ಮನೋರಂಜನೆ

ಜೋಕೆ ತಮನ್ನಾ ಬಳ್ಳಿಯ ಮಿಂಚು- ಯಶ್ ಜೊತೆ ಮಿಲ್ಕಿ ಬ್ಯೂಟಿ ಸೊಂಟ ಬಳುಕಿಸೋದು ಕನ್ಫರ್ಮ್.

ನಾನಾ ಕಾರಣಗಳಿಂದಾಗಿ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಯಶ್ ಅಭಿಮಾನಿಗಳ ಕುತೂಹಲವಂತೂ ಯಶ್ ಕೆಜಿಎಫ್‌ಗಾಗೇ ಬಿಟ್ಟಿರೋ ಉದ್ದ ಗಡ್ಡದ ಕೂದಲಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ!

 

 

ಇಂಥಾ ಕೆಜಿಎಫ್ ಚಿತ್ರತಂಡದಿಂದ ಇದೀಗ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನಪ್ಪ ಅಂದ್ರೆ ಚಿತ್ರದಲ್ಲಿನ ಸ್ಪೆಷಲ್ ಹಾಡೊಂದರಲ್ಲಿ ಯಶ್ ಜೊತೆ ಸ್ಟೆಪ್ ಹಾಕಲು ಸೌತ್ ಇಂಡಿಯಾದ ಖ್ಯಾತ ನಟಿಯನ್ನು ಕರೆತರಲು ಚಿಂತನೆ ನಡೆಸಲಾಗುತ್ತಿದೆ, ಅದಕ್ಕೆ ಸಂಭಂದಿಸದಂತೆ ನಿರ್ಮಾಪಕರು ಈಗಾಗಲೇ ತಮನ್ನಾ ಭಾಟಿಯಾ, ಕಾಜಲ್ ಅಗರವಾಲ್, ಲಕ್ಷ್ಮಿ ರೈ ಮತ್ತು ನೊರಾ ಫತೇಹಿ ಸೇರಿದಂತೆ ಕೆಲವೊಂದಷ್ಟು ಸ್ಟಾರ್ ಹೀರೋಯಿನ್ ಗಳನ್ನೂ ಸಂಪರ್ಕಿಸಿದ್ದಾರೆ ಎಂದು ಸುದ್ದಿಯಾಗಿತ್ತಲ್ಲಾ ಅದರಲ್ಲಿ ಮಿಲ್ಕಿ ಬ್ಯುಟಿ ತಮನ್ನಾ ನಿಕ್ಕಿಯಾಗಿದ್ದಾಳೆ ಎನ್ನುವ ಮಾಹಿತಿಯನ್ನು ಸ್ವತಃ ನಿರ್ಮಾಪಕರೇ ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸ್ಪೆಷಲ್ ಹಾಡಿಗೆ ತಮನ್ನಾ ಫೈನಲ್ ಆಗಿರುವ ಬಗ್ಗೆ ತಿಳಿಸಿದ್ದಾರೆ. “KGF ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಎಂಬ ವಿಶೇಷ ಹಾಡಿಗೆ ತಮನ್ನಾ ಯಶ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಇದೇ ವಾರ ಈ ಹಾಡಿನ ಚಿತ್ರೀಕರಣ ಮುಕ್ತಾಯವಾಗುತ್ತೆ ಆನಂತರ ಟ್ರೈಲರ್ ಮಾತು ಹಾಡುಗಳ ಬಗ್ಗೆ ಶೀಘ್ರದಲ್ಲೇ ಮಾಹಿತಿ ಕೊಡಲಾಗುತ್ತೆ ” ಎಂದು ಕಾರ್ತಿಕ್ ಗೌಡ ಬರೆದುಕೊಂಡಿದ್ದಾರೆ.

 

ಅಂದಹಾಗೆ ಈಗಾಗಲೇ ಚಿತ್ರೀಕರಣವನ್ನು ಬಹುತೇಕ ಮುಗಿಸಿಕೊಂಡಿರುವ ಚಿತ್ರತಂಡ ಚೆನ್ನೈನಲ್ಲಿ ಪ್ಯಾಚ್ ವರ್ಕ್ ಕೆಲಸಗಳನ್ನು ಮಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ. ಶ್ರೀನಿಧಿ ಶೆಟ್ಟಿ ಯಶ್’ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top