ಭವಿಷ್ಯ

12 ಆಗಸ್ಟ್ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೧೨ ಆಗಸ್ಟ್ ೨೦೧೮
ಸೂರ್ಯೋದಯ : ೦೬:೧೯
ಸೂರ್ಯಾಸ್ತ : ೧೯:೦೬
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಶ್ರಾವಣ

ಪಕ್ಷ : ಶುಕ್ಲ ಪಕ್ಷ
ತಿಥಿ : ಪಾಡ್ಯ – ೧೧:೫೪ ವರೆಗೆ
ನಕ್ಷತ್ರ : ಮಖಾ – ೨೧:೨೭ ವರೆಗೆ
ಯೋಗ : ವರಿಯಾನ್ – ೦೭:೪೩ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ : ೧೨:೧೭ – ೧೩:೦೮
ಅಮೃತಕಾಲ : ೧೯:೧೯ – ೨೦:೪೪
ರಾಹು ಕಾಲ:೧೭:೩೦ – ೧೯:೦೬
ಗುಳಿಕ ಕಾಲ: ೧೫:೫೫ – ೧೭:೩೦
ಯಮಗಂಡ:೧೨:೪೩ – ೧೪:೧೯

ನೀವು ನಿಮ್ಮ ಮಾತಿನ ಚಾತುರ್ಯದ ಮೂಲಕ ಜನರ ಗಮನ ಸೆಳೆಯುವಿರಿ. ಇದರಿಂದ ನಿಮ್ಮ ಹಿಂಬಾಲಕರು ಹೆಚ್ಚಾಗುವರು. ಹಾಗಂತ ಅಹಂಕಾರ ಪಡುವುದು ಒಳ್ಳೆಯದಲ್ಲ. ಇದು ಕಲಿಯುಗ ಕಲಿಯುತ್ತಲೇ ಇರಬೇಕಾಗುವುದು.

ಸತ್ಯ ಸಂಧತೆ, ಜಾಣ್ಮೆಗಳು ಜತೆಯಲ್ಲಿದ್ದು ನೀವು ತೋರುವ ಸೂಕ್ಷ ್ಮತೆಯು ನಿಮಗೆ ರಕ್ಷ ಣೆಯನ್ನು ಒದಗಿಸುವುದು. ಈಗ ಮಾಡುತ್ತಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಮಡದಿ ಮಕ್ಕಳ ಜೊತೆ ಕೆಲವು ಸಮಯ ಕಳೆಯವುದು ಒಳ್ಳೆಯದು

 

ಚಿಂತೆಯು ನಿಮ್ಮನ್ನು ಕಾಡುವುದು. ಚಿಂತೆಯಿಂದ ಮುಕ್ತರಾಗಲು ಸ್ನೇಹಿತರನ್ನು ಭೇಟಿ ಮಾಡಿ. ಇಲ್ಲವೆ ಧಾರ್ಮಿಕ ಮಂದಿರಗಳಲ್ಲಿ ಪ್ರಾರ್ಥನೆ ಮಾಡಿ. ಕ್ರಿಯಾಶೀಲತೆಯನ್ನು ರೂಢಿಸಿಕೊಂಡಲ್ಲಿ ಉತ್ತಮ ಸಮಯ ನಿಮ್ಮದಾಗುವುದು.

ನಿಮ್ಮ ಮಾತಿನ ಜಾಣ್ಮೆ ಮೆಚ್ಚುವಂತಹುದು. ಆದರೆ ಅಯೋಗ್ಯರ ಎದುರು ಆ ಜಾಣ್ಮೆ ಉಪಯೋಗಕ್ಕೆ ಬರುವುದಿಲ್ಲ. ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡಿ.

 

ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವು ದಿಢೀರನೆ ಯಶಸ್ಸಿನತ್ತ ದಾಪುಗಾಲು ಹಾಕುವುದು. ಇದರಿಂದ ಜೀವನದಲ್ಲಿ ಜಡತ್ವ ತೊಲಗಿ ಫೀನಿಕ್ಸ್‌ ಪಕ್ಷಿಯಂತೆ ಚುರುಕಾಗುವಿರಿ. ಹಣಕಾಸು ಕೂಡಾ ನಿಮಗೆ ಒದಗಿ ಬರುವುದು.

