ಮನೋರಂಜನೆ

ಎಕ್ಲ್ಯೂಸಿವ್- KGF​ ಬಳಿಕ ಯಶ್​ ಮುಂದಿನ ಸಿನಿಮಾ ಯಾವುದು ಗೊತ್ತಾ?

ಕನ್ನಡದ ಯಶಸ್ವಿ ನಾಯಕ ನಟರುಗಳಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇದು ಪಕ್ಕಾ ಸಿಹಿ ಸುದ್ದಿ. ಸದ್ಯ ಕಳೆದೆರಡು ಬಹುನಿರೀಕ್ಷಿತ ಕೆಜಿಎಫ್ ಚಿತ್ರದಲ್ಲಿಯೇ ಬ್ಯುಸಿಯಾಗಿರುವ ಯಶ್ ಅದನ್ನು ಬಿಟ್ಟು ಬೇರೆ ಯಾವ ಸಿನಿಮಾಗಳತ್ತ ಮುಖಮಾಡಿಲ್ಲ. ಆದರೆ ಕೆಜಿಎಫ್ ಮುಗಿದ ಕೂಡಲೇ ಸಾಲು ಸಾಲು ಚಿತ್ರಗಲ್ಲಿ ಬ್ಯುಸಿಯಾಗಲಿದ್ದು ಈ ಮೂಲಕ ಕಳೆದೆರಡು ವರ್ಷಗಳಿಂದ ಯಾವುದೇ ಚಿತ್ರಗಳಿಲ್ಲದೆ ನಿರಾಸೆಗೊಂಡಿದ್ದ ತಮ್ಮ ಅಭಿಮಾನಿಗಳಿಗೆ ಸುಗ್ಗಿ ಸಂಭ್ರಮ ನೀಡುತ್ತಿದ್ದಾರೆ.

 

 

ಕೆಜಿಎಫ್ ಮುಗಿದ ಕೂಡಲೇ ಯಶ್ ಅವರು ಹರ್ಷ ನಿರ್ದೇಶನದ ‘ರಾಣಾ’, ಹಾಗೇ ರ್ಯಾಂಬೋ-2 ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲೂ ಮತ್ತು ಮಫ್ತಿ ಖ್ಯಾತಿಯ ನರ್ತನ್ ನಿರ್ದೇಶನದ ಚಿತ್ರವೊಂದರಲ್ಲೂ ನಟಿಸುತ್ತಾರೆ ಎಂಬ ಸುದ್ದಿಯಂತೂ ನಿಕ್ಕಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಈ ಮೂರು ಚಿತ್ರಗಳಲ್ಲಿ ಮೊದಲು ಯಾವ ಚಿತ್ರ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ.

ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ ಕೆಜಿಎಫ್ ಮುಗಿದ ತಕ್ಷಣ ಯಶ್ ಅನಿಲ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಅನಿಲ್ ಕುಮಾರ್ ಸಿನಿಮಾಗೆ ಯಶ್ ಸಹಿ ಹಾಕಿದ್ದು, ಅಧಿಕೃತವಾಗಿ ಟೈಟಲ್ ಘೋಷಣೆಯಾಗಲು ಕಾಯಲಾಗುತ್ತಿದೆ. ವಿಶೇಷ ಅಂದ್ರೆ ಈ ಹಿಂದೆ ರಾಜಾಹುಲಿ, ಕಿರಾತಕ ಸಿನಿಮಾಗಳಲ್ಲಿ ಮಾಡಿದ್ದಂತಹ ಮಂಡ್ಯದ ಹುಡ್ಗನ ಶೈಲಿಯ ಪಾತ್ರವನ್ನೇ ಈ ಹೊಸ ಚಿತ್ರದಲ್ಲೂ ಯಶ್ ಮಾಡಲಿದ್ದಾರಂತೆ.. ಈ ಹೊಸ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೆಟ್ಟೇರಲಿದೆ ಎನ್ನಲಾಗಿದ್ದು ಮುಹೂರ್ತದಂದೇ ಟೈಟಲ್ ಲಾಂಚ್ ಆಗಲಿದೆಯಂತೆ. ಚಿತ್ರಕ್ಕೆ ‘ಕಿರಾತಕ-2’ ಎಂದು ಹೆಸರಿಡುವ ಸಾಧ್ಯತೆಗಳಿವೆ

ಎಂದು ಅಂದಹಾಗೆ ಯಶ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟಿದ್ದೆ ಕಿರಾತಕ, ರಾಜಾಹುಲಿ, ಡ್ರಾಮಾದಂತಹ ಪಾತ್ರಗಳು. ಹಾಗಾಗಿ ಅದೇ ರೀತಿಯ ಪಾತ್ರದಲ್ಲಿ ಮತ್ತೊಮ್ಮೆ ಅವರು ಕಾಣಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಐದು ವರ್ಷಗಳ ಅಭಿಮಾನಿಗಳ ಆಸೆ ಈಡೇರುತ್ತಿದೆ. ಹರ್ಷ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದು ನರ್ತನ್ ಕೂಡ ಈಗಿನ್ನು ಕಥೆ ಸಿದ್ದಪಡಿಸುಪತ್ತಿರುವ ಹಿನ್ನೆಲೆಯಲ್ಲಿ ಯಶ್ ಅವರು ಅನಿಲ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top