ಸಮಾಚಾರ

ತಮ್ಮ ಮದುವೆಯ ಬಗ್ಗೆ ನಟಿ ಹರಿಪ್ರಿಯಾ ಬಾಯಿ ಬಿಟ್ಟು ಮಾತನಾಡಿದ್ದು ಹೀಗೆ

ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಉಗ್ರಂ ಖ್ಯಾತಿಯ ಸ್ಯಾಂಡಲ್ ವುಡ್ ನಟಿ ಹರಿಪ್ರಿಯ ಸದ್ಯ ‘ಡಾಟರ್​ ಆಫ್​ ಪಾರ್ವತಮ್ಮ’ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಹಿರಿಯ ನಟಿ ಸುಮಲತಾ ಅಂಬರೀಶ್ ಪಾರ್ವತಮ್ಮ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ ಇನ್ನು ಹರಿಪ್ರಿಯ ಅವರ ಮಗಳ ಪಾತ್ರ ಮಾಡುತ್ತಿದ್ದಾರೆ. ಇತ್ತೀಚಿಗೆ ಹರಿಪ್ರಿಯಾ ಕುಟುಂಬ ಸಮೇತರಾಗಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿ ವರ್ಷ ಕೂಡ ಹರಿಪ್ರಿಯಾ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ಈ ಬಾರಿ ‘ಡಾಟರ್​ ಆಫ್​ ಪಾರ್ವತಮ್ಮ’ ಸಿನಿಮಾದಲ್ಲಿ ಬ್ಯುಸಿ ಆಗಿರುವುದರಿಂದ ದರ್ಶನ ಮಾಡಲು ಸಾಧ್ಯ ಆಗಿರಲಿಲ್ಲ ಕೊನೆಗೂ ಬಿಡುವು ಮಾಡಿಕೊಂಡು ರಾಯರ ಮಠಕ್ಕೆ ಭೇಟಿ ಮಾಡಿದ್ದಾರೆ. ಈ ವೇಳೆ ದೇಗುಲದಿಂದ ಹೊರಬಂದ ಹರಿಪ್ರಿಯಾ ಜತೆ ಸೆಲ್ಫಿ ತೆಗೆದುಕೊಳ್ಗಲು ಜನರು ಮುಗಿಬಿದ್ದರು.

 

 

 

ಇದೆ ವೇಳೆ ಅಲ್ಲಿದ್ದ ಮಾಧ್ಯಮದವರು ಹರಿಪ್ರಿಯಾ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಹರಿಪ್ರಿಯಾ ನಗುತ್ತ ಮಾತನಾಡಿ “ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ಸದ್ಯ ಚಿತ್ರಗಳ ಮೇಲೆ ಹೆಚ್ಚಾಗಿ ಗಮನ ಹರಿಸಿದ್ದೇನೆ, ಯಾವಾಗ ಏನು ಆಗುತ್ತೆ ಅಂತಾ ಹೇಳಲಿಕ್ಕೆ ಆಗೋಲ್ಲ , ಅದರ ಬಗ್ಗೆ ಈಗ ಮಾತು ಬೇಡ” ಎಂದು ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹರಿಪ್ರಿಯಾ ಅಭಿನಯ ಮಾಡಿರುವ ‘ಲೈಫ್ ಜೊತೆ ಒಂದ್ ಸೆಲ್ಪಿ’ ಸೇರಿದಂತೆ ‘ಕುರುಕ್ಷೇತ್ರ’, ‘ಬೆಲ್ ಬಾಟಮ್’, ‘ಸೂಜಿದಾರ’, ‘ಡಾಟರ್ ಆಫ್ ಪಾರ್ವತಮ್ಮ’ ಸೇರಿ ಹಲವು ಸಿನಿಮಾಗಳು ಸದ್ಯದಲ್ಲೇ ರಿಲೀಸ್ ಆಗಲಿವೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top