ಸಮಾಚಾರ

ಎಲ್ಲ ಆಯಿತು ಈಗ ಮೋಮೋ ಚಾಲೆಂಜ್ ಅಂತೆ ,ಏನ್ ಕರ್ಮ ಗುರು ಇದು ಅಂತೀರಾ ,ನೋಡಿ ನೀವೇ.

ಭಯಾನಕ ಬ್ಲ್ಯೂವೇಲ್ ಚಾಲೆಂಜ್ ಹಾವಳಿ ಮುಗಿದ ಮೇಲೆ ಕೆಲವು ದಿನಗಳ ಹಿಂದೆ ಬಂದಿದ್ದ ಕಿಕಿ ಚಾಲೆಂಜ್ ಎಲ್ಲರಿಗೂ ಈಗ ಕಿರಿ ಕಿರಿ ಉಂಟು ಮಾಡಿತ್ತು. ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರು ಕೂಡ ಲೆಕ್ಕಿಸದೆ ಕೆಲವರು ನಾ ಮುಂದು ನೀ ಮುಂದು ಎಂದು ಕಿಕಿ ಚಾಲೆಂಜ್ ಮಾಡಿದ್ದರು. ಆದರೆ ಕಿರಿಕಿರಿ ಕಡಿಮೆಯಾದ ಬೆನ್ನಲ್ಲೇ ಈಗ ಹೊಸತೊಂದು ಚಾಲೆಂಜ್ ಬಂದಿದ್ದು, ಡೆಡ್ಲಿ ಗೇಮ್ ಮೋಮೋ ಚಾಲೆಂಜ್ ಹುಟ್ಟಿಕೊಂಡಿದೆ.

 

 

ಜಗತ್ತಿನ ಕೆಲವೊಂದು ದೇಶಗಳಲ್ಲಿ ಈಗಾಗಲೇ ಮುಗ್ದ ಮಕ್ಕಳ ಜೀವವನ್ನು ತೆಗೆದಿರುವ ಈ ಗೇಮ್ ಹೆಸರು ಮೋಮೋ. ವಾಟ್ಸಪ್ ಗೇಮ್ ಆಗಿರುವ ಮೋಮೋ, ಅರ್ಜೆಂಟೈನಾ ದೇಶದ 12 ವರ್ಷದ ಬಾಲಕಿ ಒಬ್ಬಳನ್ನು ಈಗಾಗಲೇ ಬಲಿ ಪಡೆದಿದೆ. ತಾನು ಸಾಯುವ ಬಗೆಯನ್ನು ಆ ಬಾಲಕಿ ಮೊಬೈಲ್ ನಲ್ಲಿ ಚಿತ್ರೀಕರಿಸಿ ಈ ಜಗತ್ತನ್ನು ತೊರೆದಿದ್ದಳು. ಜಪಾನ್ ಮೂಲದ ಈ ಮೋಮೋ ತನ್ನ ಬಳಕೆದಾರರಿಗೆ ಸಾಯುವ ಟಾಸ್ಕ್ ನೀಡುತ್ತದೆ ಎಂದು ತಿಳಿದು ಬಂದಿದೆ. ಅಗಲ ಕಣ್ಣುಗಳಿರುವ ಭಯಾನಕ ಬಾಲಕಿಯೋರ್ವಳ ಮುಖಚರ್ಯೆ ಹೊಂದಿರುವ ಈ ಗೇಮ್ ಟಾರ್ಗೆಟ್ ಹದಿಹರೆಯದ ಮಕ್ಕಳೇ ಆಗಿದ್ದಾರೆ.

ಮೋಮೋ ಚಾಲೆಂಜ್ ತುಂಬಾ ಅಪಾಯಕವಾದ ಆಟವಾಗಿದ್ದು. ಒಂದು ವೇಳೆ ಈ ಆಟವನ್ನು ಪೂರ್ಣ ಮಾಡದಿದ್ದರೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತದೆ. ಇದರಿಂದ ಈ ಆಟವನ್ನು ಆಡಲು ಜನರು ಭಯ ಪಡುತ್ತಾರೆ. ಮೋಮೋ ಚಾಲೆಂಜ್ ನಲ್ಲಿ ಸಿಲುಕಿದವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ತಮ್ಮ ಜೀವವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಗೇಮ್ ಭಾರತಕ್ಕೆ ಬರುವ ಮುನ್ನ ಪೊಲೀಸ್ ಇಲಾಖೆ ಸೂಕ್ತ ಕ್ರಮ ಅನುಸರಿಸಿ ಈ ಗೇಮ್ ಭಾರತಕ್ಕೆ ಬರದೇ ಇರುವ ಹಾಗೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top