ಸಮಾಚಾರ

ಅಂಬಿಯ ಬಗ್ಗೆ ಕಿಚ್ಚ ಸಖತ್ ತಮಾಷೆ ಮಾಡಿದ್ದೂ ಯಾಕ್ ಅಂತೆ ಗೊತ್ತಾ ,ನೀವೇ ನೋಡಿ

ರೆಬೆಲ್ ಸ್ಟಾರ್ ಅಂಬರೀಶ್ ಹಾಗು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಕಾರಣಕ್ಕೆ ಪ್ರಾರಂಭಕ್ಕೂ ಮುಂಚೆಯೇ ಸಾಕಷ್ಟು ಹೆಸರು ಮಾಡಿದ್ದ ಸಿನಿಮಾ `ಅಂಬಿ ನಿಂಗ್ ವಯಸ್ಸಾಯ್ತೋ’. ಬಹಳ ವರ್ಷಗಳ ನಂತರ ರೆಬೆಲ್ ಸ್ಟಾರ್ ಅಂಬರೀಷ್ ಅವರು ಪ್ರಧಾನ ಪಾತರದಲ್ಲಿ ಕಾಣಿಸಿಕೊಂಡಿರುವುದರಿಂದ ಸಿನಿಮಾ ಮೇಲೆ ಒಂದಷ್ಟು ಕುತೂಹಲಗಳು ಮನೆ ಮಾಡಿವೆ. ಈಗಾಗಲೇ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಬಿರುಸಿನಿಂದ ನಡೆಯುತ್ತಿವೆ.

ಇತ್ತೀಚಿಗೆ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಸುದ್ದಿಘೋಷ್ಠಿ ಹಮ್ಮಿಕೊಂಡಿದ್ದರು. ರೆಬೆಲ್ ಸ್ಟಾರ್ ಅಂಬರೀಷ್, ಕಿಚ್ಚ ಸುದೀಪ್ ಹಾಗು ಇನ್ನಿತರರು ಭಾಗವಹಿಸಿದರು. ಆಗ ಮೈಕ್ ಕೈಗೆತ್ತಿಕೊಂಡ ಕಿಚ್ಚ ಸುದೀಪ್ ” ಅಂಬರೀಷ್ ಅವರ ಹತ್ತಿರ ಶೂಟಿಂಗ್ ಮಾಡಿಸೋದು ಒಂದು ಸರ್ಕಸ್ ಆದರೆ ಸಾಂಗ್ ಮಾಡಿಸೋದು ಇನ್ನೊಂದು ಸರ್ಕಸ್. ಶೂಟಿಂಗ್ ಕರೀತೀವಿ ಅಂಥಾ ಆಗಾಗ ಮೀಸೆ ಬೋಳಿಸಿ ಬಿಡ್ತಾರೆ. ಎಂದು ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

 

 

ಅಲ್ಲೇ ಸುದೀಪ್ ಪಕ್ಕದಲ್ಲಿ ಕುಳಿತಿದ್ದ ಅಂಬರೀಷ್ ಅವರು ಕಿಚ್ಚನ ಮಾತು ಕೇಳಿ ನಕ್ಕರು. ನನ್ನ ಫೋನ್ ಕೂಡ ಅಂಬರೀಷ್ ಅವರು ರಿಸೀವ್ ಮಾಡಲ್ಲ ಎಂದು ಕಿಚ್ಚ ತಮಾಷೆ ಮಾಡಿದ್ದಾರೆ

ಕಿಚ್ಚ ಕ್ರಿಯೇಶನ್ಸ್ ಅರ್ಪಿಸಿ, ಕೆ.ಎಸ್.ಕೆ. ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ಕಿಚ್ಚನ ಶಿಷ್ಯ ಗುರುದತ್ ಗಾಣಿಗ ಎಂಬ 26ರ ಪೋರ ನಿರ್ದೇಶಿಸುತ್ತಿದ್ದಾನೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಬರುವ ಅಂಬಿಯವರ ಪ್ಲಾಶ್ ಬ್ಯಾಕ್ ಸನ್ನಿವೇಶದಲ್ಲಿ ಸುದೀಪ್ ಗೆ ಜೋಡಿಯಾಗಿ ಅಂದ್ರೆ ಸುಹಾಸಿನಿಯವರ ಯವ್ವನದ ಪಾತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ.ಆರಂಭದಿಂದಲೂ ಸಾಕಷ್ಟು ವಿಶೇಷತೆಗಳನ್ನು ಹೊತ್ತು ತರುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವು ಆದಷ್ಟು ಬೇಗನೇ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top