ಮನೋರಂಜನೆ

ಬಿಗ್‌ಬಾಸ್‌ ಹುಚ್ಚು ಹಿಡಿಸಿಕೊಂಡ ಖರಾಬ್ ಸಿಂಗರ್ ತುಳಸಿ ಪ್ರಸಾದ್.. ನೀವೇ ಕೇಳಿ ಸಕತ್ ಮಜಾ ಇದೆ.

ತನ್ನ ಕರ್ಕಶ ಧ್ವನಿಯ ಮೂಲಕ ಕತ್ತೆಕಿರುಬಗಳೇ ಕಂಗಾಲಾಗುವಂತೆ ಕೆಟ್ಟದಾಗಿ ಹಾಡಿ ಕರ್ನಾಟಕದ ಜನರ ಕಿವಿಯಲ್ಲಿ ರಕ್ತದ ಭಾಗ್ಯ ಕರುಣಿಸಿರುವವನು ‘ಕರಾಬ್ ಸಿಂಗರ್’ ತುಳಸಿ ಪ್ರಸಾದ್.. ಹಾಡುಗಾರಿಕೆಯ ಗಂಧ ಗಾಳಿಯೂ ಗೊತ್ತಿಲ್ಲದ ಈ ತಿಕ್ಕಲು ಆಸಾಮಿ ಪ್ರಚಾರದ ಉಮೇದಿ ಬಿದ್ದೋ ಏನೋ? ಖುದ್ದು ಆತನಿಗೇ ವ್ಯಾಕರಿಗೆಯಾಗುವಂತೆ ತಲೆಕೆಟ್ಟವನ ಹಾಗೆ ಹಾಡುತ್ತಾ, ಜನರ ಉಗಿತಗಳನ್ನೂ ಎಂಜಾಯ್ ಮಾಡುವ ಸ್ಥಿತಿಗೆ ತಲುಪಿದ್ದಾನೆ.. ಸುಮಧುರ ಹಾಡುಗಳನ್ನು ಅತೀ ಕೆಟ್ಟವಾಗಿ ಹಾಡುತ್ತಾ ಹಾಳು ಮಾಡುತ್ತಿದ್ದಾನೆ ಎಂಬೋ ಗಂಭೀರ ಆರೋಪ ಈತನ ಮೇಲೆ ಚಾಲ್ತಿಯಲ್ಲಿದೆ.

 

 

ಇಂಥಾ ಗಾನಗಂಧರ್ವನಿಗೆ ಇದೀಗ ಬಿಗ್’ಬಾಸ್ ಹುಚ್ಚು ಹಿಡಿದಿದೆಯಂತೆ. ತಾನು ಸಕತ್ ಫೇಮಸ್ ಆಗಿದ್ದೇನೆ, ಈ ಭಾರಿ ನನ್ನನ್ನು ಬಿಗ್ ಬಾಸ್ ಶೋಗೆ ಆಯ್ಕೆ ಮಾಡಿಕೊಳ್ಳುತ್ತಾರೆ, ಎಂಬ ಭ್ರಮೆಯಲ್ಲೇ ಬದುಕುತ್ತಿರುವ ತುಳಸಿ ಪ್ರಸಾದ್ ಊರೆಲ್ಲಾ ಬಿಲ್ಡಪ್ ಕೊಟ್ಟುಕೊಂಡು ಸುತ್ತುತ್ತಿದ್ದಾನಂತೆ.. ಈತನ ಹುಚ್ಚಾಟಗಳನ್ನೇ ನೋಡಿ ಮಜಾ ತಗೋಳೋ ನೆಟ್ಟಿಗರು ಒಳ್ಳೆ ಮಿಕಾ ಸಿಕ್ಕಾ ಎಂದೇಳಿ ಕರೆ ಮಾಡಿ ಆತನನ್ನು ಥರಥವಾಗಿ ಬಕ್ರ ಮಾಡುತ್ತಿದ್ದಾರಂತೆ.. ಇದನ್ನೇ ನಿಜವೆಂದು ತಿಳಿದುಕೊಂಡಿರೋ ತುಳಸಿ ಪ್ರಸಾದ್ ಅವರ ಮುಂದೆ ಈಗ ನಾನು ಯಾವ ಸೆಲೆಬ್ರೆಟಿಗಳಿಗೇನು ಎನ್ನುವ ರೇಂಜಿಗೆ ಬಿಲ್ಡಪ್ ಕೊಡಲಾರಂಭಿಸಿದ್ದಾನಂತೆ.

