ಸಮಾಚಾರ

ಶನಿ ಧಾರಾವಾಹಿಯಲ್ಲಿ ಮಿಂಚುತ್ತಿರೋ ಈ ಬಾಲ ಹನುಮಂತ ಯಾರು ಗೊತ್ತಾ

ಕಿರುತೆರೆ ಜನಪ್ರಿಯ ಧಾರಾವಾಹಿಗಳಲ್ಲಿ ‘ಶನಿ’ ಧಾರಾವಾಹಿ ಕೂಡ ಒಂದು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಈ ಪೌರಾಣಿಕ ಧಾರಾವಾಹಿ ಯಶಸ್ವಿಯಾಗಿ 200 ಕ್ಕೂ ಕಂತುಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಉತ್ತಮ ನಿರೂಪಣೆ, ಕಥೆ, ಪಾತ್ರಗಳು ಈ ಧಾರಾವಾಹಿಯ ಪ್ಲಸ್‌ ಪಾಯಿಂಟ್‌. ಅನೇಕ ವೀಕ್ಷಕರು ಈ ಧಾರಾವಾಹಿಯನ್ನು ನೋಡುತ್ತಾರೆ. ಇನ್ನು ಟಿ.ಆರ್.ಪಿ ವಿಷಯಕ್ಕೆ ಬಂದರೆ ಶನಿ ಧಾರವಾಹಿ ಕರ್ನಾಟಕದಲ್ಲಿ ಟಾಪ್ 5 ರಲ್ಲಿ ಬರುತ್ತದೆ.

ಧಾರಾವಾಹಿಯಲ್ಲಿ ಹನುಮ ಪಾತ್ರವನ್ನು ಅಭಿನಯ ಮಾಡುವ ಬಾಲ ಕಲಾವಿದ ಎಲ್ಲರ ಅಚ್ಚುಮೆಚ್ಚು. ಹಾಗಾದರೆ ಈ ಬಾಲ ಕಲಾವಿದ ಯಾರು ಎಂಬುದನ್ನು ನೋಡೋಣ ಬನ್ನಿ. ಬಾಲ ಹನುಮನ ಪಾತ್ರದಲ್ಲಿ ಅಭಿನಯ ಮಾಡುವ ಕಲಾವಿದನ ಹೆಸರು ಕನಿಷ್ಕ್ ರವಿ ದೇಸಾಯಿ. ಮೂಲತಃ ಯಾದಗಿರಿ ಜಿಲ್ಲೆಯವನಾದ ಕನಿಷ್ಕ್ ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಹರ ಹರ ಮಹಾದೇವಾ’ ಧಾರಾವಾಹಿಯಲ್ಲಿ ಕೂಡ ಅಭಿನಯ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದರು.

 

 

ಕನಿಷ್ಕ್ ರವಿ ದೇಸಾಯಿ ಯಾವುದೇ ನಟನೆಗೆ ಸಂಭಂದಿಸಿದ ತರಬೇತಿ ಪಡೆದಿಲ್ಲವಾದರೂ ಕೂಡ ಯಾರಿಗೂ ಕಡಿಮೆ ಇಲ್ಲವಂತೆ ಉತ್ತಮವಾಗಿ ಅಭಿನಯ ಮಾಡುತ್ತಾನೆ. ಸದ್ಯ ಏಳನೆಯ ತರಗತಿಯಲ್ಲಿ ಓದುತ್ತಿದ್ದು. ನಟನೆಯಲ್ಲೂ ಹಾಗು ವಿದ್ಯಾಭ್ಯಾಸದಲ್ಲೂ ಎತ್ತಿದ ಕೈ ಎನಿಸಿಕೊಂಡಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಕರಾಟೆಯಲ್ಲಿ ಆಸಕ್ತಿ ಹೊಂದಿರುವ ಕನಿಷ್ಕ ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಇಷ್ಟು ದಿನ ಶನಿ ಧಾರಾವಾಹಿಯಲ್ಲಿ ಹೆಚ್ಚಾಗಿ ಬಾಲ ಕಲಾವಿದರು ಅಭಿನಯ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಬಾಲ ಕಲಾವಿದರು ಕಣ್ಮರೆಯಾಗಲಿದ್ದಾರೆ. ಹೌದು, ಶನಿ ಪಾತ್ರಧಾರಿ, ಕಾಕ ರಾಜ, ಹನುಮ, ಯಮ, ಯಮಿ ಹೀಗೆ ಇನ್ನೂ ಅನೇಕ ಬಾಲ ಕಲಾವಿದರ ಜಾಗಕ್ಕೆ ಹಿರಿಯ ಕಲಾವಿದರು ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top