ಮನೋರಂಜನೆ

ಈ ಕಾರಣಕ್ಕಾಗಿ ಪೂಜೆ ಮಾಡೋಕೆ ಹೋಗಲ್ವಂತೆ ಬಹುಬಾಷಾ ನಟಿ ಸಮಂತಾ.

ತನ್ನ ಸ್ನಿಗ್ಧ ಸೌಂದರ್ಯದಿಂದಲೇ ಭಾಷೆಗಳನ್ನು ಮೀರಿ ಅಭಿಮಾನಿ ಬಳಗ ಹೊಂದಿರುವಾಕೆ ಸಮಂತಾ ಅಕ್ಕಿನೇನಿ. ತೆಲುಗು, ತಮಿಳು ಸೇರಿದಂತೆ ಬಹುತೇಕ ಭಾಷೆಗಳಲ್ಲಿ ನಟಿಸಿ ಭಾರಿ ಹವಾ ಮೇಂಟೈನ್ ಮಾಡಿರುವ ಸ್ಯಾಮ್ ತನ್ನ ನಟನೆಯ ಖಾದರಿನ ಮೂಲಕವೇ ದೊಡ್ಡದೊಂದು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾಳೆ. ಕಳೆದ ವರ್ಷತಾನೆ ನಟ ನಾಗಚೈತನ್ಯನ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಮಂತಾ ಅತ್ತ ಸಂಸಾರ ಮತ್ತು ಸಿನಿಮಾ ಎರಡನ್ನೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ.. ಇಂಥ ಸಮಂತಾ ತಮ್ಮ ಟ್ವಿಟರ್ ಮೂಲಕವೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು ಕೆಲವೊಂದು ವಿಶಿಷ್ಟ ಸನಗತಿಗಳನ್ನು ದಾಖಲಿಸುತ್ತಿರುತ್ತಾಳೆ. ಅದರಂತೆ ಇತ್ತೀಚಿಗಿಗೆ ಸಮಂತಾ ಮಾಡಿರುವ ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ.

 

 

ಅಭಿಮಾನಿಯೊಬ್ಬರು ಮಾಡಿರುವ ಟ್ವೀಟ್ಅನ್ನು ಉಲ್ಲೇಖಿಸಿ ಈ ಕಾರಣಕ್ಕಾಗಿಯೇ ಸಿನಿಮಾಗಳ ಮೂಹೂರ್ತ ಪೂಜೆಗಳಿಗೆ ಹೋಗುವುದಿಲ್ಲ ಎಂದು ಸಮಂತಾ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾಳೆ.. ಅಭಿಮಾನಿಯೊಬ್ಬರು ಚಿತ್ರವೊಂದರ ಮುಹೂರ್ತದ ಸಂಧರ್ಭದಲ್ಲಿ ತೆಂಗಿನ ಕಾಯಿ ಹೊಡೆಯಲು ಸಮಂತಾ ಹೆಣಗಾಡುತ್ತಿರುವ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಆ ವಿಡಿಯೋವನ್ನು ಕಂಡು ಪ್ರತಿಕ್ರಿಯಿಸಿದ್ದ ಸಮಂತಾ “ಇದೆ ನನ್ನ ಕತೆ ಈ ಕಾರಣಕ್ಕಾಗಿಯೇ ನಾನು ಪೂಜೆ ಮಾಡಲು ಹೋಗುವುದಿಲ್ಲ” ಎಂದು ರಿಪ್ಲೆ ಮಾಡಿದ್ದಾಳೆ.

ನಾಗಚೈತನ್ಯ ಮತ್ತು ಸಮಂತಾ ಮದುವೆಯ ನಂತರ ಮೊದಲ ಬಾರಿ ಒಟ್ಟಾಗಿ ನಟಿಸುತ್ತಿದ್ದಾರಲ್ಲಾ, ಆ ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೇ ಹೈದರಾಬಾದ್ ನಲ್ಲಿ ನೆರವೇರಿತ್ತು. ಪೂಜೆ ವೇಳೆ ಅರ್ಚಕನು ಸಮಂತಾಳಿಗೆ ತೆಂಗಿನಕಾಯಿ ಒಡೆಯಲು ಹೇಳಿದರು. ಅರ್ಚಕ ಹೇಳಿದಂತೆ ತೆಂಗಿನ ಕಾಯಿ ಹೊಡೆಯಲು ಮುನ್ನುಗ್ಗುದ ಸಮಂತಾ ಎಷ್ಟೇ ಭಾರಿ ಹೊಡೆದರೂ ತೆಂಗಿನ ಕಾಯಿ ಎರಡು ಭಾಗ ಆಗಲೇ ಇಲ್ಲ. ಕೊನೆಗೆ ಸಮಂತಾಳ ಪರದಾಟ ನೋಡಲಾಗದೆ ಅರ್ಚಕನೇ ತೆಂಗಿನಕಾಯಿ ಹೊಡೆದುಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top