 

ಮನಸ್ಸು ಕೊಳೆಯಾಗದಂತೆ ಎಚ್ಚರಿಕೆ ವಹಿಸಿ. ತಿಳಿಯಾದ ಮನಸ್ಸು ಶುಭವನ್ನು ಚಿಂತಿಸಿದರೆ ಕೊಳೆಯಾದ ಮನಸ್ಸು ಅಶುಭವನ್ನು ಚಿಂತಿಸುತ್ತದೆ. ಹಾಗಾಗಿ ಧನಾತ್ಮಕ ಚಿಂತನೆಯಿಂದ ಮನಸ್ಸನ್ನು ಪ್ರಸನ್ನಗೊಳಿಸಿ.

 

 

ಯಾವುದೇ ಕಾರಣಕ್ಕೂ ಯಾರ ಜತೆಗೂ ವಾಗ್ವಾದಕ್ಕೆ ಇಳಿಯುವುದು ಬೇಡ. ನಿಮ್ಮ ಮಾತು ಕೃತಿಯಲ್ಲಿ ತಾಳ್ಮೆಯಿರಲಿ. ಮನೆಯಿಂದ ಹೊರಗೆ ಹೊರಡುವಾಗ ಗುರು, ಹಿರಿಯರ ಆಶೀರ್ವಾದ ಪಡೆದು ಹೊರಡಿ.

 

 

ಖರ್ಚುವೆಚ್ಚಗಳು ಹನುಮಂತನ ಬಾಲದ ಹಾಗೆ. ದುಡಿದ ಹಣವೆಲ್ಲವೂ ನೀರಿನಂತೆ ಖರ್ಚಾಗುತ್ತಿರುವುದು. ಹಾಗಾಗಿ ಖರ್ಚುವೆಚ್ಚಗಳ ಬಗ್ಗೆ ಕೈ ಹಿಡಿತ ಮಾಡುವುದು ಒಳ್ಳೆಯದು.

 

ಜನರ ಮನಸ್ಸನ್ನು ಗೆಲ್ಲುವ ಅವಕಾಶ ಲಭ್ಯವಾಗಲಿದೆ. ನಿಮ್ಮಿಂದ ಚಾಲನೆಗೊಂಡ ಉತ್ತಮ ಕಾರ್ಯವು ನಿಮ್ಮ ಕ್ರೀಯಾಶೀಲತೆಗೆ ಹಿಡಿದ ಕನ್ನಡಿಯಂತಾಗುವುದು. ಸಮಾಜದ ಜನರಿಂದ ಪ್ರಶಂಸೆಗಳ ಸುರಿಮಳೆ ಆಗುವುದು.

ಯಾವುದು ನಿಮ್ಮಿಂದ ಆಗುವುದಿಲ್ಲವೋ ಎಂದು ತಿಳಿದಿರುವ ನಿಮಗೆ ಒಂದು ಮಹತ್ತರ ಕೆಲಸವು ಕೈಗೂಡಿ ನಿಮಗೆ ಸಂತಸವನ್ನುಂಟು ಮಾಡುವುದು. ಈ ಕೆಲಸಕ್ಕಾಗಿ ಪಟ್ಟ ಶ್ರಮವು ಸಾರ್ಥಕ ಎನಿಸುವುದು.

 

ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಇತರರು ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇಲ್ಲದ ಸಬೂಬು ಹೇಳಿ ಜಾಣ್ಮೆಯಿಂದ ಅವರಿಂದ ತಪ್ಪಿಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

 

ಸಾಂಸಾರಿಕ ಬಿಕ್ಕಟ್ಟುಗಳನ್ನು ಆಂತರಿಕವಾಗಿಯೇ ಪರಿಹಾರ ಮಾಡಿಕೊಳ್ಳುವುದು ಒಳಿತು. ‘ಸಂಸಾರ ಗುಟ್ಟು ವ್ಯಾಧಿ ರಟ್ಟು’ ಎಂಬ ನಾಣ್ನುಡಿ ಅರಿತು ಬಾಳಿ. ಇಲ್ಲದಿದ್ದಲ್ಲಿ ಸಮಾಜದಲ್ಲಿ ನಿಮಗೆ ಗೌರವ ಕಡಿಮೆ ಆಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top