿ ಜಗ್ಗೇಶ್ ಕೂಡ ಕರುಣಾನಿಧಿಯವರ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

 

 

ಅದೇನೇ ಸಾಮಾಜಿಕ ಪಲ್ಲಟಗಳು ಸಂಭವಿಸಿದರೂ ಅದಕ್ಕೆ ಸಡನ್ನಾಗಿ ಫೇಸ್ ಬುಕ್ ಅಥವಾ ಟ್ವಿಟರ್ ಮೂಲಕ ಪ್ರತಿಕ್ರಿಯಿಸುವವರು ನವರಸ ನಾಯಕ ಜಗ್ಗೇಶ್. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಜಗ್ಗೇಶ್ ಆಗಾಗ ಮನದ ಮಾತುಗಳನ್ನು ದಾಖಲಿಸುತ್ತಿರುತ್ತಾರೆ. ಇದೀಗ, ಕರುಣಾನಿಧಿ ಜೊತೆಗಿರುವ ಫೋಟೋವೊಂದನ್ನ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ತಮ್ಮ ಹಳೆಯ ನೆನಪನ್ನ ಬಿಚ್ಚಿಟ್ಟಿದ್ದಾರೆ. ಈ ಫೋಟೋದಲ್ಲಿ ಕರುಣಾನಿಧಿ ಜೊತೆಯಲ್ಲಿ ಜಗ್ಗೇಶ್ ಹಾಗೂ ಜಗ್ಗೇಶ್ ಪುತ್ರ ಯತಿರಾಜ ಕಾಣಿಸಿಕೊಂಡಿದ್ದು, ಯತಿರಾಜ್ ಜೊತೆ ಕರುಣಾನಿಧಿ ಅವರು ನಗುತ್ತಾ ಮಾತನಾಡುತ್ತಿದ್ದಾರೆ.

“ಯತಿರಾಜನ ಜೊತೆ ಹಾಸ್ಯ ಮಾಡುತ್ತಿರುವ ದಿ:ಕರುಣಾನಿಧಿ ರವರು..
ಅವರಿಗೆ ಮಕ್ಕಳೆಂದರೆ ಬಹಳ ಪ್ರಿಯ..
ಅವರಿಗಿದ್ದ ಪುಸ್ತಕಙ್ನಾನದ ಹಸಿವು ಸಾಕ್ಷಿಗೆ ಗೋಡೆಯಾಗಿ ಹಿಂದೆ ನಿಂತಿದೆ..!!ಇಂಥ ಅನೇಕ ಮಹನೀಯರ ಕಾಣುವ ಭಾಗ್ಯ ನನ್ನ ಬದುಕಿನವಿಶೇಷ ಕ್ಷಣಗಳು ಅನ್ನಿಸುತ್ತದೆ..!!
ಅಮರ ಹಳೆ ನೆನಪು..” ಎಂದು ಜಗ್ಗೇಶ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top