ತುಳಸಿ ಪ್ರಸಾದನ ಕಾಲೆಳೆಯಲೆಂದೇ ಕೆಲ ತುಂಡ್ ಹೈಕ್ಳು ಫೋನ್ ಮಾಡಿ ಯಾಮಾರಿಸುತ್ತಿದ್ದಾರೆ. “ಅಣ್ಣಾ ನಾನು ನಿಮ್ಮ ಅಭಿಮಾನಿಗಳು ಕಣಣ್ಣಾ, ಶಿವಮೊಗ್ಗದಲ್ಲಿ ನಿಮ್ಮ ಹೆಸರಲ್ಲಿ ಅಭಿಮಾನಿಗಳ ಸಂಘ ಕಟ್ಟುತ್ತಿದ್ದೇವೆ, ಅದರ ಉದ್ಘಾಟನೆಗೆ ನೀವು ಬರಬೇಕು” ಅಂತ ಕರೆ ಮಾಡಿ ಕೇಳಿದ್ದಾರೆ.. ಇದನ್ನು ನಿಜವೆಂದುಕೊಂಡ ತುಳಸಿ ಅಣ್ಣ “ನಾನು ಬಿಗ್ ಬಾಸ್ ಗೆ ಹೋಗ್ತಿದ್ದೀನಿ, ಅಲ್ಲಿಗೆಲ್ಲಾ ಬರೋದಕ್ಕೆ ನನಗೆ ಟೈಮ್ ಇಲ್ಲ, ಶಿವಮೊಗ್ಗಕ್ಕೆ ಬರೋವಾಗ ದಾರಿ ಮದ್ಯದಲ್ಲಿ ಬಿಗ್’ಬಾಸ್’ನವರು ಫೋನ್ ಮಾಡಿದ್ರೆ ಏನ್ ಮಾಡೋದು? ” ಎಂದಿದ್ದಾನೆ.. ಅದು ಅಷ್ಟೇ ಅಲ್ಲದೇ “ಈಗ ನಾನು ಸೆಲೆಬ್ರೆಟಿಯಾ ರೀತಿಯಂತೆ, ಯಾರಿಗೇನು ಕಡಿಮೆಯಿಲ್ಲ, ಹೋದಲೆಲ್ಲಾ ಜನ ಸೆಲ್ಫಿ ತಗೋತಾರೆ. ಒಂದು ವೇಳೆ ನಾನು ನಿಮ್ಮ ಕಾರ್ಯಕ್ರಮಕ್ಕೆ ಬರಬೇಕಂದ್ರೆ ಮೀಡಿಯಾ ಮತ್ತು ಸೆಕ್ಯುರಿಟಿ ಇರಲೇಬೇಕು ” ಎಂದು ಹೇಳಿಕೊಂಡಿದ್ದಾನೆ.

ಅಷ್ಟಕ್ಕೂ ಈ ಎಲ್ಲಾ ವಿಚಾರಗಳನ್ನು ನಾವು ಹೇಳುತ್ತಿರೋದಲ್ಲ ಸ್ವತಃ ಅವನದ್ದೇ ಒಂದು ಮಜವಾಗಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅದನ್ನು ನೀವು ಕೂಡ ಒಮ್ಮೆ ಕೇಳಿ ಆನಂದಿಸಿ.

ಉಳಿದಂತೆ ಈ ಸಲದ ಬಿಗ್​ಬಾಸ್​ಗೆ ಸ್ಪರ್ಧಿಯಾಗಿ ತುಳಸಿ ಪ್ರಸಾದ್​ ಆಯ್ಕೆ ಆಗುತ್ತಾರೆ ಎಂದು ಕೂಡ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top