ಮನೋರಂಜನೆ

ನಟಿ ಇಶಾ ಗುಪ್ತಾ ಜೊತೆ ಹಾರ್ದಿಕ್ ಪಾಂಡ್ಯಾ ಮದುವೆ ಆಗುತ್ತಿರೋದು ನಿಜಾನಾ? ನಟಿ ಹೇಳೋದೇನು ಕೇಳಿ.

ಬಾಲಿವುಡ್‌ಗೂ ಕ್ರಿಕೆಟಿಗರಿಗೂ ಇರುವ ನಂಟು ತೀರಾ ಹಳೆಯದು. ಬಾಲಿವುಡ್‌ ನಟಿಯರು ಖ್ಯಾತ ಕ್ರಿಕೆಟಿಗರನ್ನು ಪ್ರೀತಿಸಿ ಮದುವೆಯಾಗುವುದು, ಕೈಕೈ ಹಿಡಿದುಕೊಂಡು ಊರು ಸುತ್ತಿ ಲವ್ವಿ ಡವ್ವಿ ನಡೆಸುವುದಕ್ಕೆ ಭಾರತದಲ್ಲಿ ದೊಡ್ಡ ಪರಂಪರೆಯೇ ಇದೆ..ಇದಕ್ಕೆ ಇತ್ತೀಚಿನ ಅತಿದೊಡ್ಡ ಉದಾಹರಣೆಯೆಂದರೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ನಡುವಿನ ಪ್ರೇಮಕತೆ. ಇದು ಹಾಗಿರಲಿ ಈಗ ವಿಷಯ ಏನಪ್ಪಾ ಅಂದ್ರೆ ಸದ್ಯ ಭಾರತ ಕ್ರಿಕೆಟ್ ತಂಡದ ಸ್ಟಾರ್‌ ಆಟಗಾರರಲ್ಲಿ ಒಬ್ಬನಾಗಿರುವ ಹಾರ್ಧಿಕ್ ಪಾಂಡ್ಯ ಜೊತೆ ಬಾಲಿವುಡ್ ನಟಿ ಇಶಾ ಗುಪ್ತ ಹೆಸರು ತಳುಕು ಹಾಕೊಂಡು ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗುತ್ತಿದೆ.

 

 

ಹಾರ್ದಿಕ್ ಪಾಂಡ್ಯಾ ಮತ್ತು ಬಾಲಿವುಡ್ ನಟಿ ಇಶಾ ಗುಪ್ತಾ ಮಧ್ಯೆ ಏನೋ ನಡಿತಾ ಇದೆ, ಇಬ್ಬರೂ ಲವ್ವಲ್ಲಿ ಬಿದ್ದು ಮೇಲೇಳಲಾಗದೆ ಮುಳುಗಿಹೋದ್ದಾರೆ. ಸದ್ಯದಲ್ಲೆ ಅವರಿಬ್ಬರು ವಿವಾಹವಾಗಲಿದ್ದಾರೆ ಎಂಬಿತ್ಯಾದಿ ಗಾಸಿಪ್ ಗಳು ಸುದ್ದಿ ರೂಪದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ. ಆದರೆ ಹಾರ್ಧಿಕ್ ಆಗಲಿ ಅಥವಾ ಇಶಾ ಆಗಲಿ ಈವರೆಗೂ ಇಂಥಾ ರೂಮರುಗಳ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಕೊನೆಗೂ ಈ ಬಗ್ಗೆ ಇಶಾ ಗುಪ್ತಾ ಪ್ರತಿಕ್ರಿಯೆ ನೀಡಿದ್ದು ಎಲ್ಲಾ ಗಾಸಿಪ್ ಗಳಿಗೂ ಥಂಡಾ ಹೊಡೆಸಿದ್ದಾರೆ.

ಈ ವಿಚಾರವಾಗಿ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಇಶಾ ಗುಪ್ತ “ಸದ್ಯಕ್ಕೆ ನಾನು ಮದುವೆ ಆಗುತ್ತಿಲ್ಲ. ಮದುವೆ ಆಗುವಾಗ ಖಂಡಿತ ನಿಮಗೆಲ್ಲರಿಗೂ ಹೇಳಿಯೇ ಆಗುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ವಯಕ್ತಿಕ ಜೀವನದ ಬಗ್ಗೆ ಅಪಹಾಸ್ಯ ಮಾಡುವುದು ನನಗೆ ಸ್ವಲ್ಪವೂ ಹಿಡಿಸುವುದಿಲ್ಲ, ನಾನು ಪ್ರತಿಯೊಬ್ಬರನ್ನೂ ಗೌರವಿಸುತ್ತೇನೆ.” ಎಂದು ಹೇಳಿದ್ದಾರೆ. ಈ ಮೂಲಕ ಹಾರ್ಧಿಕ್ ಮತ್ತು ತಮ್ಮ ನಡುವೆ ಇಲ್ಲ ಸಲ್ಲದ ಗಾಸಿಪ್ ಹರಡಿಸುತ್ತಿದ್ದ ಮಂದಿಯ ಬಾಯಿಗೆ ಬೀಗ ಜಡಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top