ಮನೋರಂಜನೆ

ಬಿಗ್​​​ಬಾಸ್ ಗೊಂಬೆ ನಿವೇದಿತಾ ಗೌಡ ಆತ್ಮಹತ್ಯೆ ಮಾಡಿಕೊಳ್ಳೋ ಮನಸ್ಸು ಮಾಡಿದ್ದೇಕೆ?

ಪಕ್ಕಾ ಕನ್ನಡಿಗ ಕುಟುಂಬದಿಂದ ಬಂದು ಅದರಲ್ಲೂ ಮೈಸೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ಬ್ರಿಟನ್ ಸಾಮ್ರಾಜ್ಯದಿಂದ ತಪ್ಪಿಸಿಕೊಂಡು ಬಂದ ಇಂಗ್ಲಿಶ್ ರಾಣಿಯಂತೆ ತಾನು ಮಾತಾಡಿದ್ದು ಕನ್ನಡವೋ ಇಂಗ್ಲಿಶೋ ಎಂಬ ಬಗ್ಗೆ ಖುದ್ದು ಆಕೆಗೇ ಅನುಮಾನ ಮೂಡುವಂತೆ, ಚಿತ್ರ-ವಿಚಿತ್ರವಾಗಿ ನುಲಿಯುತ್ತ ಬಿಗ್‌ಬಾಸ್-5 ಶೋದ ಪ್ರಮುಖ ಆಕರ್ಷಣೆಯಾಗಿದ್ದಾಕೆ ನಿವೇದಿತಾ ಗೌಡ. ಇಂತಹ ನಿವೇದಿತಾ ಗೌಡ್ಡಾ ಉರ್ಫ್ ಬೊಂಬೆ ಆತ್ಮಹತ್ಯೆ ಮಾಡಿಕೊಳ್ಳೋ ಕಠಿಣ ಮನಸ್ಸು ಮಾಡಿದ್ದಳಂತೆ.. ಅಷ್ಟಕ್ಕೂ ಆತ್ಮಹತ್ಯೆ ಮಾಡಿಕೊಳ್ಳೋವಂತ ಘನಂದಾರಿ ಕೆಲಸ ನಿವ್ವಿ ಏನ್ ಮಾಡುದ್ಲು ಅಂತೀರಾ? ಮುಂದೆ ಓದಿ.

 

 

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕಿಕಿ ಡ್ಯಾನ್ಸ್ ಚಾಲೆಂಜನ್ನು ನಿವೇದಿತಾ ಕೂಡ ಸ್ವೀಕರಿಸಿದ್ದಳಲ್ಲಾ ಅದು ಇದು ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು.. ಅಪಾಯಕಾರಿ ಅಂತ ಗೊತ್ತಿದ್ದರೂ, ಪೊಲೀಸರು ನಿರ್ಬಂಧ ಹೇಳಿದ್ದರೂ ಅದನ್ನು ಲೆಕ್ಕಿಸದೆ ‘ಕಿಕಿ ಡಾನ್ಸ್’ ಮಾಡುವ ಮೂಲಕ ನಿವೇದಿತಾ ಯುವಜನರನ್ನು ಅಪಾಯದ ಕಡೆಗೆ ಪ್ರಚೋದಿಸಿದ್ದಾರೆ ಎಂಬಂತ ವ್ಯಾಪಕದ ಮಾತುಗಳು ನಿವ್ವಿ ವಿರುದ್ಧ ಕೇಳಿಬಂದಿತ್ತು.. ಕೆಲವರು ಆಕೆ ವಿರುದ್ಧ ಪೊಲೀಸ್ ದೂರನ್ನು ದಾಖಲಿಸಿದ್ದರು..ಇವೆಲ್ಲವನ್ನೂ ನೋಡಿ ಮಾನಸಿಕ ಕುಗ್ಗಿರುವ ನಿವೇದಿತಾ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾಳೆ.

ಇದು ತಪ್ಪು ಅಂತ ನನಗೆ ಗೊತ್ತಿರಲಿಲ್ಲ, ಒಂದು ವೇಳೆ ಕೀಕೀ ಡ್ಯಾನ್ಸ್ ವಿಡಿಯೋ ಅಪಲೋಡ್ ಮಾಡ್ತಿರಲಿಲ್ಲ., ಆದರೆ ಇದರ ಪರಿಣಾಮ ಆಮೇಲೆ ಗೊತ್ತಾಯ್ತು., ನಾನೇನೋ ದೊಡ್ಡ ಅಪರಾಧ ಮಾಡಿಬಿಟ್ಟೆನೇನೋ ಎಂಬ ರೀತಿ ನನ್ನನ್ನ ಬಿಂಬಿಸುತ್ತಿದ್ದೀರ. ಇದನೆಲ್ಲಾ ನೋಡಿ ಸತ್ತು ಹೋಗೋಣ ಅನಿಸಿಬಿಟ್ಟಿತ್ತು. ಸೂಸೈಡ್ ಮಾಡಿಕೊಳ್ಳೋ ಆಲೋಚನೆಗಳು ಮನಸ್ಸಿಗೆ ಬಂದಿತ್ತು. ನಾನು ಕಿಕಿ ಡಾನ್ಸ್ ಮಾಡಿರೋದ್ರಿಂದ ಬೇರೆ ಜನರಿಗೆ ತೊಂದರೆಯಾಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದೀರಲ್ಲಾ, ನನಗೆ ಕೊಡುತ್ತಿರೋ ಟಾರ್ಚರ್’ನಿಂದ ಆಗಿರೋ ಒತ್ತಡದಲ್ಲಿ ನಾನೇ ಏನಾದರೂ ಮಾಡಿಕೊಂಡರೆ ನೀವು ಹೊಣೆಯಾಗುತ್ತೀರಾ” ಎಂದು ಪ್ರಶ್ನಿಸಿ ಕಣ್ಣೀರು ಸುರಿಸಿದ್ದಾಳೆ.

ಒಟ್ಟಿನಲ್ಲಿ ಏನೋ ಮಾಡಲಾಗಿ ಇನ್ನೇನೋ ಮಾಡಿಕೊಂಡಿರುವ ಎಳಸು ಹುಡುಗಿ ನಿವೇದಿತಾ ಇನ್ನಾದರೂ ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಬೇಕಿದೆ. ಅಲ್ಲದೆ ಇಂಥಾ ಸಣ್ಣಪುಟ್ಟ ವಿಚಾರಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳೋ ಯೋಚನೆ ಮಾಡೋದನ್ನ ಬಿಡಲಿ ಎನ್ನುವುದು ಪ್ರಜ್ಞಾವಂತ ಜನರ ಆಶಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top