ಸಮಾಚಾರ

ವೈರಲ್ ಆಯಿತು ಕರೀನಾ ಹಾಗೂ ಆಕೆಯ ಮಲಮಗಳ ಈ ಫೋಟೋ ,ನೀವು ನೋಡಿ

ಬಾಲಿವುಡ್ ಖ್ಯಾತ ನಟಿ ಕರೀನಾ ಅವರು ನಟ ಸೈಫ್ ಅಲಿಖಾನ್ ಅವರನ್ನು ಮದುವೆ ಆಗಿದ್ದು ಅವರಿಗೆ ತೈಮೂರ್ ಎಂಬ ಮಗನಿದ್ದು ಇದೆಲ್ಲ ನಿಮಗೆ ಗೊತ್ತಿರುವ ವಿಚಾರ. ಇನ್ನು ಸೈಫ್ ಅಲಿಖಾನ್ ಅವರ ಮೊದಲ ಪತ್ನಿಯ ಮಗಳಾದ ಸಾರಾ ಅವರ ಬಗ್ಗೆಯೂ ಕೂಡ ನೀವು ಕೇಳಿರುತ್ತೀರಿ. ಸಾರಾ ಅವರು ಕರೀನಾಗೆ ಮಲತಾಯಿ ಮಗಳಾಗಿದ್ದಾರೆ ಆದರೆ ಕರೀನಾ ಯಾವತ್ತೂ ಆ ಭಾವನೆಯಿಂದ ನೋಡಿಯೇ ಇಲ್ಲ. ಕರೀನಾ ಅವರು ಸಾರಾಳನ್ನು ಮಗಳಂತೆ ಪ್ರೀತಿ ವಾತ್ಸಲ್ಯದಿಂದ ಕಾಣುತ್ತಾರೆ.

ಸಾರಾ ಅಲಿಖಾನ್ ಅವರು ಶೀಘ್ರವೇ ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಾರಾ ಸುಂದರವಾಗಿ ಕಾಣಿಸಬೇಕೆಂದು ಕಾರಣಕ್ಕೆ ನಟಿ ಕರೀನಾ ಕಪೂರ್ ಖಾನ್ ಸಾರಾಗೆ ಸಹಾಯ ಮಾಡುತ್ತಿದ್ದಾರೆ. ಪ್ರಥಮ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಮಗಳಿಗೆ ಚಿಕ್ಕಮ್ಮ ಕರೀನಾ ಸಲಹೆಯನ್ನು, ಸಹಾಯ ಮಾಡ್ತಿದ್ದಾರೆ. ಇಷ್ಟೇ ಅಲ್ಲದೆ ಕರೀನಾ ಮೇಕಪ್ ಮೆನ್ ಸಾರಾಗೆ ಬಣ್ಣ ಬಳಿದಿದ್ದಾರೆ ಎನ್ನಲಾಗಿದೆ.

 

 

ಇವರಿಬ್ಬರ ನಡುವೆ ದಿನೇ ಬಾಂಧವ್ಯ ವೃದ್ಧಿಯಾಗ್ತಿದೆ. ಇತ್ತೀಚಿಗೆ ನಟಿ ಸೋಹಾ ಅಲಿಖಾನ್ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಸೈಫ್ ಮತ್ತು ಕರೀನಾ ದಂಪತಿ ಭಾಗವಹಿಸಿದ್ದರು. ಈ ಪಾರ್ಟಿಗೆ ಸೈಫ್ ಅಲಿಖಾನ್ ಮೊದಲ ಪತ್ನಿಯ ಮಗಳಾದ ಸಾರಾ ಕೂಡ ಆಗಮಿಸಿದ್ದರು. ಪಾರ್ಟಿ ಮುಗಿದ ಬಳಿಕ ಸೈಫ್ ಅಲಿಖಾನ್ ಹಾಗು ಕರೀನಾ ದಂಪತಿ ಕಾರ್ ತನಕ ಬಂದು ಸಾರಾಳನ್ನ ಬೀಳ್ಕೊಟ್ಟರು. ಸಾರಾ ಕಾರು ಹತ್ತುವ ಸಮಯದಲ್ಲಿ ಕರೀನಾ ಆಕೆಯನ್ನ ಬಿಗಿಯಾಗಿ ಅಪ್ಪಿಕೊಂಡು ಸುರಕ್ಷಿತವಾಗಿ ಮನೆ ತಲುಪುವಂತೆ ತಿಳಿಸಿದರು. ಸದ್ಯ ಸಾರಾ ಹಾಗು ಕರೀನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಾರಾ ಅಭಿನಯದ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನು ಕೆಲವೇ ತಿಂಗಳಲ್ಲಿ ಚಿತ್ರ ತೆರೆ ಮೇಲೆ ಬರಲಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top