ಸಮಾಚಾರ

ಸ್ವಾಮಿ ವಿವೇಕಾನಂದ ಮತ್ತ ಬಸವಣ್ಣನವರನ್ನು ಪಿತೂರಿ ಮಾಡಿ ಕೊಲ್ಲಲಾಗಿದೆ- ಹೊಸ ಬಾಂಬ್ ಸಿಡಿಸಿದ ಕೆಎಸ್ ಭಗವಾನ್.

ಸಾಮಾಜಿಕ ವಿದ್ಯಮಾನಗಳ ಬಗ್ಗೆ ತಮ್ಮ ನಿಲುವನ್ನು ನಿರ್ಬಿಢೆಯಿಂದ ಮಂಡಿಸುತ್ತಲೇ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವವರು ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಪ್ರೊ. ಕೆ.ಎಸ್ ಭಗವಾನ್​.. ತಮ್ಮ ಬರಹಗಳಿಗಿಂತಲೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಕೆಎಸ್ ಭಗವಾನ್ ಅವರು ಇದೀಗ ಹೊಸ ಬಾಂಬ್ ವೊಂದನ್ನು ಸ್ಪೋಟಿಸಿದ್ದಾರೆ. “ಕಾಯಕ ಯೋಗಿ ಬಸವಣ್ಣ ಮತ್ತು ಸ್ವಾಮಿ ವಿವೇಕಾನಂದರ ಸಾವು ಸಹಜವಾದುದ್ದಲ್ಲ ಅವರನ್ನು ಪಿತೂರಿ ಮಾಡಿ ಕೊಲೆ ಮಾಡಿಸಲಾಗಿದೆ” ಎಂದು ಭಗವಾನ್ ಹೇಳಿಕೆ ಕೊಟ್ಟಿದ್ದಾರೆ.

 

 

“ಮಹಿಷ ದಸರಾ ಪ್ರತಿಷ್ಠಾನ ಸಮಿತಿ ಮೈಸೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ” ಸ್ವಾಮಿ ವಿವೇಕಾನಂದರು ನಿಜವಾದ ಸನ್ಯಾಸಿಗಳು. ಅವರು ಬೌದ್ಧ ಧರ್ಮದ ವಿಚಾರಧಾರೆಗಳ ಕುರಿತು ಮಾತನಾಡಲಾರಂಭಿಸಿದ್ದರು. ಆ ಬಳಿಕವೇ ಅವರನ್ನು ಕತ್ತು ಹಿಸುಕಿ ಕೊಂದಿರುವ ಅನುಮಾನವಿದೆ.. ರಾತ್ರಿ ಚೆನ್ನಾಗಿದ್ದ ಆರೋಗ್ಯವಂತ ವ್ಯಕ್ರಿಯೊಬ್ಬರು ಬೆಳಿಗ್ಗೆ ಹೊತ್ತಿಗೆಲ್ಲಾ ಸಹಜವಾಗಿ ಸತ್ತರು ಎಂದರೆ ನಂಬೋದಕ್ಕೆ ಸಾಧ್ಯವೇ? ಯುವಕರಾಗಿದ್ದ ವಿವೇಕಾನಂದರು ಏಕಾಏಕಿ ಸಹಜ ಸಾವನ್ನಪ್ಪಲು ಸಾಧ್ಯವೇ ಇಲ್ಲಾ. ಖಂಡಿತವಾಗಿ ಅವರನ್ನು ಪಿತೂರಿ ಮಾಡಿ ಕೊಲ್ಲಲಾಗಿದೆ” ಎಂದು ಆರೋಪಿಸಿದರು.

“ಹಾಗೇಯೇ ಬಸವಣ್ಣನವರನ್ನೂ ಕೂಡ ಕೊಲೆ ಮಾಡಲಾಗಿದೆ, ಬಸವಣ್ಣನವರು ಹಿಂದೂ ಧರ್ಮವನ್ನು ಕಟುವಾಗಿ ಟೀಕಿಸಿ ಜಾತಿ ವ್ಯವಸ್ಥೆ ವಿರುದ್ಧ ಚಳುವಳಿ ಹುಟ್ಟು ಹಾಕಿದ್ದರು. ಜಾತಿವ್ಯವಸ್ಥೆಯ ವಿರುದ್ಧ ಚಳುವಳಿಯನ್ನೇ ಆರಂಭಿಸಿದ್ದರು. ಅವರ ವಚನ ಚಳವಳಿಯನ್ನು ಸಹಿಸದವರು ಅವರನ್ನು ಕೊಂದಿದ್ದಾರೆ. ಬಸವಣ್ಣನವರು ಕೂಡಲಸಂಗಮದಲ್ಲಿ ಐಕ್ಯರಾಗಿದ್ದಾರೆ ಎಂಬುವುದು ಶುದ್ಧ ಸುಳ್ಳು” ಎಂದು ಭಗವಾನ್ ವಾದಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top