ಮನೋರಂಜನೆ

25ನೇ ವಾರ ಪೂರೈಸಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಶಿವಣ್ಣನ ಟಗರು ಸಿನಿಮಾ.

ಸೂರಿ ನಿರ್ದೇಶನದ ಟಗರು ಚಿತ್ರ ಭರಪೂರ ಗೆಲುವನ್ನು ತನ್ನದಾಗಿಸಿಕೊಂಡಿದೆ. ನಮ್ಮ ನಡುವಿನವೆ ಅನ್ನಿಸುವಂಥಾ ಪಾತ್ರಗಳು, ಭಿನ್ನವದ ನಿರೂಪಣಾ ಶೈಲಿ, ಅಚ್ಚರಿಯಾಗುವಂಥಾ ಪಾತ್ರಗಳಿಂದ ಕನ್ನಡದ ಗಡಿಯಾಚೆಗೂ ಟಗರಿನ ಖದರ್ ಹರಡಿಕೊಂಡಿದೆ. ಶಿವಣ್ಣನ ಎನರ್ಜಿಟಿಕ್ ನಟನೆ, ಮಾನ್ವಿತಾ, ಧನಂಜಯ್, ವಸಿಷ್ಠರಂತಹ ಮನೋಜ್ಞ ಅಭಿನಯ, ಸೂರಿಯ ಪಾತ್ರಕಟ್ಟುವ ಕುಸುರಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಭಿಮಾನದಾಚೆಗೆ ನೋಡಿಸಿಕೊಳ್ಳುತ್ತಿರುವ ಟಗರು ಇದೀಗ ಯಶಸ್ವಿ 150 ದಿನಗಳನ್ನು ಕಂಪ್ಲೀಟ್ ಮಾಡಿ 175ನೇ(25ನೇ ವಾರ) ದಿನದತ್ತ ದಾಪುಗಾಲಿಡುತ್ತಿದೆ. ಅಷ್ಟೇ ಅಲ್ಲದೆ ಕಳೆದ ಸಾಕಷ್ಟು ವರ್ಷಗಳಲ್ಲಿ ಅತಿ ದೀರ್ಘ ಸಮಯ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾ ಎನಿಸಿಕೊಂಡಿದೆ..

 

 

ಇಂಥಾದ್ದೊಂದು ಪುಷ್ಕಳ ಗೆಲುವನ್ನು ಕಂಡಿರುವ ಟಗರು ಚಿತ್ರದ ಯಶಸ್ಸಿನ ಇನ್ನೂ ಮುಂದುವರೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಚಿತ್ರಮಂದಿರದಲ್ಲಿ ಒಂದೆರೆಡು ವಾರಗಳು ಪ್ರದರ್ಶನಗೊಳ್ಳುವುದೇ ಹೆಚ್ಚು ಹೀಗಿರುವಾಗ ಟಗರು ಚಿತ್ರ ಬರೋಬ್ಬರಿ ಇಪ್ಪತ್ತೈಸು ವಾರಗಳನ್ನು ಪೂರೈಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ನಿರ್ಮಿಸಿದೆ. ಇದುವರೆಗಿನ ಅಷ್ಟೂ ಪಾತ್ರಗಳಿಗಿಂತ ಪಕ್ಕಾ ಭಿನ್ನವಾಗಿ ಪಾತ್ರವನ್ನು ನುಂಗಿಕೊಂಡು ಕಾಣಿಸಿಕೊಂಡಿದ್ದ ಶಿವಣ್ಣ ಯಥಾ ಪ್ರಕಾರ ಅಭಿಮಾನದಾಚೆಗೂ ಪ್ರೇಕ್ಷಕರನ್ನು ಆವರಿಸಿಕೊಂಡಿದರು. ಚಿತ್ರದ ಟಗರು ಶಿವ, ಡಾಲಿ, ಚಿಟ್ಟೆ, ಕಾಕ್ರೋಜ್, ಕಾನ್ಸ್ ಟೇಬಲ್ ಸರೋಜ, ಪುನರ್ ವಸು, ಅಂಕಲ್ ಪಾತ್ರಗಳು ಪ್ರೇಕ್ಷಕರನ್ನು ಅಟೆನ್ಷನ್ ಮಾಡಿ ಈ ಮಟ್ಟದ ಗೆಲುವನ್ನು ತಂದುಕೊಟ್ಟಿದೆ.

ಈ ಸಂಭ್ರಮದ ಬಗ್ಗೆ ಸ್ಥಳೀಯ ಪತ್ರಿಕೆಯೊಂದಕ್ಕೆ ಮಾತನಾಡಿರುವ ನಾಯಕ ಶಿವರಾಜಕುಮಾರ್ “ನನ್ನ ಕರಿಯರ್ ನಲ್ಲಿ ಹಲವು ಸಿನಿಮಾಗಳು 25ನೇ ವಾರ ಪೂರೈಸಿವೆ, ಆದರೆ ಈಗಿನ ದಿನಗಳಲ್ಲಿ ಇಷ್ಟು ದೀರ್ಘಸಮಯ ಓಡುತ್ತಿರುವ ಸಿನಿಮಾ ಅಂದ್ರೆ ಟಗರು. ಇದು ನನಗೆ ಬಹಳ ಸಂತೋಷ ಕೊಟ್ಟಿದೆ, ಇದರ ಎಲ್ಲಾ ಕ್ರೆಡಿಟ್ಸ್ ನಿರ್ದೇಶಕ ಸೂರಿ ಮತ್ತು ನಿರ್ಮಾಪಕ ಶ್ರೀಕಾಂತ್ ಅವರಿಗೆ ಸಲ್ಲಬೇಕು, ಅವರಿಂದಲೇ ಟಗರು ಸಾಧ್ಯವಾದದ್ದು” ಎಂದು ಹೇಳಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top