ಸಮಾಚಾರ

ದೇಶ್ಯಾದ್ಯಂತ ನಾಳೆ ಮಂಗಳವಾರ ಸಾರಿಗೆ ಬಂದ್: ಏನಿರುತ್ತೆ? ಏನಿರಲ್ಲ?

ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ “ಮೋಟಾರು ಸಾರಿಗೆ ಕಾಯ್ದೆ 2017” ವಿರೋಧ ಮಾಡಿ ಆಗಸ್ಟ್ 7 ರಂದು ದೇಶಾದ್ಯಂತ ಸಾರಿಗೆ ಮುಷ್ಕರ ಮಾಡಲು ನಿರ್ಧಾರ ಮಾಡಿದ್ದಾರೆ, ದೇಶ್ಯಾದ್ಯಂತ ವಿವಿಧ ಸಾರಿಗೆ ಸಂಘಟನೆಗಳು ಈ ಬಂದ್ ಗೆ ಬೆಂಬಲ ಸೂಚಿಸಿವೆ.

ಆದರೆ ಈ ಬಂದ್ ರಾಜ್ಯದಲ್ಲಿ ವಿಫಲ ಆಗುವ ಸಾಧ್ಯತೆ ಇದೆ. ಬಿಎಂಟಿಸಿ ಸೇರಿದಂತೆ ಕೆಎಸ್​ಆರ್​ಟಿಸಿ, ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ನಮ್ಮ ಮೆಟ್ರೋ ಮತ್ತು ಶಾಲಾ ವಾಹನಗಳ ಮಾಲೀಕರು ಬೆಂಬಲ ನೀಡಿಲ್ಲ ಎಂದು ತಿಳಿದು ಬಂದಿದೆ.

 

 

ಮಸೂದೆಗೆ ವಿರೋಧ ಯಾಕೆ?
ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಹೊಸ ನೀತಿಯಿಂದ ರಾಜ್ಯ ವಾಹನಗಳಿಗೆ ಪರ್ಮೀಟ್ ನೀಡುದಕ್ಕೆ ಹಾಗೂ ಸಾರಿಗೆ ನೀತಿರೂಪಣೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮೊಟಕಾಗಲಿದೆ. ಕೇಂದ್ರ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಲಿದೆ. ರಾಷ್ಟ್ರೀಯ ಸಾರಿಗೆ ನೀತಿ ಅಡಿ ರಾಜ್ಯಗಳ ಒಪ್ಪಿಗೆ ಇಲ್ಲದೇ ಕೇವಲ ಅಭಿಪ್ರಾಯವಷ್ಟೇ ಪಡೆದು ಹೊಸ ನೀತಿಯನ್ನು ಕೇಂದ್ರ ಜಾರಿಗೆ ತರಬಹುದು. ಇದರಿಂದ ಸಾರಿಗೆ ಇಲಾಖೆ ಅಸ್ತಿತ್ವಕ್ಕೆ ಧಕ್ಕೆ ಆಗುತ್ತದೆ. ಅಗ್ರಿಗೇಟರ್ ಲೈಸೆನ್ಸ್ ಅನ್ನು ರಾಜ್ಯಸರ್ಕಾರ ನೀಡಬಹುದಾದರೂ ನೀಡುವ ಮಾನದಂಡವನ್ನ ಕೇಂದ್ರ ತೀರ್ಮಾನ ಮಾಡಲಿದೆ.

20 ಅಂಶಗಳನ್ನು ಒಳಗೊಂಡಿರುವ ಮೋಟಾರು ಸಾರಿಗೆ ಕಾಯ್ದೆ-2017ನ್ನು ಈಗಾಗಲೇ ರಾಜ್ಯಸಭೆಯಲ್ಲಿ ಅಂಗೀಕಾರವನ್ನು ಮಾಡಿದ್ದಾರೆ, ಲೋಕಸಭೆಯ ಅಂಗೀಕಾರ ಆಗಬೇಕಿದೆ. ಇದು ಖಾಸಗಿ ಕಂಪನಿಗಳ ಹುನ್ನಾರವಾಗಿದ್ದು, ಈ ಕಾಯ್ದೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಆಗಸ್ಟ್​ 7ರಂದು ವಿವಿಧ ಸಾರಿಗೆ ಸಂಘಟನೆಗಳು ಬಂದ್ ಕರೆ ನೀಡಿವೆ ಎಂದು ತಿಳಿದು ಬಂದಿದೆ.

ಹೊಸ ಕಾಯ್ದೆಯಿಂದ ಊಬರ್, ಓಲಾ ದಂತಹ ಖಾಸಗಿ ದೊಡ್ಡ ಸಂಸ್ಥೆಗಳ ಆರ್ಭಟ ಹೆಚ್ಚು ಆಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top