ಮನೋರಂಜನೆ

‘ಚಕ್ರವರ್ತಿ’ ನಂತರ ಕಾಣೆಯಾಗಿರುವ ದೀಪ ಸನ್ನಿಧಿ ಈಗ ಏನ್ ಮಾಡ್ತಿದ್ದಾಳೆ ಗೊತ್ತಾ?

ದರ್ಶನ್ ಅಭಿನಯದ ‘ಸಾರಥಿ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಆ ಮೂಲಕವೇ ಪಡ್ಡೆಹುಡುಗರ ಹೃದಯಕ್ಕೆ ಕಣ್ಣ ಹಾಕಿದ್ದಾಕೆ ದೀಪ ಸನ್ನಿದಿ. ಅತ್ಯಂತ ಕಡಿಮೆ ಅವಧಿಯಲ್ಲೇ ದರ್ಶನ್, ಪುನೀತ್, ಗಣೇಶ್ ರಂತಹ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದ ದೀಪಾ ಒಂದೆರೆಡು ವರ್ಷಗಳ ಕಾಲ ತೆರೆಮರೆಗೆ ಸರಿದಿದ್ದರು. ಸ್ಟಾರ್ ಹೀರೋಯಿನ್ ಆಗಲು ಬೇಕಿದ್ದ ಅಂದ, ಚೆಂದ ಒಂದು ರೆಂಜಿಗಿನ ನಟನೆ ಹೀಗೆ ಎಲ್ಲಾ ಯೋಗ್ಯತೆಗಳಿದ್ದರೂ ದೀಪಾ ಸನ್ನಿಧಿ ಏನಾದ್ರು ಅನ್ನೋ ಪ್ರಶ್ನೆ ಸಿನಿಪ್ರಿಯರನ್ನು ಆಗಾಗ ಕಾಡುತ್ತಲೇ ಇತ್ತು. ಈ ಹುಡುಗಿಯ ಸಿನಿಮಾಗಳನ್ನ ನೆನಪಿಸಿಕೊಳ್ಳುತ್ತಲೇ ಕಾಣೆಯಾಗಿರೋದರ ಬಗ್ಗೆ ಮರುಗುತ್ತಲೂ ಇದ್ದರು. ಹಾಗಾದ ಕೆಲವೇ ದಿನಗಳಲ್ಲಿ ಈ ಬೆಡಗಿ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರಲು ಶುರುವಾಗಿತ್ತು.. ಆದರೆ ಅವುಗಳಲ್ಲಿ ಬಹುಪಾಲು ಕೇವಲ ಗಾಸಿಪ್ ಆಗಿಯೇ ಉಳಿದುಕೊಳ್ಳುತ್ತಿದ್ದವು..

 

 

ಈ ಮಧ್ಯೆ ಕಳೆದ ವರ್ಷ ಮತ್ತೆ ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡಿದ್ದ ದೀಪಾ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಈ ಭಾರಿ ದೀಪಾ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುತ್ತಾರೆ ಎಂಬ ಭರವಸೆಯನ್ನು ಅವರ ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದರೆ ಚಕ್ರವರ್ತಿ‘ ಸಿನಿಮಾವೇ ಕೊನೆ. ಆದಾಗಿ ಒಂದು ವರ್ಷವೇ ಕಳೆದರೂ ದೀಪಾ ಮತ್ತೊಂದು ಸಿನಿಮಾದಲ್ಲಿ ನಟಿಸಿಲ್ಲ. ಅಷ್ಟೇ ಏಕೆ ಸದ್ಯ ಆಕೆ ಎಲ್ಲಿದ್ದಾರೆ? ಏನ್​ ಮಾಡ್ತಿದ್ದಾರೆ? ಎಂಬ ಮಾಹಿತಿಯೂ ಇಲ್ಲ… ಹೀಗೆ ಇದ್ದಕ್ಕಿಂದಂತೆ ಕಾಣೆಯಾಗಿರುವ ನಟಿಯ ಬಗ್ಗೆ ಅಭಿಮಾನಿಗಳು ಮತ್ತೆ ಆತಂಕಕ್ಕೀಡಾಗಿದ್ದಾರೇ.

ಇತರೆ ನಟಿಯರ ರೀತಿ ಫೇಸ್ಬುಕ್ ಟ್ವಿಟರ್’ಗಳಲ್ಲಿಯೂ ಅಷ್ಟೇನೂ ಆಕ್ಟಿವ್ ಆಗಿರದೆ ಸಂಪೂರ್ಣವಾಗಿ ಮಾಯವಾದಂತಿರುವ ದೀಪಾ ಸದ್ಯ ಅರ್ಧಕ್ಕೆ ನಿಂತಿದ್ದ ತನ್ನ ವಿದ್ಯಾಭ್ಯಾಸವನ್ನು ಪೂರ್ತಿ ಮಾಡುವಲ್ಲಿ ತಲ್ಲೀನಳಾಗಿದ್ದಾಳಂತೆ. ಕಳೆದೊಂದು ವರ್ಷದಿಂದ ದೂರಶಿಕ್ಷಣದ ಮೂಲಕ ಇಂಗ್ಲಿಷ್ ಸಾಹಿತ್ಯ ಓದುವಿಕೆಯಲ್ಲಿ ತೊಡಗಿಸಿಕೊಂಡಿರೋ ದೀಪಾಗೆ ಆಫರ್’ಗಳೇನು ಕಮ್ಮಿ ಆಗಿಲ್ಲವಂತೆ. ಆದರೆ ಬಂದಿರೋ ರಾಶಿ ರಾಶಿ ಕತೆಗಳಲ್ಲಿ ಯಾವುದು ಕೂಡ ಇಷ್ಟವಾಗದ ಕಾರಣ ದೀಪಾ ಸಿನಿಮಾವನ್ನು ಒಪ್ಪಿಕೊಂಡಿಲ್ವಂತೆ.. ತಮಗೆ ಇಷ್ಟವಾಗುವ ಕತೆ ಸಿಕ್ಕ ಕೂಡಲೇ ಮತ್ತೆ ಅಭಿನಯ ಮಾಡುತ್ತೇನೆ ಎನ್ನುತ್ತಾರೆ.. ಒಟ್ಟಿನಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳದೆ ಆದಷ್ಟು ಬೇಗ ಸಿನಿಮಾರಂಗಕ್ಕೆ ಹಿಂದಿರುಗಲಿ ಎಂಬುದೇ ಅವರ ಅಭಿಮಾನಿಗಳ ಬಯಕೆ, ಆ ಆಸೆ ಈಡೇರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top