ಮನೋರಂಜನೆ

ಅನಾಥ ಹೆಣಕ್ಕೆ ಅಂತ್ಯಸಂಸ್ಕಾರ ಮಾಡಿ ಮನುಷ್ಯತ್ವ ಮೆರೆದ ಶಾಸಕ.

ಜೀವಂತಾಗಿರುವ ಅಂತರನ್ನೇ ಕ್ಯಾರೇ ಅನ್ನದ ಈ ಕಾಲದಲ್ಲಿ ನಿರ್ಗತಿಕ ಶವವೊಂದಕ್ಕೆ ಅಂತ್ಯ ಸಂಸ್ಕಾರ ಮಾಡುವ ಮೂಲಕ ಒಡಿಶಾದ ಶಾಸಕನ ಕುಟುಂಬ ಮನುಷ್ಯತ್ವ ಮೆರೆದಿದ್ದಾರೆ.. ಸಮುದಾಯದಿಂದ ಬಹಿಷ್ಕರಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಆದರೆ ಮಹಿಳೆಯ ಅಂತ್ಯ ಸಂಸ್ಕಾರ ಮಾಡಲು ಊರಿನ ಮಂದಿ ಹಿಂದುಮುಂದು ನೋಡುತ್ತಿದ್ದರು ಈ ವೇಳೆ ಶಾಸಕರೊಬ್ಬರು ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

 

 

ಶನಿವಾರ ಬಿಜು ಜನತಾ ದಳದ(ಬಿಜೆಡಿ) ಪಕ್ಷದ ರಮೇಶ್​ ಪಟುವಾ ಅವರ ಪುತ್ರ ಹಾಗೂ ಸೋದರ ಅಳಿಯ ಮುಂದೆ ಬಂದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಹಿಳೆಗೆ ಸಾವಿನಲ್ಲೂ ಗೌರವ ಸೂಚಿಸುವ ಸಲುವಾಗಿ ತಾವೇ ಸ್ಟ್ರೆಚರ್​ನಲ್ಲಿ ಮಹಿಳೆಯ ದೇಹವನ್ನು ಕೊಂಡೊಯ್ದು ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಗುಂಡಿ ತೋಡಲು ಮಾತ್ರ ಕೆಲ ವ್ಯಕ್ತಿಗಳು ಸಹಾಯ ಮಾಡಿದರು ಎನ್ನಲಾಗಿದೆ.

ಸಮುದಾಯದಿಂದ ಬಹಿಷ್ಕೃತಗೊಂಡಿದ್ದ ಮಹಿಳೆ ಆಕಸ್ಮಿಕವಾಗಿ ಮರಣ ಹೊಂದಿದ್ದರು, ಆದರೆ ಸಾವಿನಲ್ಲಿ ಮಾನವೀಯತೆ ಮೆರೆಯಬೇಕಿದ್ದ ಜನರು ಆಕೆಯ ಅಂತ್ಯಸಂಸ್ಕಾರಕ್ಕೆ ಯಾರು ಮುಂದಾಗದೇ ಜಾತಿ, ನಂಬಿಕೆ, ಭಯದಿಂದ ದೂರ ಉಳಿದಿದ್ದರು. ಈ ವಿಚಾರ ತಿಳಿದ ಶಾಸಕ ರಮೇಶ್ ಮೃತದೇಹವನ್ನು ಕೊಂಡೊಯ್ದು ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಕೆಲ ವ್ಯಕ್ತಿಗಳ ಸಹಾಯ ಪಡೆದು ಗುಂಡಿ ತೊಡಿಸಿ ಹೆಣವನ್ನು ಊತಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ ಆ ಗ್ರಾಮ ರಮೇಶ್ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರೋದಿಲ್ಲ, ಹೀಗಿದ್ದರೂ ಶಾಸ್ತ್ರೋಕ್ತವಾಗಿ ಹೆಣಕ್ಕೆ ಗತಿ ಕಾಣಿಸಿದ ಶಾಸಕನ ನಡೆ ಇದೀಗ ದೇಶಾದ್ಯಂತ ಮೆಚ್ಚುಗೆಗೆ ಕಾರಣವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top